ನೀರು ಮಜ್ಜಿಗೆಗೆ ಚಿಟಿಕೆ ಇಂಗು ಬೆರೆಸಿ ಕುಡಿದ್ರೆ ಪರಿಣಾಮ ಏನಾಗತ್ತೆ?

0 107

ಮೂಲವ್ಯಾದಿ ಅಥವಾ ಪೈಲ್ಸ್ ಈ ಸಮಸ್ಸೆ ಒಂದು ರೀತಿಯಲ್ಲಿ ಮುಜುಗರ ಉಂಟು ಮಾಡುತ್ತದೆ. ಹೇಳಿಕೊಳ್ಳುವುದಕ್ಕೂ ಕೂಡ ಆಗುವುದಿಲ್ಲ. ಮನೆಯಲ್ಲಿ ಬಳಸುವ ಅಡುಗೆ ಪದಾರ್ಥದಲ್ಲಿ ಹೆಚ್ಚಿನವು ನಿಮ್ಮ ಅರೋಗ್ಯಕ್ಕೆ ಒಳ್ಳೆಯದು.ಅದರಲ್ಲಿ ಮಜ್ಜಿಗೆಗೆ ಇಂಗು ಹಾಕಿಕೊಂಡು ಕುಡಿದರೇ ತುಂಬಾನೇ ರುಚಿಕರ ಮತ್ತು ಅರೋಗ್ಯಕರ.

1, ಇಂಗು ಮತ್ತು ಮಜ್ಜಿಗೆ ಕುಡಿಯುವುದರಿಂದ ಹೃದಯದ ಅರೋಗ್ಯಕ್ಕೆ ಒಳ್ಳೆಯದು.

2,ಮಜ್ಜಿಗೆಗೆ ಹಲವಾರು ರೀತಿಯ ಮಸಾಲೆಗಳನ್ನು ಹಾಕಿಕೊಂಡು ತಯಾರಿಸಲಾಗುತ್ತದೆ. ಶುಂಠಿ, ಕಾಳುಮೆಣಸು ಮತ್ತು ಜೀರಿಗೆ, ಹಸಿ ಮೆಣಸುವ ಹಾಕಿಕೊಂಡು ಮಜ್ಜಿಗೆ ತಯಾರಿಸಿದರೆ ಆಗ ಅದು ರುಚಿಕರವಾಗಿರುವುದು ಮಾತ್ರವಲ್ಲದೆ ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗುವುದು. ಇದು ಎಣ್ಣೆಯುಕ್ತ ಆಹಾರವನ್ನು ಜೀರ್ಣಿಸಲು ಮತ್ತು ಹೊಟ್ಟೆಯ ಪದರಕ್ಕೆ ಶಮನ ನೀಡುವುದು. ಅಜೀರ್ಣ ಮತ್ತು ದೇಹದ ಉಷ್ಣತೆ ಕಡಿಮೆ ಮಾಡಲು ಇದು ಅತ್ಯುತ್ತಮ ಪಾನೀಯವಾಗಿದೆ.

ಜೀರ್ಣಕ್ರಿಯೆಗೆನೆರವಾಗುವ ಜತೆಗೆ ಇದರಲ್ಲಿ ಇರುವಂತಹ ಪ್ರೊಬಯೊಟಿಕ್ ಸೂಕ್ಷ್ಮಜೀವಿಗಳು, ಹೊಟ್ಟೆಯ ಸೋಂಕಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾದ ಬೆಳವಣಿಗೆ ಯನ್ನು ತಡೆಯುವುದು. ಮಜ್ಜಿಗೆ ಯಲ್ಲಿ ಕಂಡುಬರುವಂತಹ ರಿಬೊಫ್ಲಾವಿನ್ ಎನ್ನುವ ವಿಟಮಿನ್ ಯಕೃತ್ ಸರಿಯಾಗಿ ಕಾರ್ಯ ನಿರ್ವಹಿಸಲು ಮತ್ತು ನಿರ್ವಿಷಗೊಳಿಸಲು ನೆರವಾಗುವುದು.

