ಇಲಿಗಳನ್ನು ಸಾಯಿಸದೆ ಮನೆಯಿಂದ ಹೊರಗೆ ಓಡಿಸುವ ಹೊಸ ಪರಿಣಾಮಕರಿ ಉಪಾಯ!
ಮನೆಯಲ್ಲಿ ಜಿರಳೆಗಳ ಕಾಟ, ಇಲಿಗಳ ಕಾಟ ಸಾಮಾನ್ಯ. ಅದರಲ್ಲೂ ಹಂಚಿನ ಮನೆಗಳಲ್ಲಿ ಇಲಿಗಳ ಕಾಟ ಹೇಳೋದೇ ಬೇಡ. ಮನೆಯಲ್ಲಿ ಯಾವುದೇ ವಸ್ತು ಸರಿಯಾಗಿ ಇರೋದೇ ಇಲ್ಲ. ಅಡುಗೆ ಸಾಮಾಗ್ರಿಯಿಂದ ಹಿಡಿದು , ಫೈಬರ್ ವಸ್ತುಗಳನ್ನೂ ಇಲಿ ಕೊರೆದು ಬಿಡುತ್ತದೆ. ಬಟ್ಟೆಯನ್ನು ಚಿಂದಿಯಾಗಿಸುತ್ತದೆ.
ಈ ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯವರು ಸಾಕಷ್ಟು ಪ್ರಯತ್ನ ಪಡುತ್ತಾರೆ. ಕೆಲವರು ಇಲಿ ಹಿಡಿಯುವ ಪಂಜರ ತಂದಿಟ್ಟರೆ ಇನ್ನೂ ಕೆಲವರು ಇಲಿ ಪಾಶನ ತಂದು ಇಡುತ್ತಾರೆ. ಆದರೆ ಇಲಿಗಳ ಕಾಟ ಮಾತ್ರ ತಪ್ಪಿದ್ದಲ್ಲ.
ನಿಮ್ಮ ಮನೆಯಲ್ಲೂ ಇಲಿಗಳ ಕಾಟ ಇದ್ದರೆ ನಾವಿಂದು ಕೆಲವು ಸಿಂಪಲ್ ಟಿಪ್ಸ್‌ಗಳನ್ನು ತಿಳಿಸಲಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ನೀವು ಮನೆಯಲ್ಲಿರುವ ಇಲಿಗಳನ್ನು ಓಡಿಸಬಹುದು. ನಿಮಗೆ ಗೊತ್ತಾ, ಇಲಿಗಳನ್ನು ಕೊಲ್ಲದೆ ಅಥವಾ ಹಿಡಿಯದೆ ಶಾಶ್ವತವಾಗಿ ತೊಡೆದುಹಾಕಲು ತುಂಬಾ ಸುಲಭ.
ಉತ್ತಮ ವಿಷಯವೆಂದರೆ ಇದಕ್ಕಾಗಿ ನೀವು ಪ್ರತ್ಯೇಕವಾಗಿ ಏನನ್ನೂ ಖರ್ಚು ಮಾಡುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಅಡುಗೆಮನೆಯಲ್ಲಿ ಬಳಸುವ ಕೆಲವು ಮಸಾಲೆಗಳು ಇಲಿ ನಿವಾರಕದಂತೆ ಕಾರ್ಯನಿರ್ವಹಿಸುತ್ತವೆ.
ಮೊದಲು 5 ತುಂಬಾ ಖಾರ ಇರುವ ಹಸಿ ಮೆಣಸಿನಕಾಯಿ ಪೇಸ್ಟ್ ,2 ಚಮಚ ಜೋಳ ಹಿಟ್ಟು ಅಥವಾ ಮೈದಾ ಹಿಟ್ಟು, 2 ಚಮಚ ಕಡಲೆಹಿಟ್ಟು ಇದನ್ನು ಒಂದು ಬೌಲ್ ಗೆ ಹಾಕಿ. ಇದಕ್ಕೆ ಸ್ವಲ್ಪ ವಿನೆಗರ್ ಹಾಕಿ ಮಿಕ್ಸ್ ಮಾಡಬೇಕು. ಇದಕ್ಕೆ ಸ್ವಲ್ಪ ಡಿಟೇರ್ಜೆಂಟ್ ಪೌಡರ್ ಹಾಕಿ ಮಿಕ್ಸ್ ಮಾಡಿ ಒಂದು ಪೇಪರ್ ಮೇಲೆ ಹಾಕಬೇಕು. ಇದನ್ನು ಇಲಿ ಇರುವ ಜಾಗದಲ್ಲಿ ಇಡಬೇಕು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ಇಲಿಗಳು ಓಡಿ ಹೋಗುತ್ತವೆ. ಇದನ್ನು ಮಕ್ಕಳ ಕೈಯಲ್ಲಿ ಕೊಡಬಾರದು ಮತ್ತು ರಾತ್ರಿ ಸಮಯದಲ್ಲಿ ಮಾಡಬೇಕು.