ಕೆಂಪಕ್ಕಿ ರೈಸ್ 100 ಲಾಭಗಳು!
ಸಾಧಾರಣವಾಗಿ ಎಲ್ಲರ ಮನೆಯ ಸಾಮಾನ್ಯ ಆಹಾರ ಎಂದರೆ ಅದು ಅನ್ನ ಸಾರು. ಅವರು ಮಾಂಸಹಾರಿಗಳಾಗಿದ್ದರೂ ಸಹ ತಿಳಿ ಸಾರು ಅನ್ನವನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಪ್ರತಿ ದಿನವೂ ನಾವು ಊಟಕ್ಕೆ ಬೆಳ್ಳಗಿರುವ ಅಕ್ಕಿಯಿಂದ ತಯಾರು ಮಾಡಿದ ಅನ್ನವನ್ನು ಸೇವನೆ ಮಾಡುತ್ತೇವೆ. ಆದರೆ ಕೆಲವು ಮನೆಗಳಲ್ಲಿ ಮಾತ್ರ ಅದರಲ್ಲೂ ವಯಸ್ಸಾದವರು ಇದ್ದರೆ ಕೆಂಪಕ್ಕಿ ಅನ್ನ ಊಟ ಮಾಡುತ್ತಿರುತ್ತಾರೆ. ಕೆಂಪಕ್ಕಿ ಅನ್ನ ವಿಶೇಷತೆಯ ಬಗ್ಗೆ ಅವರನ್ನು ಕೇಳಿದರೆ ಅದರ ಸಾಕಷ್ಟು ಪ್ರಯೋಜನಗಳನ್ನು ನಮಗೆ ತಿಳಿಸಿ ಹೇಳುತ್ತಾರೆ. ಪ್ರತಿ ದಿನ ನಾವು ಸೇವನೆ ಮಾಡುವ ಬಿಳಿ ಬಣ್ಣದ ಅನ್ನಕ್ಕಿಂತ ಕಂದು ಬಣ್ಣದ ಅನ್ನ ಎಷ್ಟು ಪ್ರಯೋಜನಕಾರಿ ಎಂದು ನಮಗೆ ಆಗ ಅರಿವಾಗುತ್ತದೆ.
ಈ ಲೇಖನದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದ ವಿಚಾರ ಬಂದಾಗ ಬ್ರೌನ್ ರೈಸ್ ಅಥವಾ ಕೆಂಪಕ್ಕಿ ಅನ್ನ ಹೇಗೆ ವಿಶೇಷ ಸ್ಥಾನದಲ್ಲಿ ನಿಲ್ಲುತ್ತದೆ ಮತ್ತು ಅದರ ಉಪಯೋಗಗಳನ್ನು ಸವಿಸ್ತಾರವಾಗಿ ತಿಳಿಸಿಕೊಡಲಾಗಿದೆ.
ಕೆಂಪಕ್ಕಿಗೆ ಸರಿಸಾಟಿಯಾದ ಇನ್ನೊಂದು ಆಹಾರವಿಲ್ಲ..
ನಾವು ಪ್ರತಿ ದಿನ ಅನ್ನಕ್ಕೆ ಬಳಸುವ ಸಾಮಾನ್ಯ ಅಕ್ಕಿ ಗೆ ಹೋಲಿಸಿದರೆ ಕಂದು ಬಣ್ಣದ ಅಕ್ಕಿ ಅಥವಾ ಸಾಮಾನ್ಯವಾಗಿ ಕರೆಯುವ ಕೆಂಪಕ್ಕಿ ಅನ್ನ ತುಂಬ ವಿಶಿಷ್ಟವಾದದ್ದು. ಇದಕ್ಕೆ ಕಾರಣ ಅದನ್ನು ಸಂಸ್ಕರಿಸುವ ಪ್ರಕ್ರಿಯೆ. ನಾವು ಪ್ರತಿ ದಿನ ಅನ್ನಕ್ಕೆ ಬಳಸುವ ಅಕ್ಕಿ ನೋಡಲು ಬೆಳ್ಳಗಿರುತ್ತದೆ. ಅಂದರೆ ಅದರ ಮೇಲಿನ ಹೊಟ್ಟು ಮತ್ತು ಜೀವಾಣುವನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಆದರೆ ಕೆಂಪಕ್ಕಿಯ ಸಂಸ್ಕರಣೆಯಲ್ಲಿ ಕೇವಲ ಅದರ ಮೇಲಿನ ಒಟ್ಟು ಮಾತ್ರ ತೆಗೆಯಲಾಗುತ್ತದೆ. ಕೆಂಪಕ್ಕಿಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಜೀವಾಣುಗಳು ಮತ್ತು ನಾರಿನ ಅಂಶ ನಮ್ಮ ದೇಹದ ಆರೋಗ್ಯಕ್ಕೆ ಹಲವಾರು ಸಹಕಾರಿಯಾದ ಪ್ರಯೋಜನಗಳನ್ನು ತಂದುಕೊಡುತ್ತದೆ.