ತೂಕ ಇಳಿಸಲು ಸಹಕಾರಿ
ಮಜ್ಜಿಗೆಯಲ್ಲಿ ಕೊಬ್ಬಿನಾಂಶವು ತುಂಬಾ ಕಡಿಮೆ ಇರುವ ಕಾರಣದಿಂದ ಮಜ್ಜಿಗೆಯು ತೂಕ ಇಳಿಸಿ ಕೊಳ್ಳಲು ತುಂಬಾ ಸಹಕಾರಿ. ಮಜ್ಜಿಗೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು, ಖನಿಜಾಂಶಗಳು, ಪೋಷಕಾಂಶಗಳಾದ ಪ್ರೋಟೀನ್, ಕ್ಯಾಲ್ಸಿಯಂ, ಪೊಟಾಶೀಯಂ, ಮೆಗ್ನಿಶಿಯಂ ಮತ್ತು ಇತರ ಕಿಣ್ವಗಳು ಇವೆ. ಇದು ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಲು ನೆರವಾಗುವುದು.

ಇದು ಹಸಿವನ್ನು ಹೆಚ್ಚಿಸಿದರೂ ನೀವು ಅನಾರೋಗ್ಯಕಾರಿ ಹಾಗೂ ಜಂಕ್ ಫುಡ್ ತಿನ್ನುವುದನ್ನು ಇದು ಕಡಿಮೆ ಮಾಡುವುದು.

ರಕ್ತದೊತ್ತಡ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುವುದು–ಒಂದು ದೊಡ್ಡ ಲೋಟ ಮಜ್ಜಿಗೆ ಕುಡಿದರೆ ಅದರಿಂದ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿ ಇಟ್ಟುಕೊಳ್ಳಬಹುದು. ಪ್ರತಿನಿತ್ಯವು ಮಜ್ಜಿಗೆ ಕುಡಿದರೆ ಅದರಿಂದ ರಕ್ತದೊತ್ತಡ ತಗ್ಗುವುದು. ಇದರಲ್ಲಿ ಇರುವಂತಹ ಹಾಲಿನ ಕೊಬ್ಬಿನ ಪ್ರೋಟೀನ್ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು. ಅದೇ ರೀತಿಯಾಗಿ ಇದರಲ್ಲಿ ಸೋಂಕು ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳು ಇವೆ. ಅಮೆರಿಕಾದಲ್ಲಿ ನಡೆಸಿದ ಸಂಶೋಧನೆಯೊಂದರ ಪ್ರಕಾರ ಮಜ್ಜಿಗೆಯು ಕೊಲೆಸ್ಟ್ರಾಲ್ ಮಟ್ಟವನ್ನು ಪರಿಣಾಮಕಾರಿ ಆಗಿ ನಿಯಂತ್ರಣದಲ್ಲಿ ಇಡುತ್ತದೆ ಎಂದು ತಿಳಿದುಬಂದಿದೆ.

ದೇಹಕ್ಕೆ ಪೋಷಣೆ ನೀಡುವುದು–ಸಮತೋಲಿತ ಆಹಾರ ಕ್ರಮಕ್ಕೆ ಬೇಕಾಗಿರುವಂತಹ ಎಲ್ಲಾ ರೀತಿಯ ಸೂಕ್ಷ್ಮಪೋಷಕಾಂಶಗಳು ಮಜ್ಜಿಗೆಯಲ್ಲಿ ಇದೆ. ಮಜ್ಜಿಗೆಯಲ್ಲಿ ಉನ್ನತ ಮಟ್ಟದ ಪ್ರೋಟೀನ್. ಕ್ಯಾಲ್ಸಿಯಂ ಮತ್ತು ಇತರ ಕೆಲವೊಂದು ಪೋಷಕಾಂಶಗಳಾಗಿರುವಂತಹ ಪೊಟಾಶಿಯಂ, ಕಬ್ಬಿಣ, ಸತು ಮತ್ತು ವಿಟಮಿನ್ ಗಳಾಗಿರುವ ಎ, ಬಿ, ಡಿ ಮತ್ತು ಇ ಇದ್ದು, ದೇಹಕ್ಕೆ ಪೋಷಣೆ ನೀಡುವಂತಹ ಎಲ್ಲಾ ಅಂಶಗಳನ್ನು

