ನಿಮ್ಮ ಸ್ಟ್ರೆತ್ ಹೆಚ್ಚಿಸಲು ನರಗಳಲ್ಲಿ ಆನೆ ಬಲ ಬರಲು ಈ ಬಾಳೆಹಣ್ಣು ತಿನ್ನಿ!

0 94

ದೈಹಿಕ ಹಾಗೂ ಮಾನಸಿಕ ಬಳಲಿಕೆಯು ಆಧುನಿಕ ಯುಗದಲ್ಲಿ ಸಾಮಾನ್ಯ. ದಿನವಿಡಿ ಕಚೇರಿ ಅಥವಾ ಬೇರೆ ಯಾವುದೇ ಕೆಲಸದಲ್ಲಿ ತೊಡಗಿಕೊಂಡ ಬಳಿಕ ಸಂಜೆಯಾಗುತ್ತಿರುವಂತಹ ದೈಹಿಕವಾಗಿ ಬಳಲಿಕೆಯು ಕಂಡುಬರುವುದು.

ದಿನದ ಸಂಪೂರ್ಣ ಆಯಾಸವನ್ನು ಹೋಗಲಾಡಿಸಲು ರಾತ್ರಿ ವೇಳೆ ನಿದ್ರೆಯು ನಮಗೆ ನೆರವಿಗೆ ಬರುವುದು. ಆದರೆ ಕೆಲವೊಂದು ಸಲ ಸರಿಯಾಗಿ ನಿದ್ರೆ ಮಾಡಿದರೂ ಬಳಲಿಕೆ ಮಾತ್ರ ಹಾಗೆ ಉಳಿದುಕೊಂಡಿರುವುದು. ದೈಹಿಕ ಶಕ್ತಿ ಕುಂದಲು ಹಲವಾರು ರೀತಿಯ ಕಾರಣಗಳು ಇವೆ. ಆಹಾರ ಕ್ರಮ ಹಾಗೂ ಜೀವನಶೈಲಿಯು ಇಲ್ಲಿ ಪ್ರಮುಖ ಪಾತ್ರ ವಹಿಸುವುದು.

ಎಲ್ಲರ ಜೀವನವು ಒಂದೇ ರೀತಿಯಾಗಿ ಇರದು, ಕೆಲವರು ದೈಹಿಕವಾಗಿ ತುಂಬಾ ಶ್ರಮ ವಹಿಸಿದರೆ ಇನ್ನು ಕೆಲವರಿಗೆ ಮಾನಸಿಕವಾಗಿ ಒತ್ತಡ ಬೀಳುವ ಕೆಲಸಗಳನ್ನು ನಿರ್ವಹಿಸಬೇಕಾಗಿರುವುದು. ಎರಡು ಕೂಡ ದಿನದ ಅಂತ್ಯದಲ್ಲಿ ತುಂಬಾ ಬಳಲಿಕೆ ಉಂಟು ಮಾಡುವುದು. ಆದರೆ ನೀವಿಲ್ಲಿ ಕೆಲವೊಂದು ಬಳಲಿಕೆ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು.

ಪದೇ ಪದೇ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಬದಲಾವಣೆ ಆಗುತ್ತಲಿದ್ದರೆ ಆಗ ದೇಹವು ನಿಶ್ಯಕ್ತಿ ಒಳಗಾಗುವುದು. ರಕ್ತಹೀನತೆ, ಕೆಟ್ಟ ಏಕಾಗ್ರತೆ ಮತ್ತು ಮನಸ್ಥಿತಿ ಬದಲಾವಣೆಯು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಸಮತೋಲನ ಉಂಟು ಮಾಡುವುದು.

ಇಂತಹ ಸಂದರ್ಭದಲ್ಲಿ ನೀವು ಪ್ರೋಟೀನ್ ಮತ್ತು ನಾರಿನಾಂಶವು ಇರುವಂತಹ ಆಹಾರವನ್ನು ಸೇವನೆ ಮಾಡಿದರೆ ಒಳ್ಳೆಯದು. ಊಟದ ಮಧ್ಯೆ ಹೆಚ್ಚು ಅಂತರವಿದ್ದರೆ ಆಗ ನೀವು ಸಣ್ಣ ತಿಂಡಿ ತಿನ್ನಿ.

