1111 ಈ ನಂಬರ್ ಪದೇ ಪದೇ ಯಾಕೆ ಕಾಣಿಸುತ್ತದೆ ತಿಳಿದುಕೊಳ್ಳಿ!

0 777

ಸಂಖ್ಯಾಶಾಸ್ತ್ರದ ಪ್ರಕಾರ, 11 ಅಂಕ ತಾಳ್ಮೆ, ಪ್ರಾಮಾಣಿಕತೆ, ಸೂಕ್ಷ್ಮತೆ ಮತ್ತು ಆಧ್ಯಾತ್ಮಿಕದ ಪ್ರತೀಕವಾಗಿದೆ.  11 ನೇ ಸಂಖ್ಯೆಯನ್ನು ಎರಡು ಬಾರಿ ನೋಡುವುದೆಂದರೆ ಅದರಲ್ಲಿ ಏನೋ ಮಹತ್ವ ಇರುತ್ತದೆ. ಅದೇನು ಅನ್ನುವುದಕ್ಕೆ ಇಲ್ಲಿಯವರೆಗೆ, ಯಾವುದೇ ಖಚಿತವಾದ ಉತ್ತರ ಸಿಕ್ಕಿಲ್ಲ. ಆದರೆ ಈ ಬಗ್ಗೆ ಹೊಂದಿರುವ ನಂಬಿಕೆಯನ್ನು ಅಲ್ಲಗಳೆಯುವಂತಿಲ್ಲ. ಹೊಸ ಕೆಲಸವನ್ನು ಆರಂಭಿಸುವುದಕ್ಕೆ ಈ ಸಂಖ್ಯೆ ಬಹಳ ಶ್ರೇಷ್ಠ ಎಂಬ ನಂಬಿಕೆಯಿದೆ. 

ಸಾಮಾನ್ಯವಾಗಿ ಪ್ರತಿಯೊಬ್ಬರೂ ಆಗಾಗ ಗಂಟೆ ಎಷ್ಟಾಯಿತು ಎಂದು ನೋಡಿಕೊಳ್ಳುತ್ತಿರುತ್ತಾರೆ. ಸಮಯವನ್ನು ನೋಡಲು, ಗೋಡೆ ಗಡಿಯಾರವು ಕೈ ಗಡಿಯಾರ, ಮೊಬೈಲ್,  ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಹೀಗೆ ಏನನ್ನಾದರೂ ಬಳಸಬಹುದು. ಆದರೆ ಕೆಲಸದಲ್ಲಿ  ನಿರತರಾಗಿರುವ ವೇಳೆ  ಅಚಾನಕಾಗಿ ಕಣ್ಣು ಗಡಿಯಾರದತ್ತ ಹೋದರೆ ಅಲ್ಲಿ 11:11 ಸಮಯ ಆಗಿರುವುದು ನಿಮ್ಮಕಣ್ಣಿಗೆ ಬಿದ್ದಿದೆಯೇ?  ಸಾಮಾನ್ಯವಾಗಿ ಸಮಯ 11:11ಆದರೂ ಇದರಲ್ಲೇನಿದೆ ಎಂದು ಯೋಚನೆ ಮಾಡಬಹುದು. ಆದರೆ ಇಲ್ಲೇ ಇರುವುದು ವಿಶೇಷ.. ಜ್ಯೋತಿಷ್ಯ ಮತ್ತು ವಿಜ್ಞಾನ ಎರಡರಲ್ಲೂ ಈ ಸಂಖ್ಯೆಗೆ ಬಹಳ  ಮಹತ್ವವಿದೆ.  ಇಂಗ್ಲಿಷಿನಲ್ಲಿ, 11:11 ಅನ್ನು ಏಂಜಲ್ ಸಂಖ್ಯೆಗಳು ಎಂದು ಕರೆಯಲಾಗುತ್ತದೆ.

ನೀವು ಪದೇ  ಪದೇ ಗಡಿಯಾರದಲ್ಲಿ 11:11 ಅನ್ನು ನೋಡಿದರೆ, ಅದನ್ನು ಕಾಕತಾಳೀಯವೆಂದು ಖಂಡಿತವಾಗಿಯೂ ಪರಿಗಣಿಸಬೇಡಿ. ಸಂಖ್ಯಾಶಾಸ್ತ್ರದ ಪ್ರಕಾರ, ಗಡಿಯಾರದ ಎಲ್ಲಾ ಅಂಕೆಗಳು ಸಮಾನವಾಗಿರುವ ಏಕೈಕ ಸಮಯ ಅಂದರೆ ಅದು 11: 11 ಆಗಿದೆ. ಜ್ಯೋತಿಷ್ಯದ ಪ್ರಕಾರವೂ  ಈ ಕ್ಷಣ ಬಹಳ ವಿಶೇಷವಾಗಿದೆ ಎನ್ನಲಾಗುತ್ತದೆ.  11:11ನ್ನು ಪದೇಪದೇ ನೋಡಿದಾಗ ಮೈ ಮನಸ್ಸಿನ ಒಳಗೆ ವಿಶೇಷ ರೀತಿಯ ರೋಮಾಂಚನ ಉಂಟಾಗುತ್ತದೆ ಎಂಬ ವಿಚಾರವನ್ನು ಕೆಲವರು ಒಪ್ಪಿಕೊಳ್ಳುತ್ತಾರೆ. ವಿಶೇಷ ಸಂಖ್ಯೆಗಳು ಪದೇ ಪದೇ ನಮ್ಮ ಕಣ್ಣಿಗೆ ಬೀಳುತ್ತಿದ್ದರೆ,  ಬ್ರಹ್ಮಾಂಡದ ಕೆಲವು ಶಕ್ತಿಯು ನಮಗೆ ಏನನ್ನೋ ಸೂಚಿಸಲು ಯತ್ನಿಸುತ್ತಿದೆ ಎಂದು ನಂಬಲಾಗಿದೆ.  

