ನಿಮ್ಮ ಮನೆಯ ಮುಂದೆ ಹಸು ಬಂದು ನಿಂತರೆ ಏನಾಗುತ್ತೆ ಗೊತ್ತಾ?

0 18,960

ಮನೆಯ ಮುಂದೆ ಹಸುಗಳು ತಾನಾಗಿ ಬಂದು ನಿಂತರೆ ಒಳ್ಳೆಯದು ತುಂಬಾ ಒಳ್ಳೆಯದು, ಶುಭ ಸೂಚನೆ. ಕಾಡುತ್ತಿರುವ ಕಷ್ಟಗಳನೆಲ್ಲ ನಿವಾರಣೆ ಮಾಡುತ್ತದೆ.  ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ಹಿಂದೂ ಸಂಸ್ಕೃತಿ  ಪ್ರಕಾರ ಗೋ ಪೂಜೆಯನ್ನು ಮಾಡುತ್ತಾರೆ ವಿವಿಧ ಜನರು ವಿವಿಧ ರೀತಿಯಲ್ಲಿ  ಗೋ ಪೂಜೆಯನ್ನ ಮಾಡುತ್ತಾರೆ. ಗೋಮಾತೆ  ಎಂದರೆ ಕಾಮಧೇನು. ಗೋಮಾತೆಯನ್ನು ಪೂಜೆ ಮಾಡಿದರೆ ಸಕಲ ದೇವರುಗಳಿಗೆ ಪೂಜೆ ಮಾಡಿದಂತೆ ಆಗುತ್ತದೆ. ಏಕೆಂದರೆ ಗೋವಿನ ಎಲ್ಲಾ ಭಾಗಗಳಲ್ಲಿ ಕೋಟ್ಯಾನುಕೋಟಿ ದೇವತೆಗಳು ಇರುತ್ತವೆ ಮೂಕ ಪ್ರಾಣಿಯಾಗಿರು ಶ್ವಾನ ಆಗಲಿ ಗೋವಾಗಲಿ ದೇವರ ಪ್ರತಿರೂಪ ಅದಕ್ಕೆ ಆಹಾರವನ್ನು ತಿನ್ನಿಸಬೇಕು ಏಕೆಂದರೆ ಇದರಲ್ಲಿ ಇರುವಂತಹ ದೇವತೆಗಳು ನಾವು ಹುಡುಕಿದರೂ ಸಿಗುವುದಿಲ್ಲ. ಯಾವುದೇ ದೇವರಿಗೆ ನೈವೇದ್ಯಕ್ಕಾಗಿ ಇಟ್ಟಂತಹ ಪ್ರಸಾದವನ್ನು ನಾವು ತಿನ್ನುತ್ತೇವೇ ಹೊರತು ದೇವರು ತಿನ್ನುವುದಿಲ್ಲ.

ಆದರೆ ಕಾಮಧೇನುವಿಗೆ  ಪ್ರಸಾದವನ್ನು ನೈವೇದ್ಯಕ್ಕಾಗಿ  ಇಟ್ಟರೆ  ದೇವರ ರೂಪದಲ್ಲಿ ಇರುವಂತಹ ಹಸುಗಳು ಅದನ್ನ ಸ್ವೀಕರಿಸುತ್ತವೆ.  ಹೀಗಾಗಿ ಮೂಕ ಪ್ರಾಣಿಗಳಾದ ಹಸು ಅಥವಾ ಶ್ವಾನಗಳಿಗೆ ನೀಡಿದರೆ ದೇವತೆಗಳು ಸ್ವೀಕರಿಸಿದ  ಹಾಗೆ ಆಗುತ್ತದೆ. ಹಾಗಾಗಿ ಹಸುಗಳು ಮನೆ ಬಾಗಿಲಲ್ಲಿ ಬಂದು ನಿಂತರೆ ಅದೃಷ್ಟದ ಬಾಗಿಲು ತೆರೆದಂತೆ ಎಂಬುದನ್ನ ನಾವು ಕಾಣುತ್ತೇವೆ.  ಹಲವಾರು ಹಳ್ಳಿಗಳಲ್ಲಿ ಗೋಪೂಜೆಯನ್ನು ವಿವಿಧ ರೀತಿಯಲ್ಲಿ  ಮಾಡುತ್ತಾರೆ. ಅದು ತುಂಬಾ ಅದ್ಭುತವಾಗಿ ಮೂಡಿ ಬರುತ್ತದೆ. 

