ಪ್ರತಿದಿನ ಎಡಮಗ್ಗುಲಲ್ಲಿ ಮಲಗಿ ಇದ್ರಿಸೋದ್ರಿಂದ ಅರೋಗ್ಯದ ಮೇಲೆ ಪರಿಣಾಮ ಏನಾಗತ್ತೆ!

0 24,404

ವೈದ್ಯರ ಪ್ರಕಾರ ನಾವು ರಾತ್ರಿಯ ಸಮಯದಲ್ಲಿ ಏನಿಲ್ಲ ಅಂದರೂ ಸುಮಾರು ಎಂಟು ಗಂಟೆಗಳ ಕಾಲ ಮಲಗಿ ನಿದ್ರಿಸಬೇಕು. ಆದರೆ ಕಣ್ಣುಗಳಿಗೆ ನಿದ್ರೆಯ ಮಂಪರು ಬರುವವರೆಗೆ ಮಾತ್ರ ನಾವು ಎಚ್ಚರ ಇರುತ್ತೇವೆ. ನಮ್ಮಲ್ಲಿ ಹಾಗೂ ಅಕ್ಕಪಕ್ಕದಲ್ಲಿ ಏನಾಗುತ್ತದೆ ಎಂಬುದು ನಮಗೆ ಅರಿವಿರುತ್ತದೆ.

ನಿದ್ರೆ ಬಂದಮೇಲೆ ಪ್ರಪಂಚದ ಅರಿವು ಖಂಡಿತ ಇರುವುದಿಲ್ಲ. ಆದರೂ ಕೂಡ ನಮ್ಮ ದೇಹದಲ್ಲಿ ಕೆಲವೊಂದು ಚಟುವಟಿಕೆಗಳು ಸ್ವಯಂಚಾಲಿತವಾಗಿ ನಡೆಯುತ್ತಿರುತ್ತವೆ. ಇದಕ್ಕೆ ಅನುಕೂಲವಾಗುವಂತೆ ನಾವು ಸಹ ಉತ್ತಮವಾಗಿ ಮಲಗಿಕೊಳ್ಳುವ ಭಂಗಿಯನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಆರೋಗ್ಯ ತಜ್ಞರ ಪ್ರಕಾರ ನಾವು ಬೆನ್ನಿನ ಮೇಲೆ ಅಥವಾ ಬಲಗಡೆ ತಿರುಗಿಕೊಂಡು ಮಲಗಿಕೊಳ್ಳುವ ಕಾರಣದಿಂದ ಆರೋಗ್ಯದಲ್ಲಿ ಕೆಲವೊಂದು ತೊಂದರೆಗಳು ಉಂಟಾಗುತ್ತವೆ. ಆದರೆ ಇದನ್ನು ತಪ್ಪಿಸಲು ನಾವು ಎಡ ಮಗ್ಗಲಿನಲ್ಲಿ ತಿರುಗಿಕೊಂಡು ಮಲಗಿಕೊಳ್ಳಬೇಕು.. ಎಡಗಡೆ ತಿರುಗಿಕೊಂಡು ಮಲಗಿಕೊಳ್ಳುವುದರಿಂದ ಸಿಗುವ ಆರೋಗ್ಯದ ಲಾಭಗಳು ಯಾವುವು ಎಂದು ನೋಡುವುದಾದರೆ.