ಪೌಷ್ಟಿಕ ಅಂಶಗಳಲ್ಲಿ ಕೆಂಪಕ್ಕಿ ಮೊದಲು…
ನಾವು ದಿನ ನಿತ್ಯ ಸೇವನೆ ಮಾಡುವ ಬಿಳಿ ಅನ್ನದಲ್ಲಿ ಅಷ್ಟೇನೂ ಹೇಳಿಕೊಳ್ಳುವಂತಹ ಪೌಷ್ಟಿಕ ಸತ್ವಗಳು ಕಂಡು ಬರುವುದಿಲ್ಲ. ಆದರೆ ಕೆಂಪಕ್ಕಿ ಅನ್ನದಲ್ಲಿ ಸೆಲೆನಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ನಂತಹ ನಮ್ಮ ದೇಹಕ್ಕೆ ಅಗತ್ಯವಿರುವ ಅತ್ಯದ್ಭುತವಾದ ಪೌಷ್ಟಿಕ ಖನಿಜಾಂಶಗಳು ಕಂಡು ಬರುತ್ತವೆ.
ಇದರ ಜೊತೆಗೆ ಕೆಂಪಕ್ಕಿಯಲ್ಲಿ ನಾರಿನ ಅಂಶ ಮತ್ತು ಫೋಲೇಟ್ ಅಂಶ ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಉಂಟಾಗುತ್ತದೆ. ಕೆಂಪಕ್ಕಿಯಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ಇರುವ ಕಾರಣ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಮಾತ್ರ ಇದೊಂದು ಹೇಳಿ ಮಾಡಿಸಿದ ಆಹಾರ ಪದಾರ್ಥ.
ತೂಕ ನಿರ್ವಹಣೆಯಲ್ಲಿ ಸಹಕಾರಿ..
ತುಂಬಾ ದಢೂತಿ ದೇಹ ಹೊಂದಿರುವವರಿಗೆ ಆರೋಗ್ಯ ತಜ್ಞರು ಆಹಾರ ಪದ್ಧತಿಯಲ್ಲಿ ಹಾಗೂ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯನ್ನು ತಂದುಕೊಳ್ಳಲು ಹೇಳಿರುತ್ತಾರೆ. ಅದರಲ್ಲಿ ಪ್ರತಿದಿನ ಕೆಂಪಕ್ಕಿಯಿಂದ ಮಾಡಿದ ಅನ್ನ ಸೇವಿಸಲು ಸಹ ಆಜ್ಞಾಪಿಸುತ್ತಾರೆ. ಏಕೆಂದರೆ ಇದು ದೇಹದ ತೂಕವನ್ನು ಅವರ ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ಅತ್ಯಂತ ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಇದರಲ್ಲಿರುವ ಹೆಚ್ಚಿನ ನಾರಿನ ಅಂಶ ಹೊಟ್ಟೆ ಹಸಿವನ್ನು ಕಡಿಮೆ ಮಾಡಿ ಹಸಿವಿನ ಹಾರ್ಮೋನುಗಳನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಕೆಂಪಕ್ಕಿಯಲ್ಲಿ ಕಂಡು ಬರುವ ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶ ದೀರ್ಘ ಕಾಲದವರೆಗೆ ದೇಹದ ತೂಕ ನಿಯಂತ್ರಣ ಮಾಡುವಲ್ಲಿ ತನ್ನ ಪ್ರಭಾವ ಬೀರುತ್ತದೆ.