ಇದು ಹೊಂದಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಮಜ್ಜಿಗೆಯಲ್ಲಿ ಅದ್ಭುತವಾದ ಸಂಕೋಚನ ಗುಣವಿದೆ ಮತ್ತು ಇದು ಚರ್ಮಕ್ಕೆ ಪೋಷಣೆ ನೀಡುವುದು ಮಾತ್ರವಲ್ಲದೆ, ಚರ್ಮವನ್ನು ಬಿಗಿಯಾಗಿಸಲು ಪ್ರಮುಖ ಆಹಾರವಾಗಿದೆ.

ವಿಟಮಿನ್ ಗಳಿಂದ ಸಮೃದ್ಧ–ಮಜ್ಜಿಗೆಯಲ್ಲಿ ವಿಟಮಿನ್ ಬಿ ಸಂಕೀರ್ಣ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ವಿಟಮಿನ್ ಕೊರತೆ ಇರುವಂತಹವರು ನಿಶ್ಯಕ್ತಿ ಮತ್ತು ರಕ್ತಹೀನತೆ ನಿವಾರಣೆ ಮಾಡಲು ಮಜ್ಜಿಗೆ ಬಳಸಿಕೊಳ್ಳಬೇಕು. ಮಜ್ಜಿಗೆಯಲ್ಲಿ ಇರುವಂತಹ ವಿಟಮಿನ್ ಡಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಯಾವುದೇ ಸೋಂಕು ಬಾಧಿಸದಂತೆ ತಡೆಯುವುದು. ಒಂದು ಲೋಟ ಮಜ್ಜಿಗೆ ಕುಡಿದರೆ ಅದರಿಂದ ದಿನಕ್ಕೆ ದೇಹಕ್ಕೆ ಬೇಕಾಗುವಷ್ಟು ಪ್ರಮಾಣದ ವಿಟಮಿನ್ ಗಳು ಲಭ್ಯವಾಗುವುದು.

ರಕ್ತದೊತ್ತಡ ತಗ್ಗಿಸುವುದು–ಮಜ್ಜಿಗೆಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಜೈವಿಕ ಸಕ್ರಿಯ ಪ್ರೋಟೀನ್ ಗಳಿಂದ ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ನ್ನು ತಗ್ಗಿಸುವುದು ಮತ್ತು ಬ್ಯಾಕ್ಟೀರಿಯಾ ಹಾಗೂ ಸೋಂಕು ವಿರೋಧಿ ಗುಣಗಳನ್ನು ಹೊಂದಿದೆ. ನಿಯಮಿತವಾಗಿ ಮಜ್ಜಿಗೆ ಕುಡಿದರೆ ಅದರಿಂದ ರಕ್ತದೊತ್ತಡವು ಗಣನೀಯವಾಗಿ ಕಡಿಮೆ ಆಗಿರುವುದು ಅಧ್ಯಯನಗಳಿಂದಲೂ ಪತ್ತೆ ಆಗಿದೆ.

ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುವುದು=–ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಮತ್ತು ನಿಯಂತ್ರಣದಲ್ಲಿ ಇಡಲು ಮಜ್ಜಿಗೆಯು ನೆರವಾಗುವುದು. ಇದು ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಉತ್ತಮ ಆರೋಗ್ಯಕ್ಕಾಗಿ ಮಜ್ಜಿಗೆ ಕುಡಿದರೆ ಒಳ್ಳೆಯದು ಎಂದು ಆಯುರ್ವೇದವು ಹೇಳಿದೆ.