ಗೋವಿನ ಕೊಂಬೆನಲ್ಲಿ ಶಿವ ಪಾರ್ವತಿಯರು ನೆಲೆಯಾಗಿರುತ್ತಾನೆ.  ಗೋವಿನ ಕಣ್ಣಿನ ಭಾಗದಲ್ಲಿ ಸೂರ್ಯ ಚಂದ್ರರು ನೆಲೆಯಾಗಿರುತ್ತಾರೆ. ಹೀಗೆ ಪ್ರತ್ಯೇಕವಾಗಿ ಒಂದೊಂದು ಭಾಗಗಳಲ್ಲಿ ಒಂದೊಂದು ದೇವರು ನೆಲೆಯಾಗಿರುತ್ತರೆ. ಮನೆಯ ಬಾಗಿಲಿಗೆ ಬಂದ ಗೋವಿಗೆ ಪ್ರೀತಿಯಿಂದ ಆಹಾರವನ್ನು ತಿನ್ನಿಸಿ ಪೊಜ್ಜೆಯನ್ನ ಸಲ್ಲಿಸಿದರೆ ತುಂಬಾ ಒಳ್ಳೆಯದು. ಮುಕ್ಕೋಟಿ ದೇವರಿಗೆ ಕೈ ಮುಗಿಯುದುದು ಒಂದೇ, ಈ ಕಾಮಧೇನುವಿನ ಕೈ ಮುಗಿಯುವುದು ಒಂದೇ ಆಗಿದೆ.

ಹಾಗೆ ಒಂದು ಬಕೆಟಿನಲ್ಲಿ ನೀರನ್ನು ನೀಡುವುದು ಒಳ್ಳೆಯದು. ಗೋವು ಮನೆಮುಂದೆ ಬಂದರೆ ಏನಾದರೂ ತಿಂಡಿ ಕೊಟ್ಟು ಕಳುಹಿಸಿ, ಹಾಗೆ ಕಳುಹಿಸಬಾರದು. ಆಗ ಆ ಗೋವು ಸಂತೃಪ್ತಿಯಿಂದ ಹೋದರೆ ತುಂಬಾ ಒಳ್ಳೆಯ ಫಲ ದೊರಕುತ್ತದೆ ಮತ್ತು ಒಳ್ಳೆಯದಾಗುತ್ತದೆ. ಹಾಗೆಯೇ ಗೋಮೂತ್ರ ತುಂಬಾ ಶ್ರೇಷ್ಠವಾದದ್ದು ಮನೆಯನ್ನು ಶುದ್ಧಿಗೊಳಿಸಲು, ಪೂಜೆ ಪುನಸ್ಕಾರಕ್ಕೆ, ಗ್ರಹಣ ಹಿಡಿದಿರುವಂತಹ ಸಮಯದಲ್ಲಿ ಗೋಮೂತ್ರ ಬೇಕಾಗುತ್ತದೆ. 

ದೇವಸ್ಥಾನದಲ್ಲಿ ಕೊಡುವಂತಹ ತೀರ್ಥ ದಲ್ಲಿ ಕೂಡ ಗೋಮೂತ್ರ ಇರುತ್ತದೆ.  ಗೋಮೂತ್ರವನ್ನು ಆಯುರ್ವೇದಿಕ್ ಗಳಲ್ಲಿ ಉಪಯೋಗಿಸುತ್ತಾರೆ. ಇವು ತುಂಬಾ ಮಹತ್ವವಾದದ್ದು. ಹಸುವಿನ ಹಾಲು ಕೂಡ ಬಹಳಷ್ಟು ಶ್ರೇಷ್ಠ. ಚಿಕ್ಕ ಮಕ್ಕಳಿಗೂ ಹಸುವಿನ ಹಾಲನ್ನು ಕೊಡುತ್ತಾರೆ. ಹಾಗೆ ದೇವರ ಅಭಿಷೇಕಕ್ಕೂ ಹಸುವಿನ ಹಾಲನ್ನು ಬಳಸುತ್ತಾರೆ.  ಶಿವನಿಗೆ ಅತ್ಯಂತ ವಾದ ಅಭಿಷೇಕ ಎಂದರೆ ಹಾಲಿನ ಅಭಿಷೇಕವಾಗಿದೆ.  ಗೋಮಾತೆಯನ್ನು ರಕ್ಷಿಸಿ ಆಹಾರವನ್ನು ನೀಡಿ. ತಮ್ಮದೇ ಆದಂತಹ ಶೈಲಿಯಲ್ಲಿ ಹಸುವಿಗೆ ಪೂಜೆಯನ್ನು ಸಲ್ಲಿಸಿ ಒಳ್ಳೆಯ ಫಲವನ್ನು ಪಡೆಯುತ್ತೇವೆ, ಅದೃಷ್ಟದ ಬಾಗಿಲನ್ನು ತೆರೆಸುತ್ತದ್ದೆ. ಹಾಗೇ ಲಕ್ಷ್ಮೀ ದೇವರ ಅನುಗ್ರಹವನ್ನು ಪಡೆಯುತ್ತೇವೆ.

Leave A Reply

Your email address will not be published.