ಮಧುಮೇಹ ನಿಯಂತ್ರಣ ಯಶಸ್ವಿ..
ಸಾಧಾರಣವಾಗಿ ಹೆಚ್ಚಾಗಿ ಅನ್ನ ತಿನ್ನುವವರು ಬಹಳ ಬೇಗನೆ ಮಧುಮೇಹ ಸಮಸ್ಯೆಗೆ ಗುರಿಯಾಗುತ್ತಾರೆ ಎಂದು ದೊಡ್ಡವರು ಹೇಳುತ್ತಾರೆ. ಇದು ಕೇವಲ ಬಿಳಿ ಅನ್ನದಲ್ಲಿ ಮಾತ್ರ ಸಾಧ್ಯವಾಗಬಹುದು. ಆದರೆ ಕೆಂಪಕ್ಕಿ ಅನ್ನ ದಲ್ಲಿ ಕಾರ್ಬೋಹೈಡ್ರೇಟ್ ಅಂಶಗಳು ತುಂಬಾ ಕಡಿಮೆ ಇದ್ದು, ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಮತ್ತು ಇನ್ಸುಲಿನ್ ಪ್ರಮಾಣವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿ, ಮಧುಮೇಹ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಬಿಳಿ ಅನ್ನಕ್ಕೆ ಹೋಲಿಸಿದರೆ ಕೆಂಪಕ್ಕಿ ಅನ್ನದ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಬಂದು ಜೀರ್ಣವಾಗುವ ಪ್ರಕ್ರಿಯೆಯಲ್ಲಿ ಕೂಡ ತುಂಬಾ ನಿಧಾನವಾಗಿ ದೇಹದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ.
ಜೀರ್ಣ ಕ್ರಿಯೆ ಸಮಸ್ಯೆಗಳು ಬಗೆಹರಿಯುತ್ತವೆ..
ತುಂಬಾ ಜನರಿಗೆ ಜೀರ್ಣ ಶಕ್ತಿ ಕಡಿಮೆ ಇರುತ್ತದೆ. ಸಾಧಾರಣವಾಗಿ ಅಂತಹವರಿಗೆ ಅಜೀರ್ಣತೆ, ಮಲಬದ್ಧತೆ, ವಾಕರಿಕೆ, ವಾಂತಿ, ಬೇಧಿ ಈ ಎಲ್ಲಾ ಸಮಸ್ಯೆಗಳು ಒಂದಲ್ಲಾ ಒಂದು ಸಮಯದಲ್ಲಿ ಕಾಡುತ್ತಲೇ ಇರುತ್ತವೆ. ಆದರೆ ಎಲ್ಲಾ ಸಮಯದಲ್ಲೂ ಕೇವಲ ಔಷಧಿ ಮತ್ತು ಮಾತ್ರೆಗಳು ಪರಿಹಾರವಾಗುವುದಿಲ್ಲ. ಅದು ಅಲ್ಲದೆ ಮನೆ ಮದ್ದುಗಳಿಗಿಂತ ಇನ್ನೊಂದು ಸುಲಭವಾದ ಮಾರ್ಗವಿಲ್ಲ. ಹಾಗಾಗಿ ಸಮಸ್ಯೆಗಳನ್ನು ದೀರ್ಘಕಾಲದಿಂದ ಅನುಭವಿಸುತ್ತಿರುವ ಮಕ್ಕಳು ವಯಸ್ಕರು ಹಾಗೂ ವೃದ್ಧರು ತಮ್ಮ ಆಹಾರ ಪದ್ಧತಿಯಲ್ಲಿ ಕೆಂಪಕ್ಕಿ ಅನ್ನವನ್ನು ದಿನಕ್ಕೆ ಒಂದು ಬಾರಿಯಾದರೂ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಸಾಕಷ್ಟು ಒಳ್ಳೆಯದು. ಇದರಿಂದ ಜೀರ್ಣ ನಾಳ ಬಲಗೊಂಡು ಹೊಟ್ಟೆ ಉಬ್ಬರ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳನ್ನು ಇಲ್ಲವಾಗಿಸುತ್ತದೆ.