ಇನ್ನು ಶೇಂಗಾ ಬೀಜಗಳು ಹಲವಾರು ರೀತಿಯಲ್ಲಿ ಆರೋಗ್ಯಕರವಾಗಿವೆ. ಇದರ ಪ್ರಯೋಜನಗಳನ್ನು ಪಡೆಯಲು ಪ್ರತಿ ಎರಡು ಮೂರು ದಿನಕ್ಕೊಮ್ಮೆ ಹತ್ತರಿಂದ ಹದಿನೈದು ಬೀಜಗಳನ್ನು ಸೇವಿಸಿದರೂ ಸಾಕಾಗುತ್ತದೆ. ಶೇಂಗಾಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಶಕ್ತಿ ಮತ್ತು ಕಬ್ಬಿಣದ ಅಂಶವಿದೆ. ಅರಾಚಿನ್ ಮತ್ತು ಕೊನರಾಚಿನ್ ಎಂಬ ಎಂಬ ಪ್ರೋಟೀನ್‌ಗಳು ಶೇಂಗಾಬೀಜದ ಪೌಷ್ಠಿಕ ಮೌಲ್ಯವನ್ನು ಹೆಚ್ಚಿಸುತ್ತವೆ. ಇದಲ್ಲದೆ, ಶೇಂಗಾಬೀಜಗಳಲ್ಲಿ ಕಾರ್ಬೋಹೈಡ್ರೇಟುಗಳು, ಕರಗದ ನಾರು, ಮತ್ತು ಕೊಬ್ಬುಗಳ (ಏಕ ಅಸಂತೃಪ್ತ ಮತ್ತು ಬಹು ಅಸಂತೃಪ್ತ) ಉತ್ತಮ ಮೂಲವಾಗಿದೆ. ಇದರಲ್ಲಿ ಸಂತೃಪ್ತ ಕೊಬ್ಬಿನಾಮ್ಲಗಳು ಅತಿ ಕಡಿಮೆ ಇವೆ. ಇವುಗಳ ಹೊರತಾಗಿ ಉತ್ತಮ ಪ್ರಮಾಣದ ಪೊಟ್ಯಾಶಿಯಮ್, ರಂಜಕ, ಮೆಗ್ನೀಸಿಯಮ್, ಸತು, ವಿಟಮಿನ್ನುಗಳು ಮತ್ತು ಕ್ಯಾಲ್ಸಿಯಂನಂತಹ ಸೂಕ್ಷ್ಮ ಪೋಷಕಾಂಶಗಳೂ ಇವೆ. ಆದರೆ, ಇದರಲ್ಲಿ ಸೋಡಿಯಂ ಅತಿ ಕಡಿಮೆ ಇವೆ.

ಬಾಳೆಹಣ್ಣು ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ ಹಣ್ಣು ಎಂದು ಪರಿಗಣಿಸಲಾಗಿದೆ. ಬಾಳೆಹಣ್ಣು ನಿಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಬಾಳೆಹಣ್ಣುಗಳು ಯಾವುದೇ ಋತುವಿನಲ್ಲಿ ಸುಲಭವಾಗಿ ಲಭ್ಯವಿರುತ್ತವೆ ಮತ್ತು ನೀವು ಅವುಗಳನ್ನು ಯಾವುದೇ ರೀತಿಯಲ್ಲಿ ಬಳಸಬಹುದು.

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್-ಎ, ಬಿ, ಸಿ ಮತ್ತು ವಿಟಮಿನ್ ಬಿ6 ಇದೆ. ನೀವು ಅಧಿಕ ತೂಕ ಹೊಂದಿದ್ದರೆ, ಬಾಳೆಹಣ್ಣುಗಳು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. ಇದು ನರಮಂಡಲವನ್ನು ಬಲಪಡಿಸುತ್ತದೆ. ತಜ್ಞರ ಪ್ರಕಾರ, ಬಾಳೆಹಣ್ಣುಗಳು ಹಣ್ಣಾಗುತ್ತಿದ್ದಂತೆ ಪೋಷಕಾಂಶಗಳ ಮಟ್ಟವು ನಿರಂತರವಾಗಿ ಹೆಚ್ಚಾಗುತ್ತದೆ. ಬಿಳಿ ರಕ್ತ ಕಣಗಳಿಗೆ ಹಸಿರು ಬಾಳೆಹಣ್ಣುಗಳಿಗಿಂತ ಕಪ್ಪು ಬಾಳೆಹಣ್ಣುಗಳು 8 ಪಟ್ಟು ಹೆಚ್ಚು ಪರಿಣಾಮಕಾರಿ.

