ಭಗವದ್ಗೀತೆಯಿಂದ ನನಗೆ ದೊರೆತ ಹತ್ತು ಅತ್ಯಮೂಲ್ಯ ವಿಚಾರಗಳು‌..

0 848

ಒಂದು..‌ಒಂಟಿಯಾಗಿ ಇರೋವಾಗ ನಿನ್ನ ಆಲೋಚನೆಗಳ ಮೇಲೆ ನಿಯಂತ್ರಣ ಇರಲಿ. ಸ್ನೇಹಿತರ ಜೊತೆ ಇರೋವಾಗ ನಿನ್ನ ನಾಲಗೆ ಮೇಲೆ ನಿಯಂತ್ರಣ ಇರಲಿ ಮತ್ತೆ ಕೋಪದಲ್ಲಿ ಇರೋವಾಗ ನಿನ್ನ ನಿರ್ಧಾರಗಳ ಮೇಲೆ ನಿಯಂತ್ರಣ ಇರಲಿ.

ಎರಡು..ನಕಾರಾತ್ಮಕ ಆಲೋಚನೆ ಮಾಡೋ ವ್ಯಕ್ತಿಗಳಿಗೆ ಎಷ್ಟು ಕಡಿಮೆ ಉತ್ತರ ಕೊಡ್ತೀಯೋ ನಿನ್ನ ಜೀವನ ಅಷ್ಟೇ ಪ್ರಶಾಂತವಾಗಿರುತ್ತೆ..

ಮೂರು…ನಿನ್ನ ಜೊತೆ ಬೇರೆ ಅವ್ರು ಹೇಗೆ ನಡ್ಕೊಂಡ್ರೆ ನಿನಗೆ ಬೇಜಾರಾಗುತ್ತೋ, ಆ ರೀತಿ ನೀನು ಬೇರೆ ಅವ್ರ ಜೊತೆ ಎಂದೂ ನಡ್ಕೋಬೇಡ..

ನಾಲ್ಕು..ಕೊಳೆ ಆಗೋದಿಕ್ಕೆ ನೀನು ಏನೂ ಮಾಡಬೇಕಾಗಿಲ್ಲ..‌ ಸುಮ್ಮನೆ ಕೂತಿರು ಸಾಕು ನೀನು ಕೊಳೆ ಆಗ್ತೀಯಾ… ಆದ್ರೆ ಸ್ವಚ್ಛವಾಗಿರಬೇಕಂದ್ರೆ ನೀನು ಕೆಲಸ ಮಾಡ್ಲೇಬೇಕು… ಸ್ನಾನ ಮಾಡಲೇಬೇಕು..ಅದೇ ತರ ನೀನು ಏನೂ ಮಾಡದೇ ಸುಮ್ಮನೆ ಇದ್ರೆ ಕೆಟ್ಟ ದಿನಗಳು ನಿನ್ನ ಜೀವನಕ್ಕೆ ಎಂಟ್ರಿ ಕೊಡುತ್ತೆ.. ನಿನ್ನ ಜೀವನ ಬದಲಾಗಬೇಕಂದ್ರೆ ನೀನು ಪ್ರಯತ್ನ ಪಡಬೇಕು, ಒಳ್ಳೆ ಕೆಲಸಗಳನ್ನ ಮಾಡಬೇಕು..

ಐದು..ಯಾವುದೇ ಧರ್ಮ ಆಗಿರಲಿ ಮಾನವ ಕಲ್ಯಾಣ ಅನ್ನೋದೇ ಅದರ ಮೂಲ ಉದ್ದೇಶ. ನಿನ್ನ ಕರ್ತವ್ಯ ನೀನು ಮಾಡೋವಾಗಲೂ ಅದರ ಉದ್ದೇಶ ಮಾನವ ಕಲ್ಯಾಣವೇ ಆಗಿರಬೇಕು.

