ಶನಿವಾರ ಜನಿಸಿದ ವ್ಯಕ್ತಿಯ ಜೀವನವು ಸಾಕಷ್ಟು ಕಠಿಣ ಸ್ಥಿತಿಗಳಿಂದ ಕೂಡಿರುತ್ತದೆ
ಶನಿವಾರ ಜನಿಸಿದ ವ್ಯಕ್ತಿಯ ಜೀವನವು ಸಾಕಷ್ಟು ಕಠಿಣ ಸ್ಥಿತಿಗಳಿಂದ ಕೂಡಿರುತ್ತದೆ
ಹಿಂದೂ ಪಂಚಾಂಗದ ಪ್ರಕಾರ ಶನಿವಾರ ಶನಿದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುತ್ತದೆ ಶನಿವಾರ ಜನಿಸಿದ ವ್ಯಕ್ತಿಯ ಜೀವನವು ಸಾಕಷ್ಟು ಕಠಿಣ ಪರಿಸ್ಥಿತಿಗಳಿಂದ ಕೂಡಿರುತ್ತದೆ ಶನಿವಾರ ಜನಿಸಿದ ವ್ಯಕ್ತಿಯ ಮೇಲೆ ಶನಿಯ ಪ್ರಭಾವ ಹೆಚ್ಚಾಗಿರುತ್ತದೆ ಅವರು ಜೀವನದಲ್ಲಿ ಸದಾ ನಿಶ್ಚಿತ ಮನೋಭಾವದಿಂದ ಕೂಡಿರುತ್ತಾರೆ ಇವರು ಕಟ್ಟುನಿಟ್ಟಾದ ಭಾವನೆಯನ್ನು ಹೊಂದಿರುತ್ತಾರೆ ಕೆಲವು ಸಂದರ್ಭಗಳಲ್ಲಿ ಅಚಲ ಮತ್ತು ಅನುಮಾನಸ್ಪದ ವರ್ತನೆಯನ್ನು ತೋರುವರು
ಇವರು ಅತ್ಯಂತ ಗಂಭೀರ ವ್ಯಕ್ತಿಗಳಂತೆ ತೋರುತ್ತಾರೆ ಆದರೆ ಇವರೊಂದಿಗೆ ಬೆರೆದಿರುವಂತಹ ವ್ಯಕ್ತಿಗಳಿಗೆ ಮಾತ್ರ ಅವರ ಅದ್ಭುತವಾದ ಭಾವನೆಗಳು ತಿಳಿಯುತ್ತದೆ ಇವರು ಸಮಯ ನಿರ್ವಹಣೆ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಇವರು ಎಲ್ಲಾ ವಿಷಯಗಳಲ್ಲಿಯೂ ಕಲಿಯುವ ಆಸಕ್ತಿಯನ್ನು ಹೊಂದಿರುತ್ತಾರೆ ಶನಿವಾರ ಜನಿಸಿದವರು ಅತ್ಯಂತ ಬುದ್ಧಿವಂತರು ಹಾಗೂ ವ್ಯವಹಾರದ ವಿಷಯದಲ್ಲಿ ಅತ್ಯಂತ ಯಶಸ್ಸನ್ನು ಪಡೆಯುತ್ತಾರೆ
ಆಂತರಿಕವಾದ ವ್ಯವಹಾರವನ್ನು ನಡೆಸಿ ಉತ್ತಮವಾದ ಲಾಭವನ್ನು ಪಡೆದುಕೊಳ್ಳುತ್ತಾರೆ ಇವರಿಗೆ ಯಾವುದೇ ರೀತಿಯ ವ್ಯವಹಾರವನ್ನು ನೀಡಿದರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಇವರು ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾರೆ ಇವರು ಕೆಲವು ಸಂದರ್ಭಗಳಲ್ಲಿ ತಮ್ಮ ಜಾನ್ಮೆಯನ್ನು ತೋರಬೇಕಾಗುತ್ತದೆ ಇವರು ಯಾವುದೇ ಕೆಲಸವನ್ನು ಅತಿ ಬೇಗ ಮುಗಿಸುವ ಮನೋಭಾವವನ್ನು ಹೊಂದಿರುತ್ತಾರೆ ವೃತ್ತಿ ಜೀವನದಲ್ಲಿ ಒಳ್ಳೆಯ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾರೆ
