ಫೆಬ್ರವರಿ 14ರಂದು ವಸಂತ ಪಂಚಮಿ ಸರಸ್ವತಿ ಪೂಜಾ ವಿಧಾನ /ಪ್ರಸಾದ ಮಂತ್ರ ಸರಸ್ವತಿ ಯಂತ್ರ ಬರೆಯುವ ಸರಿಯಾದ ವಿಧಾನ!
14ನೇ ತಾರೀಕು ಬುಧವಾರ ವಸಂತ ಪಂಚಮಿ ಇದೆ.ಇಂದು ನಾವು ಸರಸ್ವತಿ ಪೂಜೆಯನ್ನು ಮಾಡುತ್ತೇವೆ.ಸರಸ್ವತಿ ಪೂಜೆ ಮಾಡುವ ಮೊದಲು ಗಣೇಶನ ಪೂಜೆ ಮಾಡಬೇಕು. ನಂತರ ಸರಸ್ವತಿ ಫೋಟೋ ಅಥವಾ ಸರಸ್ವತಿಗೆ ಸಂಬಂಧ ಪಟ್ಟ ವಸ್ತುವನ್ನು ಇಡಬೇಕು. ಮೊದಲು ಸರಸ್ವತಿ ಫೋಟೋ ಪುಸ್ತಕ ಇಟ್ಟು ಹೂವಿನಿಂದ ಅಲಂಕಾರ ಮಾಡಬೇಕು.ನಂತರ ತಾಮ್ರದ ಪ್ಲೇಟ್ ಅನ್ನು ಇಟ್ಟು ಅದರಲ್ಲಿ ಸರಸ್ವತಿ ಯಂತ್ರವನ್ನು ಬರೆಯಬೇಕು. ಇದರ ಮೇಲೆ ಅರಿಶಿನ ಕುಂಕುಮವನ್ನು ಹಾಕಿ ಎರಡು ವೀಳ್ಯದೆಲೆ ಇಟ್ಟು ಸ್ವಸ್ತಿಕ್ ಚಿಹ್ನೆ ಬರೆದು ಅರಿಶಿನ ಕುಂಕುಮವನ್ನು ಹಚ್ಚಬೇಕು. ಸರಸ್ವತು ವಿಗ್ರಹ ಇದ್ದರೆ ಅದನ್ನು ಇಡಬೇಕು. ಇಲ್ಲವಾದರೆ ಅರಿಶಿನ ತೆಗೆದುಕೊಂಡು ಅದಕ್ಕೆ ತುಪ್ಪ ಹಾಗು ನೀರು ಹಾಕಿ ಮಿಕ್ಸ್ ಮಾಡಬೇಕು.
ನಂತರ ಅದನ್ನು ಗೋಪುರ ರೀತಿ ತಯಾರಿಸಿ ಅದನ್ನು ಸರಸ್ವತಿ ಅಮ್ಮನವರು ಎಂದು ಆಹ್ವಾನೇ ಮಾಡಿಕೊಂಡು ವೀಳ್ಯದೆಲೆ ಮೇಲೆ ಇಡಬೇಕು. ನಂತರ ಗೆಜ್ಜೆ ವಸ್ತ್ರ ಹಾಕಿ ಅರಿಶಿನ ಕುಂಕುಮ ಹಚ್ಚಿ ಹೂವಿನಿಂದ ಅಲಂಕಾರ ಮಾಡಬೇಕು. ಸರಸ್ವತಿ ಗೆ ಪ್ರಿಯವಾದ 5 ನವಿಲುಗರಿಯನ್ನು ಇಡಬೇಕು. ಮಕ್ಕಳ ರೂಮ್ ನಲ್ಲಿ ನವಿಲುಗರಿ ಇಟ್ಟರೆ ಕ್ರಿಯಾಶೀಲತೆಗೆ ಹೆಚ್ಚಾಗೂ ಜ್ಞಾನಭಿವೃದ್ಧಿ ಹೆಚ್ಚಾಗುತ್ತದೆ. 9 ಸೇವಂತಿಗೆ ಹೂವು ಹಾಗು ಅಕ್ಷತೆ ರೆಡಿ ಮಾಡಿ 9 ದೇವರುಗಳ ಹೆಸರನ್ನು ಹೇಳಬೇಕು. ಒಂದೊಂದು ದೇವಿ ಹೆಸರು ಹೇಳಿ ಹೂವು ಅಕ್ಷತೆ ಇಡಬೇಕು. ನಂತರ ದೂಪವನ್ನು ಬೆಳಗಿ 5 ತುಪ್ಪದ ದೀಪವನ್ನು ಹಚ್ಚಬೇಕು.
ಆದಷ್ಟು ಸರಸ್ವತಿ ಅಮ್ಮನವರ ಅಷ್ಟೊತ್ತರ ಹೇಳಿಕೊಂಡು ಕುಂಕುಮ ಅರ್ಚನೆ ಮಾಡಬೇಕು. ನೈವೇದ್ಯಕ್ಕೆ ಕೇಸರಿ ಬಾತ್ ಮಾಡಿ ಇಟ್ಟರೆ ತುಂಬಾ ಒಳ್ಳೆಯದು ಹಾಗು ತಾಂಬೂಲ ಇಡಬೇಕು. ನಂತರ ಕಾಯಿ ಒಡೆದು ಮಂಗಳಾರತಿ ಮಾಡಿ ತೀರ್ಥ ಪ್ರೊಕ್ಷಣೆ ಮಾಡಬೇಕು. ಇದನ್ನು ಬೆಳಗ್ಗೆ ಮಕ್ಕಳು ಶಾಖೆಗೆ ಹೋಗುವ ಮೊದಲು ಮಾಡಿದರೆ ತುಂಬಾ ಒಳ್ಳೆಯದು.