ಮನೆ ಹತ್ತಿರ ಇರಬೇಕಾದ ಅತೀ ಮುಖ್ಯವಾದ ಮಹಾಲಕ್ಷ್ಮಿ ಅಂಶದ ಗಿಡಗಳು!
ಮಹಾಲಕ್ಷ್ಮಿ ಅಂಶವಾದ ಕೆಲವು ಅತೀ ಮುಖ್ಯವಾದ ಗಿಡಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲಿ ಇದ್ದೆ ಇರುತ್ತದೆ. ಆಧ್ಯಾತ್ಮಿಕವಾಗಿ ವೈಜ್ಞಾನಿಕವಾಗಿಯೂ ತುಂಬಾ ವಿಶೇಷ. ಮನೆಯಲ್ಲಿ ಮುಖ್ಯವಾಗಿ ಇರಬೇಕಾದ ಗಿಡಗಳು ಎಂದರೆ ತುಳಸಿ ವೀಳ್ಯದೆಲೆ ಮತ್ತು ದಾಸವಾಳ. ಈ ಗಿಡಗಳನ್ನು ಮನೆ ಮುಂದೆ ನೆಡಬೇಕು.
ಇನ್ನು ಮಹಾಲಕ್ಷ್ಮಿ ಅಂಶವಾದ ಮೆಹೆಂದಿ ಗಿಡ, ನಿಂಬೆಯ ಗಿಡವನ್ನು ಮನೆಯ ಪಕ್ಕದಲ್ಲಿ ಅಥವಾ ಮನೆಯ ಹಿಂದೆ ನೆಡಬಹುದು. ಇನ್ನು ಗುಲಾಬಿ ಗಿಡ ನೆಟ್ಟರು ಸಹ ಒಳ್ಳೆಯದೇ. ಇದನ್ನು ಮನೆಯ ಪಕ್ಕ ಅಥವಾ ಹಿಂದೆ ನೆಡಬಹುದು.
ಇನ್ನು ಬೆಟ್ಟದ ನೆಲ್ಲಿಕಾಯಿ ಗಿಡವನ್ನು ಮನೆಯ ಹತ್ತಿರ ನೆಡುವುದರಿಂದ ತುಂಬಾ ಒಳ್ಳೆಯದು. ಮನೆಯ ಹತ್ತಿರ ಬೇವಿನ ಗಿಡ ಮತ್ತು ಬಿಳಿ ಎಕ್ಕದ ಗಿಡ ತಾನಾಗೆ ಬಂದರೆ ತುಂಬಾ ಒಳ್ಳೆಯದು. ಸಾಧ್ಯವಾದರೆ ಅಲ್ಲಿ ಕುಂಕುಮ ಬೊಟ್ಟು ಇಟ್ಟು ಚಿಕ್ಕದಾದ ರಂಗೋಲಿ ಹಾಕಿ ಪ್ರತಿದಿನ ಸಂಜೆ ಒಂದು ದೀಪವನ್ನು ಹಚ್ಚಿದರೆ ನಿಮ್ಮ ಮನೆಗೆ ತುಂಬಾ ಶ್ರೇಯಸ್ಸು.