ಸಿಂಹ ರಾಶಿ ಸ್ತ್ರೀ ರಹಸ್ಯ

0 36

ಗಟ್ಟಿಗಿತ್ತಿಯಾಗಿರುವ ಈ ಸಿಂಹಿಣಿಯರನ್ನು ಪಳಗಿಸುವುದು ಹೇಗೆ ಇವರ ಕೋಪವನ್ನು ಕಡಿಮೆ ಮಾಡುವುದು ಹೇಗೆ ಈ ರಾಶಿಯ ಹೆಸರು ಹೇಳುವ ಹಾಗೆ ಈ ರಾಶಿಯ ಸಂಕೇತ ಘರ್ಜನೆ ಮಾಡುತ್ತಿರುವ ಸಿಂಹ ಒಂದು ಬಾರಿ ಇದರ ಎಲ್ಲಾ ಲಕ್ಷಣಗಳನ್ನು ನೆನಪು ಮಾಡಿಕೊಳ್ಳೋಣ.

ಸಿಂಹ ಎಷ್ಟು ಭಯಾನಕ, ಕೋರೆಯಲ್ಲೂ,ಘರ್ಜನೆ ಈ ಸಿಂಹವನ್ನು ನೋಡಿದರೆ ಭಯ ಅದರ ನಡಿಗೆ ಆ ರಾಜ ಗಾಂಭೀರ್ಯತೆ ಕಾಡಿನ ರಾಜ ಎಂದು ಘೋಷಣೆ ಮಾಡಲು ಯಾರು ಎಲೆಕ್ಷನ್ ಮಾಡುವುದಿಲ್ಲ ಒಂದು ಲುಕ್ನಲ್ಲಿ ಹೆದರಿಕೆ ಉಂಟುಮಾಡುವ ಲಕ್ಷಣ ಈ ಸಿಂಹಕ್ಕೆ ಇದೆ ಆದರೆ ಇಂತಹ ಸಿಂಹವನ್ನು ಹತೋಟಿಗೆ ತರುವಂತಹ ಸಿಂಹಿನಿಯರ ಬಗ್ಗೆ ಹೇಳಲೇಬೇಕು.

ಇವರಿಗೆ ನಾಯಕತ್ವದ ಗುಣ ಇದೆ ಹುಟ್ಟುತ್ತಲೇ ಲೀಡರ್ ಎಂದು ಕರೆಯಬಹುದು ಇವರನ್ನು ಇವರ ಲಕ್ಷಣಗಳನ್ನು ನೋಡಿದರೆ ಇವರು ಸಿಂಹ ರಾಶಿಯ ಸ್ತ್ರೀಯರು ಎಂದು ಹೇಳಬಹುದು ಹೇಗೆ ಎಂದರೆ ಇವರಿಗೆ ಮೇಲುಗೈ ಸಾಧಿಸುವ ಛಲ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿಗೆ ಬೀಳುತ್ತಾರೆ .

ಇವರಿಗೆ ಧೈರ್ಯ ಹೆಚ್ಚು ಇವರ ನೋಟಕ್ಕೆ ಎಲ್ಲರೂ ಫಿದಾ ಆಗುತ್ತಾರೆ ಎಷ್ಟೇ ಜನರ ಮಧ್ಯೆ ಇದ್ದರೂ ಇವರು ಕೇಂದ್ರಬಿಂದುವಾಗಿರುತ್ತಾರೆ ಎಲ್ಲರ ಗಮನ ತಮ್ಮ ಮೇಲೆ ಇರಬೇಕೆಂಬ ಆಸೆ ಕೆಲವೊಂದು ಬಾರಿ ಈ ಆಸೆ ದುರಾಸೆ ಆಗಬಹುದು ಆ ಸಂದರ್ಭದಲ್ಲಿ ನೋಡಿ ಸ್ವಾಮಿ ನಾವು ಇರುವುದು ಹೀಗೆ ಎಂದು ಹೇಳುತ್ತಾರೆ

ಯಾವುದೇ ಕಾರ್ಯಕ್ರಮಗಳು ಮದುವೆ,ಮುಂಜಿ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇರುತ್ತಾರೆ ಇವರ ಕಣ್ಣುಟದಿಂದಲೇ ಜನರನ್ನು ಆಕರ್ಷಿಸುತ್ತಾರೆ ಯಾವ ಸ್ಥಳಗಳಲ್ಲಿ ಹೇಗೆ ಇರಬೇಕು ಎಲ್ಲಿ ಗಂಭೀರವಾಗಿ ಇರಬೇಕು ಎಲ್ಲಿ ಸ್ನೇಹ ಮಯವಾಗಿ ವರ್ತಿಸಬೇಕು ಎಂದು ಚೆನ್ನಾಗಿಯೇ ತಿಳಿದಿರುತ್ತದೆ .

ಹೆಚ್ಚಾಗಿ ಬಿಲ್ಡಪ್ ಕೊಡುವುದಿಲ್ಲ ಇವರು ಹೇಗೆ ಇರುತ್ತಾರೆ ಅದೇ ಪರ್ಫೆಕ್ಟ್ ಎನ್ನುವ ರೀತಿ ಇರುತ್ತದೆ ಇವರ ಮುಂದೆ ಶೋ ಆಫ್ ಮಾಡುವವರಿಗೆ ಇವರು ತಕ್ಕ ಪಾಠ ಕಲಿಸುತ್ತಾರೆ ಕೆಲಸ,ಮನೆ,ಆಫೀಸ್ ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಉತ್ಸಾಹ ಹೆಚ್ಚಾಗಿರುತ್ತದೆ.

ಬೇರೆಯವರು ಮಾಡಿರುವ ಕೆಲಸಗಳು ಸರಿ ಇಲ್ಲದಿದ್ದರೆ ಕೋಪ ತೋರಿಸುತ್ತಾರೆ ಮುಂದಾಲೋಚನೆ ಹೆಚ್ಚಾಗಿರುತ್ತದೆ ಇವರ ನಿರ್ಧಾರಗಳು ಯಾವಾಗಲೂ ಸರಿಯಾಗಿಯೇ ಇರುತ್ತದೆ ಎನ್ನುವ ಭಾವನೆ ಇವರು ಹೆಚ್ಚಾಗಿ ಸಮಯ ವ್ಯರ್ಥ ಮಾಡುವುದಿಲ್ಲ ಮಾತು ಕೂಡ ಅಷ್ಟೇ ಇವರಿಗೆ ಅನ್ನಿಸಿರುವುದನ್ನು ಹೇಳಲು ಭಯಪಡುವುದಿಲ್ಲ

Leave A Reply

Your email address will not be published.