ಹೊಟ್ಟೆಯ ಆಮ್ಲೀಯತೆ ನಿಯಂತ್ರಿಸುವುದು–ಈ ಅದ್ಭುತ ಪಾನೀಯವು ಹೊಟ್ಟೆಯಲ್ಲಿ ಆಮ್ಲೀಯತೆ ಮತ್ತು ಹಿಮ್ಮುಖ ಹರಿವನ್ನು ತಡೆಯುವುದು. ಮಜ್ಜಿಗೆ ಹಾಕಿರುವಂತಹ ಮಸಾಲೆಗಳು ಮತ್ತು ಶುಂಠಿಯು ಹೊಟ್ಟೆಯಲ್ಲಿನ ಉರಿಯ ಸಮಸ್ಯೆ ನಿವಾರಣೆ ಮಾಡುವುದು. ಮಸಾಲೆ ಹಾಗೂ ಎಣ್ಣೆಯುಕ್ತ ಆಹಾರದಿಂದ ಹೊಟ್ಟೆಯ ಪದರಕ್ಕೆ ಆಗಿರುವಂತಹ ಹಾನಿಯನ್ನು ಇದು ತಡೆಯುವುದು.

ತೂಕ ಇಳಿಸಲು ಸಹಕಾರಿ–ತೂಕ ಇಳಿಸಿದರೂ ನಿಮಗೆ ಸ್ವಲ್ಪವೂ ನಿಶ್ಯಕ್ತಿ ಅಥವಾ ನಿರ್ಜಲೀಕರಣ ಉಂಟಾಗದೆ ಇರಲು ಮಜ್ಜಿಗೆ ಸೇವನೆ ಮಾಡಬೇಕು. ಮಜ್ಜಿಗೆಯಲ್ಲಿ ಇರುವಂತಹ ಪೋಷಕಾಂಶಗಳು ಮತ್ತು ಕಿಣ್ವಗಳು ಯಾವುದೇ ಕ್ಯಾಲರಿ ಇಲ್ಲದೆ ದೇಹಕ್ಕೆ ಲಭ್ಯವಾಗುವುದು. ಹಾಲು, ಮೊಸರು ಮತ್ತು ಚೀಸ್ ನಲ್ಲಿ ಕೊಬ್ಬು ಮತ್ತು ಕ್ಯಾಲರಿ ಇದೆ. ಮಜ್ಜಿಗೆ ನಿಯಮಿತವಾಗಿ ಕುಡಿದರೆ ಅದರಿಂದ ದೇಹವು ಶಕ್ತಿಯಿಂದ ಇರುವುದು. ಇದು ದೇಹಕ್ಕೆ ಪ್ರೋಟೀನ್, ವಿಟಮಿನ್, ಖನಿಜಾಂಶಗಳು, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ಇತರ ಕಿಣ್ವಗಳು ದೇಹಕ್ಕೆ ಶಕ್ತಿ ನೀಡುವುದು. ಇದು ಹೊಟ್ಟೆಗೆತೃಪ್ತಿ ನೀಡುವುದು ಮತ್ತು ಇದರಿಂದ ತೂಕ ಇಳಿಸಲು ಇದು ಸಹಕಾರಿ ಆಗಲಿದೆ.

ನಿರ್ಜಲೀಕರಣ ತಡೆಯುವುದು–ಬಿಸಿಲಿಗೆ ಹೊರಗಡೆ ಹೋಗುತ್ತಿದ್ದರೆ ಆಗ ನೀವು ಒಂದು ಬಾಟಲಿ ಮಜ್ಜಿಗೆ ಇಟ್ಟುಕೊಳ್ಳಿ ಅಥವಾ ಮನೆಗೆ ಮರಳಿದ ಕೂಡಲೇ ಒಂದು ಲೋಟ ಮಜ್ಜಿಗೆ ಕುಡಿಯಿರಿ. ನೀರು, ಮೊಸರು, ಉಪ್ಪು ಮತ್ತು ಮಸಾಲೆಗಳನ್ನು ಒಳಗೊಂಡಿರುವಂತಹ ಮಜ್ಜಿಗೆಯು ದೇಹಕ್ಕೆ ದ್ರವಾಂಶ ಮತ್ತು ವಿದ್ಯುದ್ವಿಚ್ಛೇದದ ಮಟ್ಟವನ್ನು ಹೆಚ್ಚಿಸುವುದು ಮತ್ತು ನಿರ್ಜಲೀಕರಣ ತಪ್ಪಿಸುವುದು.

Leave A Reply

Your email address will not be published.