ಹೊಸ ಮನೆಗೆ ಹೋಗುವುದಕ್ಕಿಂತ ಮುಂಚಿತವಾಗಿ ಹಳೆ ಮನೆಯಲ್ಲಿ ಯಾವ ವಸ್ತುಗಳನ್ನು ಬಿಟ್ಟು ಬರಬೇಕು!
ನೀವು ಹೊಸ ಮನೆಗೆ ಹೋಗುವಾಗ ಹಳೆಯ ಮನೆಯಲ್ಲಿ ಇರುವ ಸಾಮಾನುಗಳನ್ನು ಶಿಪ್ ಮಾಡುತ್ತ ಇರುತ್ತಿರಿ. ಹಳೆಯ ಮನೆಯ ಬಾಗಿಲು ಮುಚ್ಚುವ ಸಮಯದಲ್ಲಿ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಹಳೆಯ ಮನೆಯ ದೇವರ ಮನೆಯನ್ನು ಖಾಲಿ ಬಿಟ್ಟು ಬರಬಾರದು. ದೇವರ ಮನೆಯಲ್ಲಿ ರಂಗೋಲಿ ಹಾಕಿ ಎರಡು ವೀಳ್ಯದೆಲೆ ಇಟ್ಟು ಅರಿಶಿನ ಕುಂಕುಮ ಹಚ್ಚಿ ಹಾಗು ದೀಪವನ್ನು ಇಟ್ಟು ಎಣ್ಣೆ ಹಾಕಿ ಬತ್ತಿಯನ್ನು ಹಾಕಬೇಕು.
ಇನ್ನು ದೇವರ ಹತ್ತಿರ ಕೇಳಿಕೊಳ್ಳಬೇಕು. ಈ ಮನೆಯಲ್ಲಿ ಕಷ್ಟ ಸುಖ ಎಲ್ಲವನ್ನು ನೋಡಿದ್ದೇವೆ ಹಾಗು ನಾವು ಮತ್ತೊಂದು ಮನೆಗೆ ಹೋಗುತ್ತಿದ್ದೇವೆ ಅಲ್ಲಿ ಸುಖ ಶಾಂತಿ ನೆಮ್ಮದಿ ಸಿಗಲಿ ಹಾಗು ಈ ಮನೆಗೆ ಬರುವವರಿಗೂ ಸಹ ಒಳ್ಳೆಯದಾಗಲಿ ಎಂದು ಕೇಳಿ ದೀಪವನ್ನು ಹಚ್ಚಬೇಕು. ನಂತರ ನಿಮ್ಮ ಹೊಸ ಮನೆಗೆ ಹೋಗಬಹುದು. ಎಣ್ಣೆಯನ್ನು ಸಹ ಅಲ್ಲೆ ಬಿಟ್ಟು ಹಾಗು ದೀಪವನ್ನು ಸಹ ಅಲ್ಲೆ ಬಿಟ್ಟು ಹೋಗಬೇಕು.
ಉಪ್ಪನ್ನು ಸಹ ಹಳೆಯ ಮನೆಯಲ್ಲಿ ಬಿಟ್ಟು ಬರಬೇಕು ಹಾಗು ಪೊರಕೆಯನ್ನು ಸಹ ಹೊಸ ಮನೆಗೆ ತೆಗೆದುಕೊಂಡು ಹೋಗಬೇಡಿ.ಆದಷ್ಟು ಹೊಸ ಮನೆಗೆ ಹೊಸ ಪೊರಕೆಯನ್ನು ಉಪಯೋಗಿಸಿಕೊಳ್ಳಿ. ಹೊಸ ಮನೆ ಯಾವುದೇ ಕಾರಣಕ್ಕೂ ಕತ್ತಲು ಆಗಬಾರದು ಹಾಗು ಹಳೆಯ ಮನೆಯು ಕೂಡ ಕತ್ತಲಿನಿಂದ ಕೂಡಿರಬಾರದು.