​ಆಮ್ಲೀಯತೆಯ ಪ್ರಲಾಪ ಕಡಿಮೆಯಾಗುತ್ತದೆ

ನಾವು ಆಹಾರ ಸೇವನೆ ಮಾಡಿದ ತಕ್ಷಣ ಹೊಟ್ಟೆಯಲ್ಲಿ ಒಳಪದರದ ಭಾಗದಲ್ಲಿ ಆಮ್ಲಿಯ ಅಂಶಗಳು ಉತ್ಪತ್ತಿಯಾಗುತ್ತವೆ.ಒಂದು ವೇಳೆ ಇದು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಅಥವಾ ಸಂಪೂರ್ಣವಾಗಿ ಆಹಾರವನ್ನು ಜೀರ್ಣ ಮಾಡಲು ಬಳಕೆಯಾಗದೆ ಇದ್ದರೆ ಅದು ಎದೆಯ ಭಾಗಕ್ಕೆ ತಲುಪುವ ಸಾಧ್ಯತೆ ಇರುತ್ತದೆ.ಈ ಸಮಯದಲ್ಲಿ ಎದೆಯುರಿ ಕಂಡುಬರಬಹುದು. ಯಾರು ಊಟ ಮಾಡಿದ ತಕ್ಷಣ ಹಾಸಿಗೆ ಮೇಲೆ ಬಲಗಡೆ ತಿರುಗಿ ಕೊಂಡು ಮಲಗಿಕೊಳ್ಳುತ್ತಾರೆ ಅಂತಹವರಿಗೆ ಇಂತಹ ಸಮಸ್ಯೆ ಸಾಮಾನ್ಯ ಎಂದು ಹೇಳಬಹುದು. ಹಾಗಾಗಿ ಸಾಧ್ಯವಾದಷ್ಟು ಎಡಗಡೆಗೆ ತಿರುಗಿಕೊಂಡು ಮಲಗಿಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.

​ಗೊರಕೆ ಹೊಡೆಯುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು

ಬಹಳಷ್ಟು ಜನರು ರಾತ್ರಿ ಮಲಗಿಕೊಂಡ ಸಂದರ್ಭದಲ್ಲಿ ವಿಪರೀತ ಗೊರಕೆ ಹೊಡೆಯುವುದನ್ನು ನೋಡಿದ್ದೇವೆ. ಅಷ್ಟೇ ಏಕೆ ನಮ್ಮ ಮನೆಯಲ್ಲೇ ಒಬ್ಬರು ಅಥವಾ ಇಬ್ಬರು ಈ ಸಮಸ್ಯೆಯನ್ನು ಹೊಂದಿರುತ್ತಾರೆ.ಇದಕ್ಕೆ ಕಾರಣ ಬಹಳ ಸುಲಭ. ನಾವು ಬೆನ್ನಿನ ಭಾಗದಲ್ಲಿ ಮಲಗಿಕೊಂಡರೆ ನಾಲಿಗೆಯ ಮಾಂಸಖಂಡಗಳು ಗಂಟಲಿನ ಭಾಗಕ್ಕೆ ಒತ್ತಿಕೊಂಡ ಹಾಗಿರುತ್ತವೆ.

ಈ ಸಮಯದಲ್ಲಿ ಉಸಿರಾಡುವಾಗ ಗಂಟಲಿನ ಭಾಗದಿಂದ ಶಬ್ದ ಕೇಳಿಬರುತ್ತದೆ. ಅದನ್ನು ಗೊರಕೆ ಎಂದು ಕರೆಯಬಹುದು. ಆದರೆ ಎಡ ಮಗ್ಗಲಿನಲ್ಲಿ ತಿರುಗಿಕೊಂಡು ಮಲಗಿಕೊಳ್ಳುವುದರಿಂದ ಶ್ವಾಸಕೋಶದ ಭಾಗದ ಮಾಂಸಖಂಡಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹೀಗಾಗಿ ನಿದ್ರೆ ಮಾಡುವಾಗ ಗೊರಕೆ ಶಬ್ದ ಬರುವುದಿಲ್ಲ..