ಜೀರ್ಣಕ್ರಿಯೆಯನ್ನು ಬಲಪಡಿಸಲು ಬಾಳೆಹಣ್ಣು ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲಾಗಿದೆ. ಅತಿಸಾರಕ್ಕೆ ಚಿಕಿತ್ಸೆ ನೀಡಲು ಇದು ಅತ್ಯಂತ ಸೂಕ್ತವಾದ ಹಣ್ಣು. ಅತಿಸಾರದ ಸಮಯದಲ್ಲಿ ಬಾಳೆಹಣ್ಣುಗಳನ್ನು ಸೇವಿಸುವುದರಿಂದ ಪರಿಹಾರವನ್ನು ನೀಡುತ್ತದೆ, ಏಕೆಂದರೆ ಅವುಗಳಲ್ಲಿ ಇರುವ ಪೊಟ್ಯಾಸಿಯಮ್ ಎಲೆಕ್ಟ್ರೋಲೈಟ್‌ಗಳನ್ನು ಬದಲಾಯಿಸುತ್ತದೆ.

ನೀರು ದೇಹದಲ್ಲಿನ ಅನುಪಯುಕ್ತ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹೀಗಾಗಿ ದಿನಕ್ಕೆ 2 ರಿಂದ 3 ಲೀ ನೀರನ್ನು ಸೇವಿಸಿ. ಅಲ್ಲದೆ ಕೆಲವೊಮ್ಮೆ ನಿರ್ಜಲೀಕರಣದಿಂದಲೂ ದೇಹಕ್ಕೆ ಬಳಲಿಕೆ ಕಾಡಬಹುದು.

ನೀರು ಮಾತ್ರವಲ್ಲ ಹೆಚ್ಚು ದ್ರವ ಪದಾರ್ಥಗಳನ್ನು ಸೇವನೆ ಮಾಡಿ. ಉದಾಹರಣೆಗೆ ಹಣ್ಣುಗಳ ಜ್ಯೂಸ್‌, ತರಕಾರಿಗಳ ಜ್ಯೂಸ್‌, ಮಿಲ್ಕ್‌ ಶೇಕ್‌ಗಳು, ತರಕಾರಿ, ಬೇಳೆಕಾಳುಗಳ ಸೂಪ್‌ಗಳನ್ನು ಸೇವನೆ ಮಾಡಿ. ಪೋಷಕಾಂಶಗಳನ್ನು ಪಡೆಯುವುದರ ಜೊತೆಗೆ ದೇಹದ ನಿರ್ಜಲೀಕರಣವನ್ನೂ ತಡೆಯಬಹುದು.

ದೇಹದ ನಿಶ್ಯಕ್ತಿಯನ್ನು ನಿವಾರಿಸಲುಡ್ರೈಫ್ರೂಟ್ಸ್‌ಗಳು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ. ಬಾದಾಮಿ, ಪಿಸ್ತಾ, ಕುಂಬಳಕಾಯಿ ಬೀಜಗಳು, ಚಿಯಾ ಬೀಜಗಳು ಮತ್ತು ಅಗಸೆಬೀಜಗಳು ಇದಕ್ಕೆ ಸಹಾಯ ಮಾಡುತ್ತವೆ. ನಿಮ್ಮ ದೇಹವು ಅಗತ್ಯವಿರುವ ಪೌಷ್ಟಿಕಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಬಳಲಿಕೆಯನ್ನು ನಿವಾರಿಸುತ್ತದೆ.

ಪ್ರೋಟೀನ್‌ಗಳು ದೇಹದ ಆಯಾಸದ ವಿರುದ್ಧ ಪರಿಣಾಮಕಾರಿಯಾಗಿರುತ್ತವೆ. ಹೀಗಾಗಿ ಬೀನ್ಸ್, , ಕಾಟೇಜ್ ಚೀಸ್ ಮತ್ತು ಮೊಳಕೆ ಭರಿಸಿದ ಕಾಳುಗಳು ಆಯಾಸದ ವಿರುದ್ಧ ಹೋರಾಡುವ ಆಹಾರಗಳಾಗಿವೆ. ಇವುಗಳಲ್ಲಿ ಹೆಚ್ಚಿನವು ಮೆಗ್ನೀಸಿಯಮ್‌ನಲ್ಲಿ ಸಮೃದ್ಧವಾಗಿವೆ, ಹೀಗಾಗಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

Leave A Reply

Your email address will not be published.