ಕೊಲೆಸ್ಟ್ರಾಲ್ ಅಂಶದಿಂದ ಮುಕ್ತಿ..
ಆಹಾರ ತಜ್ಞರ ಪ್ರಕಾರ ಯಾವ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಇರುತ್ತದೆ. ಅದರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದಕ್ಕೆ ಕೆಂಪಕ್ಕಿ ಒಂದು ಉದಾಹರಣೆ ಆಗಬಹುದು. ಅದು ಅಲ್ಲದೆ ಕೆಂಪಕ್ಕಿಯಲ್ಲಿ ದೇಹದ ಎಲ್ ಡಿ ಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಂತಹ ಶಕ್ತಿ ಇದೆ. ಇದು ಒಂದು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ ತಂತ್ರಗಾರಿಕೆಯನ್ನು ಹೇಳಬಹುದು.
ಕೆಂಪಕ್ಕಿ ಅನ್ನ ಸೇವನೆಯಲ್ಲಿ ಮಿತಿ ಇರಲಿ..
ನಾವು ಅಡುಗೆಗಾಗಿ ಬಳಸುವ ಇದರ ಧಾನ್ಯಗಳಂತೆ ಕೆಂಪಕ್ಕಿಯಲ್ಲಿ ಕೂಡ ಆರ್ಸೆನಿಕ್ ಅಂಶ ಕಂಡು ಬರುತ್ತದೆ. ಇದು ಸಮಾನ್ಯವಾಗಿ ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಹೆಚ್ಚಾಗಿದ್ದು, ಭತ್ತದ ಪೈರು ಅದನ್ನು ಹೀರಿಕೊಂಡು ಅಕ್ಕಿಯಲ್ಲಿ ಶೇಖರಣೆ ಮಾಡಿರುತ್ತದೆ. ಆರ್ಸೆನಿಕ್ ಅಂಶವನ್ನು ಹೆಚ್ಚಾಗಿ ಸೇವಿಸಿದಷ್ಟು ಮನುಷ್ಯ ಕ್ಯಾನ್ಸರ್, ಹೃದಯದ ಸಮಸ್ಯೆ ಮತ್ತು ಟೈಪ್ – 2 ಮಧುಮೇಹ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ.
ಕೆಂಪಕ್ಕಿ ಅನ್ನದ ಸೇವನೆಯಲ್ಲಿ ನಮ್ಮ ಅಭಿಪ್ರಾಯ ಹೀಗಿದೆ..
ಬಿಳಿ ಅನ್ನ ಸೇವನೆ ಮಾಡುವುದಕ್ಕಿಂತ ಕೆಂಪಕ್ಕಿಯನ್ನು ಸೇವೆ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದಕ್ಕೆ ಕಾರಣ ಅದರಲ್ಲಿರುವ ಆರೋಗ್ಯಕರ ಪೌಷ್ಟಿಕ ಸತ್ವಗಳು ಮತ್ತು ದೇಹದ ತೂಕವನ್ನು ಕಡಿಮೆ ಮಾಡುವ ಅದ್ಭುತ ಗುಣ ಲಕ್ಷಣಗಳು. ಅದು ಅಲ್ಲದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವುದರಿಂದ ರಕ್ತದ ಒತ್ತಡ, ಮಧುಮೇಹ ಮತ್ತು ಹೃದಯ ತೊಂದರೆ ಇಲ್ಲವಾಗುತ್ತದೆ. ಒಟ್ಟಾರೆಯಾಗಿ ನಮ್ಮ ಆರೋಗ್ಯ ವೃದ್ಧಿಯಲ್ಲಿ ಕೆಂಪಕ್ಕಿ ಅನ್ನದ ಪಾತ್ರ ತುಂಬಾ ದೊಡ್ಡದಿದೆ.