​ದೇಹದ ಜೀರ್ಣಶಕ್ತಿ ಹೆಚ್ಚಾಗುತ್ತದೆ

ಸಾಧ್ಯವಾದಷ್ಟು ಎಡಗಡೆಗೆ ತಿರುಗಿ ಮಲಗಿಕೊಳ್ಳುವ ಕಾರಣದಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ. ಇದರಿಂದ ನಮ್ಮ ದೇಹದಲ್ಲಿನ ಬೇಡದ ಆಹಾರ ತ್ಯಾಜ್ಯಗಳು ಸುಲಭವಾಗಿ ಸಣ್ಣ ಕರುಳಿನಿಂದ ದೊಡ್ಡ ಕರುಳಿನ ಭಾಗಕ್ಕೆ ತಲುಪಲು ಸಹಾಯವಾಗುತ್ತದೆ.ಇದರಿಂದ ಹೊಟ್ಟೆಯಲ್ಲಿ ಜೀರ್ಣ ಶಕ್ತಿ ಅಭಿವೃದ್ಧಿ ಆಗುವುದರ ಜೊತೆಗೆ ದೇಹದ ಮೆಟಬಾಲಿಸಂ ಪ್ರಕ್ರಿಯೆ ಕೂಡ ಚುರುಕುಗೊಳ್ಳುತ್ತದೆ.

​ದುಗ್ಧರಸ ಗ್ರಂಥಿಯ ವ್ಯವಸ್ಥೆ ಆರೋಗ್ಯವಾಗಿರುತ್ತದೆ

ಸಂಶೋಧನೆಗಳು ಹೇಳುವ ಹಾಗೆ ಎಡಗಡೆಗೆ ತಿರುಗಿಕೊಂಡು ಮಲಗಿಕೊಳ್ಳುವುದರಿಂದ ನಮ್ಮ ದೇಹಕ್ಕೆ ಒಳಭಾಗದ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕಲು ಹೆಚ್ಚು ಸಮಯ ಸಿಗುತ್ತದೆ. ಏಕೆಂದರೆ ವಿಷಕಾರಿ ಅಂಶಗಳು ಎಡ ಭಾಗದಿಂದ ಬಲ ಭಾಗಕ್ಕೆ ಬರಲು ಇದು ಅನುಕೂಲ ಮಾಡಿಕೊಡುತ್ತದೆ.

​ರಕ್ತಸಂಚಾರ ಅಭಿವೃದ್ಧಿಯಾಗುತ್ತದೆ

ಗರ್ಭಿಣಿ ಮಹಿಳೆಯರಿಗೆ ಬೆನ್ನಿನ ಮೇಲೆ ಅಥವಾ ಬಲಭಾಗದಲ್ಲಿ ಮಲಗಿಕೊಳ್ಳುವುದಕ್ಕಿಂತ, ಎಡಗಡೆಗೆ ತಿರುಗಿ ಮಲಗಿಕೊಳ್ಳುವ ಕಾರಣದಿಂದ ಹೃದಯ, ಮೂತ್ರಪಿಂಡಗಳು ಮತ್ತು ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಭ್ರೂಣದ ಬಳಿಗೆ ಉತ್ತಮವಾದ ರಕ್ತಸಂಚಾರ ಉಂಟಾಗುತ್ತದೆ ಎಂದು ಹೇಳುತ್ತಾರೆ.ಇದರಿಂದ ಮಗುವಿನ ಅತ್ಯುತ್ತಮ ಬೆಳವಣಿಗೆ ಮತ್ತು ಪೌಷ್ಟಿಕ ಸತ್ವಗಳ ಲಭ್ಯತೆ ಇರುತ್ತದೆ. ಜೊತೆಗೆ ವೆರಿಕೋಸ್ ವೈನ್ಸ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದೊಂದು ಅತ್ಯುತ್ತಮ ಪರಿಹಾರ ಎಂದು ಹೇಳಬಹುದು.

​ಇನ್ನಿತರ ಪ್ರಯೋಜನಗಳು

ಎಡಭಾಗದಲ್ಲಿ ತಿರುಗಿ ಮಲಗಿಕೊಳ್ಳುವ ಕಾರಣದಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲಗಳಿವೆ. ನಮ್ಮ ಹೃದಯದ ಆರೋಗ್ಯ ಅತ್ಯುತ್ತಮವಾಗುತ್ತದೆ, ಬೆನ್ನು ನೋವು ಮತ್ತು ಕುತ್ತಿಗೆ ನೋವು ದೂರವಾಗುತ್ತದೆ ಇದರ ಜೊತೆಗೆ ಬೆನ್ನುಹುರಿಯ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ.

Leave A Reply

Your email address will not be published.