ಈ ಬಳ್ಳಿಯ ಚಮತ್ಕಾರ ತಿಳಿದರೆ ಅಚ್ಚರಿ ಪಡುತ್ತೀರಾ!

0 184

ಈ ಬಳ್ಳಿಯ ಲೇಪನ ಮಾಡಿದರೆ ವ್ಯಕ್ತಿಯ ಆಯಸ್ಸು ಹೆಚ್ಚಾಗುತ್ತದೆ. ವ್ಯಕ್ತಿಯ ಮೃತ್ಯು ಆಗುವುದಿಲ್ಲ ಜೊತೆಗ್ರ್ ತಮ್ಮ ವಯಸ್ಸನ್ನು ಇದರಲ್ಲಿ ಬಂದಿಸಿ ಇಡಬಹುದು.ಶಂಖಪುಷ್ಪ ನೋಡಲು ಸುಂದರ. ಅಷ್ಟೆ ಅಲ್ಲ ಆರೋಗ್ಯ ವರ್ಧಕವೂ ಹೌದು.

ಬೀನ್ಸ್ ಬಳ್ಳಿಯಂತಿರುವ ಈ ಸಸ್ಯವು ಬೇರೆ ಗಿಡವನ್ನು ಆಧಾರವಾಗಿರಿಸಿಕೊಂಡು ಹರಡಿ ಬೆಳೆಯುತ್ತದೆ. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣ ಈ ಹೆಸರು ಬಂದಿದೆ. ಅದರಲ್ಲೂ ತೆಳ್ಳಗಿನ ಮತ್ತು ದಪ್ಪದ ದಳಗಳಿರುವ ಎರಡು ಜಾತಿಗಳಿವೆ. ಪರಿಮಳದ ಸೋಂಕಿಲ್ಲದ ಈ ಹೂವು ದೇವರ ಪೂಜೆಗೆ ವಿನಹ ಹೆಣ್ಣಿನ ಮುಡಿಗೇರುವುದಿಲ್ಲ. ಆದರೆ ಬಳ್ಳಿಯಾಗಿ ಹರಡಿ ವರ್ಷದುದ್ದಕ್ಕೂ ಬಿಳಿ ಅಥವಾ ನೀಲವರ್ಣದ ಹೂಗಳನ್ನು ಕೊಡುವ ಗಿಡ ಮನೆಯ0ಗಳಕ್ಕೆ ಅಲಂಕಾರಿಕ.

ಅಮಾವಾಸ್ಯೆ ದಿನ 21 ಹೂವನ್ನು ಲಕ್ಷ್ಮಿಗೆ ಅರ್ಪಿಸಿದರೆ ನಿಮಗೆ ಲಕ್ಷ್ಮಿ ಒಲಿಯುತ್ತಾಳೆ.ಶುಕ್ರ ನಕ್ಷತ್ರ ಸಮಯದಲ್ಲಿ ಇದರ ಬೇರನ್ನು ತೆಗೆದುಕೊಂಡು ಹಾಲಿನೊಂದಿಗೆ ಸೇವಿಸಬೇಕು. ಇದರ ಸೇವನೆಯಿಂದ ಶರೀರವು ದಷ್ಟ ಪುಷ್ಟವಾಗುತ್ತದೆ.ಇನ್ನು ಇದರ ಪಂಚಾಗವನ್ನು ತಿಲಕ ಮಾಡಿ ಇಟ್ಟುಕೊಂಡರೆ ನಿಮ್ಮ ಮುಂದೆ ಇರುವ ವ್ಯಕ್ತಿ ನಿಮ್ಮ ಮಾತನ್ನು ಕೇಳಲು ಶುರು ಮಾಡುತ್ತಾನೆ.

ಇಂಗ್ಲಿಷಿನಲ್ಲಿ ಬಟರ್ ಫ್ಲೆಪಿಯೆ ಎಂಬ ಹೆಸರಿರುವ ಶಂಖಪುಷ್ಪ ಕ್ಲಿಟೋರಿಯ ಟಿರ್ನೆಟಿಯ ಎಂದು ಸಸ್ಯಶಾಸ್ತ್ರದಲ್ಲಿ ಕರೆಯುತ್ತಾರೆ. ಬಿಳಿವರ್ಣದ ಹೂ ಬಿಡುವ ಶಂಖಪುಷ್ಪ ವೈದ್ಯ ದಷ್ಟಿಯಿ0ದ ಹೆಚ್ಚು ಪ್ರಭಾವಶಾಲಿಯೆಂದು ಹೇಳಲಾಗಿದೆ. ಹೊಟ್ಟೆ ಸೆಳೆತ, ಪಚನದ ತೊಂದರೆ, ಪಿತ್ತಜನಕಾಂಗ, ಮೂತ್ರಪಿಂಡ, ಅನ್ನನಾಳ, ಪಿತ್ತಕೋಶಗಳ ಕಾಯಿಲೆ ಹಾಗೂ ಹೊಟ್ಟೆ ಉಬ್ಬರದ ತೊಂದರೆಗಳನ್ನು ಇವುಗಳ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ.

  • ಅರೆತಲೆನೋವು ನಿವಾರಿಸಲು ಶಂಖಪುಷ್ಪದ ಬೇರನ್ನು ತೇದು ಅಂಜನದ ಹಾಗೆ ಕಣ್ಣಿಗೆ ಸವರಬೇಕು.
  • ಎಲೆಗಳ ರಸವನ್ನು ಬಿಸಿ ಮಾಡಿ ಲೇಪಿಸಿದರೆ ಬಾವು ನೋವು ಗುಣವಾಗುತ್ತದೆ.
  • ಬೇರಿನ ರಸವನ್ನು ಹಾಲಿನಲ್ಲಿ ಬೆರೆಸಿ ಶ್ವಾಸನಾಳಗಳ ಬಾಧೆ ನಿವಾರಣೆಗೆ ಬಳಸುವುದುಂಟು.
  • ಮುಖದಲ್ಲಿ ಬಿಳಿಕಲೆಗಳಿದ್ದರೆ ಬೇರನ್ನು ಕ್ಷಾರ ಮಾಡಿ ಎಳ್ಳೆಣ್ಣೆಯಲ್ಲಿ ಕಲಸಿ ಲೇಪಿಸಬಹುದು.
  • ಬೇರಿನ ತೊಗಟೆಯಿಂದ ತಯಾರಿಸಿದ ಚೂರ್ಣವನ್ನು ಜೀರಿಗೆ ಕಷಾಯದಲ್ಲಿ ಕದಡಿ ಜೇನುತುಪ್ಪ ಬೆರೆಸಿ ಸೇವಿಸಿದರೆ ದೇಹಬಾಧೆ ನಿವಾರಣೆ.
  • ಬೀಜವನ್ನು ಹುರಿದು ಹುಡಿ ಮಾಡಿ ಬೆಂಕಿ ಗುಳ್ಳೆಗಳ ನೋವು ಶಮನದ ಔಷಧಕ್ಕೆ ಬಳಸುತ್ತಾರೆ. ವೈದ್ಯಗ್ರಂಥಗಳಲ್ಲಿ ಇದರ ಹೂವಿನಿಂದ ಉನ್ಮಾದ; ಅಪಸ್ಮಾರ ಇತ್ಯಾದಿ ಬಾಧೆ ಶಮನಕ್ಕೆ ತಯಾರಿಸುವ ಪಾನಕದ ವಿಧಿಗಳಿವೆ.
Leave A Reply

Your email address will not be published.