ಈ ವಾರ ಹುಟ್ಟಿದವರು ನಾಚಿಕೆಯ ಪ್ರವೃತ್ತಿಯನ್ನು ಹೊಂದಿರುತ್ತಾರೆ ಇವರು ತಮ್ಮ ಪ್ರೀತಿಯ ಜೀವನದಲ್ಲಿ ಸಂತೋಷವನ್ನು ಪಡೆದುಕೊಳ್ಳಲು ತಮ್ಮ ಪರಿವರ್ತನೆಯನ್ನು ಬದಲಿಸಿಕೊಳ್ಳಬೇಕು ಅಷ್ಟೇ ವಿಶಾಲವಾದ ಹೃದಯವನ್ನು ಹೊಂದಿರುವ ಇವರು ತಮ್ಮ ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಹಾಗೂ ಅವರಿಗೆ ಸಹಾಯ ಮತ್ತು ರಕ್ಷಣೆಯನ್ನು ನೀಡುತ್ತಾರೆ ಇವರು ತಮ್ಮ ಸಂಗಾತಿ ಅಥವಾ ಪ್ರೇಮಿಯನ್ನು ಹುಡುಕಲು ಸಾಕಷ್ಟು ಹುಡುಕಾಟ ಮತ್ತು ಪರಿಶೀಲನೆಯನ್ನು ನಡೆಸುತ್ತಾರೆ
ಸ್ವತಂತ್ರವಾಗಿ ಇರಲು ಬಯಸುವ ಇವರು ಎಲ್ಲ ವಿಷಯದಲ್ಲಿ ಸ್ಪಷ್ಟತೆ ಹಾಗೂ ಪ್ರಾಮಾಣಿಕರಾಗಿರುತ್ತಾರೆ ತಮ್ಮ ಸಂಗಾತಿಯ ಅಗತ್ಯತೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ ಇತರರ ಸಲಹೆ ಹಾಗೂ ನಿರ್ಧಾರಗಳನ್ನು ಅನುಸರಿಸಲು ಬಯಸುವುದಿಲ್ಲ ತಮ್ಮ ಇಷ್ಟಗಳಿಗೆ ಅನುಸಾರವಾಗಿ ತಮ್ಮ ಪ್ರೀತಿಯ ಜೀವನವನ್ನು ನಡೆಸುತ್ತಾರೆ ಈ ವ್ಯಕ್ತಿಗಳ ಜೀವನದಲ್ಲಿ ಕುಟುಂಬ ಜೀವನ ಕೆಲವೊಮ್ಮೆ ಗೊಂದಲ ಹಾಗೂ ವೈಮನಸ್ಸಿನಿಂದ ಕೂಡಿರುತ್ತದೆ
ಇವರು ಕುಟುಂಬದ ಜೀವನದಲ್ಲಿ ಕ್ರಮಬದ್ಧತೆಯನ್ನು ಬಯಸುತ್ತಾರೆ ಅದು ಇತರರಿಗೆ ತೊಂದರೆಯನ್ನು ಉಂಟುಮಾಡಬಹುದು ಇವರು ತಮ್ಮ ಕುಟುಂಬದ ರಕ್ಷಣೆಗೆ ಸಾಕಷ್ಟು ಶ್ರಮವನ್ನು ಪಡುತ್ತಾರೆ ಇವರು ತಮ್ಮ ಸಂಗಾತಿ ಮತ್ತು ಕುಟುಂಬದ ನಡುವೆ ಉತ್ತಮ ಬಾಂಧವ್ಯ ಹೊಂದಬೇಕು ಎಂದರೆ ಮೊದಲು ನಿಮ್ಮ ಸ್ವಭಾವವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಸಂಗಾತಿಯನ್ನು ಅವಮಾನಿಸುವುದು, ಅನುಮಾನಿಸುವುದು ಹಾಗೂ ಕೆಲವು ಆಜ್ಞೆಗಳನ್ನು ಪರಿಪಾಲಿಸುವಂತೆ ಒತ್ತಾಯಿಸಬಾರದು ಆಗ ನಿಮ್ಮ ಕುಟುಂಬದ ಜೀವನ ಉತ್ತಮವಾಗಿರುತ್ತದೆ ಹಾಗಾಗಿ ಅನುಮಾನವನ್ನು ಪಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳುತ್ತದೆ ನಾಚಿಕೆಯ ಸ್ವಭಾವವನ್ನು ದೂರ ಇಟ್ಟು ನಿಮ್ಮವರನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಕುಟುಂಬ ಜೀವನ ಚೆನ್ನಾಗಿರುತ್ತದೆ