11:11 ಸಂಖ್ಯೆಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳು ಮತ್ತು ಸಿದ್ಧಾಂತಗಳಿವೆ. ಆ ನಂಬಿಕೆಗಳನ್ನು ನಂಬುವುದು, ಬಿಡುವುದು ಅವರವರಿಗೆ ಬಿಟ್ಟ ವಿಚಾರ. 11:11 ಈ ಸಂಖ್ಯೆಯನ್ನು ನೋಡಿದಾಗಲೆಲ್ಲಾ ನಿಮ್ಮ ಜೀವನ ಹೊಸ ತಿರುವು ಪಡೆದುಕೊಳ್ಳಲಿದೆ ಎಂದರ್ಥ. ಈ ಸಮಯದಲ್ಲಿ ದೇವರಿಗೆ ಸಲ್ಲಿಸಿದ ಪ್ರಾರ್ಥನೆಯನ್ನುದೇವರು ಯಾವತ್ತೂ ತಿರಸ್ಕರಿಸುವುದಿಲ್ಲ ಎನ್ನಲಾಗಿದೆ.

ಈ ಸಂಖ್ಯೆಯ ಸುತ್ತ ಇರುವ ಸಾಮಾನ್ಯ ನಂಬಿಕೆ  ಎಂದರೆ, ಈ  ಸಮಯದಲ್ಲಿ ಕಣ್ಣುಮುಚ್ಚಿ ಏನೇ  ಬೇಡಿಕೊಂಡರೂ ಅದು ಈಡೇರತ್ತದೆ ಎನ್ನುವುದು. ಇನ್ನು ಬೇಡಿಕೆ ಈಡೇರುತ್ತದೆಯೋ ಇಲ್ಲವೋ ಎನ್ನುವುದು ಅವರವರ ನಂಬಿಕೆಯ ಮೇಲೆ ನಿರ್ಧಾರವಾಗುತ್ತದೆ. 11:11 ಈ ಸಂಖ್ಯೆಯ ಹಿಂದಿರುವ ಇನ್ನೊಂದು ನಂಬಿಕೆಯೆಂದರೆ, ಯಾವಾಗ  ನಿಮ್ಮ ಕಣ್ಣಿಗೆ ಈ ಸಮಯ ಬೀಳುತ್ತದೆ ಆ ಸಂದರ್ಭದಲ್ಲಿ ನಿಮ್ಮ ಸುತ್ತಮುತ್ತ  ಏನಾದರೊಂದು ಘಟನೆ ಘಟಿಸುತ್ತದೆ.  ನಿಮ್ಮ ಜೀವನದ ಮಹತ್ವಪೂರ್ಣ ನಿರ್ಧಾರವನ್ನು ಇದೇ ಸಮಯದಲ್ಲಿ ಕೈಗೊಳ್ಳಲೂಬಹುದು.

ನಿಮ್ಮ ದೃಷ್ಟಿ ಮತ್ತೆ ಮತ್ತೆ 11:11ರತ್ತ ಹೋಗುತ್ತಿದ್ದರೆ, ಈ ಕ್ಷಣದಲ್ಲಿಎಲ್ಲಾ ಕೆಲಸವನ್ನು  ಬಿದಿಗಿಟ್ಟು ಸುಮ್ಮನಿದ್ದು ಬಿಡಿ. ನಿಮ್ಮ ಆಸುಪಾಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗಮನಿಸಿ.  ನಿಮ್ಮ ಜೀವನಕ್ಕೆ ಸಂಬಂಧಪಟ್ಟಂತೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವವರಿದ್ದರೆ ಈ ಸಮಯ ಹೇಳಿ ಮಾಡಿಸಿರುವಂಥದ್ದು. ಒಂದು ಕ್ಷಣ  ನಿಮ್ಮೊಳಗೆ ಹೊಕ್ಕು,  ಬ್ರಹ್ಮಾಂಡದ ಅದೃಶ್ಯ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮಗೆ ಯಾವ ಸಂಕೇತವನ್ನುನೀಡಲು ಯತ್ನಿಸುತ್ತಿದೆ ಎನ್ನುವುದನ್ನು ತಿಳಿಯಲು ಪ್ರಯತ್ನಿಸಿ..

Leave A Reply

Your email address will not be published.