ಆರು..ವ್ಯಕ್ತಿಯೊಬ್ಬನ ಒಳ್ಳೆಯತನದ ವಿಚಾರ ಬಂದಾಗ ಎಲ್ಲಾ ಮೌನವಾಗಿ ಇರ್ತಾರೆ. ಅದೇ ಆ ವ್ಯಕ್ತಿಯ ಕೆಟ್ಟತನದ ಚರ್ಚೆ ನಡೆದ್ರೆ ಮೂಗ ಕೂಡಾ ಮಾತಾಡಲು ಪ್ರಾರಂಭ ಮಾಡ್ತಾನೆ….‌

ಏಳು..ಅದೃಷ್ಟದಲ್ಲಿರೋದು ಹಾರಿಕೊಂಡು ನಿನ್ನ ಹತ್ರ ಬರುತ್ತೆ, ಅದೃಷ್ಟದಲ್ಲಿ ಇಲ್ಲದೇ ಇರೋದು ಎಂದೂ ನಿನ್ನ ಹತ್ರ ಕೂಡಾ ಸುಳಿಯೋದಿಲ್ಲ… ಅದಕ್ಕೆ ಅತಿ ಆಸೆ ಪಡೆದೇ ಇರೋದನ್ನ ಜಾಗ್ರತೆಯಿಂದ ಕಾಪಾಡಿಕೋ..

ಎಂಟು…ಯಾವ ವ್ಯಕ್ತಿಯ ಆಲೋಚನೆ ಮತ್ತು ಆಚರಣೆ ಉತ್ತಮವಾಗಿರುತ್ತೋ ಅಂತಹ ವ್ಯಕ್ತಿಯ ಸಹಾಯಕ್ಕೆ ದೇವರು ಯಾವುದೋ ಒಂದು ರೂಪದಲ್ಲಿ ಬರ್ತಾನೆ.‌

ಒಂಬತ್ತು..ನೀನು ನಿನ್ನ ಮನಸ್ಸನ್ನ ನಿಯಂತ್ರಣದಲ್ಲಿ ಇಡೋದಕ್ಕೆ ಬಯಸೋದೆ ಆದ್ರೆ ಮೊದಲು ನಿನ್ನ ಇಂದ್ರಿಯಗಳ ನಿಯಂತ್ರಣದ ಕಡೆಗೆ ಗಮನ ಕೊಡು.

ಯಾವ ವ್ಯಕ್ತಿಗೆ ಇಂದ್ರಿಯಗಳ ನಿಯಂತ್ರಣ ಸಾಧ್ಯವಾಗೋದಿಲ್ವೋ ಆತನ ಮನಸ್ಸು ಶಾಂತವಾಗಿ ಇರೋದಕ್ಕೂ ಸಾಧ್ಯ‌ ಇಲ್ಲ…ಕೆಲವೊಮ್ಮೆ ಅವನ ನಾಲಗೆ ರುಚಿಯಾದ ಆಹಾರ ಬೇಕು ಅಂದ್ರೆ, ಇನ್ನೂ ಕೆಲವೊಮ್ಮೆ ಅವನ ದೃಷ್ಟಿ ಸುಂದರವಾದ ಹುಡುಗಿಯರಿಂದ ಪಕ್ಕಕ್ಕೆ ಹೋಗೋದಿಲ್ಲ.. ಮತ್ತೆ ಕೆಲವೊಮ್ಮೆ ಅವನ ಮನಸ್ಸು ಕೆಟ್ಟದನ್ನ ಆಲೋಚನೆ ಮಾಡ್ತಾ ಇರುತ್ತೆ..ಆದ್ದರಿಂದಲೇ ಮನಸ್ಸನ್ನು ನಿಯಂತ್ರಣ ಮಾಡೋದಿಕ್ಕೆ ಇಂದ್ರಿಯ ನಿಗ್ರಹ ಮುಖ್ಯ ಅದರ ಜೊತೆಗೆ ಒಳ್ಳೆಯದನ್ನ ನೋಡು, ಒಳ್ಳೆಯದನ್ನ ಕೇಳು, ಒಳ್ಳೆಯದನ್ನ ಮಾತಾಡು, ಒಳ್ಳೆಯವರ ಜೊತೆ ಸಮಯವನ್ನು ಕಳೆಯೋಕೆ ಪ್ರಯತ್ನ ಮಾಡು

ಹತ್ತು..ಯಾವ ಭಗವಂತ ರಾತ್ರಿ ವೇಳೆ ಮರದ ಮೇಲಿರುವ ಹಕ್ಕಿಗಳನ್ನು ಕೆಳಗೆ ಬೀಳಲು ಬಿಡೋದಿಲ್ವೋ, ಆ ಭಗವಂತ ನಿನ್ನನ್ನ ಮಾತ್ರ ಹೇಗೆ ಒಂಟಿಯಾಗಿ, ಅಸಹಾಯಕನಾಗಿ ಇರೋಕೆ ಬಿಡಲು ಸಾಧ್ಯ ಅಂತ ಒಂದು ಸಲ ಆಲೋಚನೆ ಮಾಡು..

Leave A Reply

Your email address will not be published.