ಮಲಬದ್ಧತೆಗೆ /ಸಂಡಾಸ್ ಸಮಸ್ಸೆಗೆ 3 ಮನೆಮದ್ದು!
ಮಲಬದ್ಧತೆಗೆ ಸಮಸ್ಸೆ ಸರ್ವ ರೋಗಕ್ಕೂ ಕಾರಣ. ಮಲಬದ್ಧತೆಯಿಂದ ಮಲ ವಿಕಾರಗಳು ಸೃಷ್ಟಿಯಾಗುತ್ತವೆ. ಮಲ ವಿಕಾರದಿಂದ ದೋಷಗಳು ವಿಕಾರ ಆಗುತ್ತವೆ. ದೋಷದಿಂದ ದಾತು ವಿಕಾರ ಆಗುತ್ತದೆ. ದಾತು ವಿಕಾರದಿಂದ ದಾತುಕ್ಷೇಯ ಆಗುತ್ತದೆ. ಮಲ ಸ್ವಚ್ಛವಾಗಿ ಇದ್ದರೆ ಶರೀರಕ್ಕೆ ಬಲ. ಮಲ ಸ್ವಚ್ಛವಾಗಿ ಇಲ್ಲವಾದರೆ ಶರೀರ ಸರ್ವನಾಶ ಆಗುತ್ತದೆ. ಮಲ ಸಂಗ್ರಹಣೆ ತಡೆಯುವ ಶಕ್ತಿ ಈ ಮನೆಮದ್ದಿಗೆ ಇದೆ.
ಗಂಧರ್ವ ಹಸ್ತಾದಿ ತೈಲ ಅಥವಾ ಹರೆಳೆಣ್ಣೆ ಕರುಳು ಶುದ್ಧಿಗೆ ದಿವ್ಯ ಔಷಧಿ ಇದು. ಆಹಾರ ಸೇವನೆ ಮಾಡಿ ಎರಡು ತಾಸಿನ ನಂತರ 2-3 ಚಮಚ ಅರ್ಧ ಗ್ಲಾಸ್ ಬಿಸಿ ಹಾಲಿಗೆ ಹಾಕಿ ಸೇವನೆ ಮಾಡುವುದರಿಂದ ಕರುಳು ಸ್ವಚ್ಛ ಆಗುತ್ತದೆ. ಇದನ್ನು ಮೂರು ತಿಂಗಳು ಸತತವಾಗಿ ಉಪಯೋಗ ಮಾಡುವುದರಿಂದ ಅಪಾನವಾಯು ಕ್ರಿಯಾಶೀಲವಾಗುತ್ತದೆ. ಇದನ್ನು ಗರ್ಭಿಣಿ ಸ್ತ್ರೀಯರು ಮತ್ತು ಸ್ತನ ಪಾನ ಮಾಡಿಸುವ ಸ್ತ್ರೀಯರು ವೈದ್ಯರ ಸಲಹೆಯನ್ನು ಪಡೆದುಕೊಂಡು ಇದರ ಸೇವನೆ ಮಾಡಬೇಕು