ಪೂಜಾ ಗೃಹ ದೀಪದಲ್ಲಿ ಹೂವು ರಚನೆ ಉತ್ಪತ್ತಿ ನೇರವಾಗಿ ನೋಡಿ ದೈವ ಕೃಪೆಗೆ ಪಾತ್ರರಾಗಿ!
ನಮ್ಮ ಮನೆಯಲ್ಲಿ ನಾವು ಪ್ರತಿದಿನವೂ ದೀಪವನ್ನು ಹಚ್ಚುತ್ತೇವೆ. ದೀಪವು ನಮ್ಮ ಮುಂದಿನ ಉತ್ತಮವಾದ ಜೀವನದ ಸಂಕೇತವಾಗಿದೆ. ಹೌದು ದೀಪ ಎಷ್ಟು ಅಧಿಕವಾಗಿ ಉರಿಯುತ್ತದೆ ಅಷ್ಟೊಂದು ನಮಗೆ ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ದೀಪದಲ್ಲಿ ಹೂವಿನ ಹಾಗೆ ಆರಳುವುದನ್ನು ನೀವು ಕಾಣಿರುತ್ತೀರಿ. ಅಥವಾ ವಿವಿಧ ಆಕಾರದಲ್ಲಿ ದೀಪವು ಉರಿಯುವುದನ್ನು ನೀವು ನೋಡಿಯೇ ಇರುತ್ತೀರಿ. ಇದರ ಹಿಂದೆ ಇರುವ ರಹಸ್ಯ ತುಂಬಾನೇ ಸರಳವಾಗಿದೆ.
ನಿತ್ಯವೂ ನೀವು ನಿಮ್ಮ ಮನೆಯಲ್ಲಿ ನಿಮ್ಮ ಇಷ್ಟ ದೇವರಿಗೆ ದೀಪವನ್ನು ಹಚ್ಚುತ್ತೀರಿ. ಆ ದೀಪವು ಚೆನ್ನಾಗಿ ಉರಿಯುತ್ತಿದ್ದರೆ ನಿಮ್ಮ ಭಕ್ತಿ ಭಾವಗಳನ್ನು ದೇವರಿಗೆ ತಲುಪಿದೆ ಎಂದು ಅರ್ಥ ಆಗುತ್ತದೆ. ನಿಜವಾದ ಭಕ್ತಿ ಪ್ರಾರ್ಥನೆ ದೇವರಿಗೆ ಮುಟ್ಟುವ ಸಂಕೇತವಾಗಿದೆ. ಹಾಗೂ ದೇವರ ಆಶೀರ್ವಾದ ಕೃಪೆ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ. ದೇವರು ನಿಮ್ಮ ಜೊತೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಯಾವಾಗ್ಲೂ ಇರುತ್ತಾರೆ.
ನಿಮ್ಮ ಎಲ್ಲ ಕೆಲಸಗಳು ನೆರವೇರಲು ದೇವರು ಸಹಾಯ ಮಾಡುತ್ತಾರೆ. ಹೌದು ನಿಜವಾದ ಭಕ್ತಿಗೆ ದೇವರು ಎಲ್ಲಿದ್ದರೂ ಸರಿಯೇ ಸಹಾಯ ಮಾಡಿಯೇ ಮಾಡುತ್ತಾರೆ. ಇನ್ನೂ ಕೆಲವು ಜನರಿಗೆ ಈ ಬಗೆಯ ಯೋಚನೆ ಬರುತ್ತಿರುತ್ತದೆ. ನಮ್ಮ ಮನೆಯಲ್ಲಿ ನಾವು ಕೂಡ ನಿತ್ಯವೂ ದೀಪವನ್ನು ಹಚ್ಚುತ್ತೇವೆ. ಆದರೆ ನಮಗೆ ಯಾವುದೇ ಲಾಭಗಳು ಉಂಟಾಗುವುದಿಲ್ಲ ಅಂತ ಮನಸ್ತಾಪ ವ್ಯಕ್ತ ಪಡಿಸುತ್ತಾರೆ. ಹೀಗೆ ಆಗಲು ಕಾರಣವಿಷ್ಟೇ ಗೆಳೆಯರೇ ನೀವು ದೇವರ ಮೇಲೆ ಸಂಪೂರ್ಣವಾದ ನಂಬಿಕೆಯನ್ನು ಇಟ್ಟಿಲ್ಲವೆಂದು. ಹಾಗೂ ದೇವರ ಮೇಲೆ ನಿಮಗೆ ಕಡಿಮೆ ನಂಬಿಕೆ ಇರುವ ಕಾರಣ ನಿಮಗೆ ಇದರಿಂದ ಯಾವುದೇ ಲಾಭಗಳು ಸಿಗುವುದಿಲ್ಲ. ಹಾಗೆಯೇ ಯಾವುದೇ ಕೆಲಸ ಕಾರ್ಯಗಳು ಕೈಗೂಡುವುದಿಲ್ಲ ಒಂದು ವೇಳೆ ನಿಮ್ಮನ್ನು ನೀವು ದೇವರಿಗೆ ಸಮರ್ಪಣೆ ಮಾಡಿಕೊಂಡರೆ ಖಂಡಿತವಾಗಿ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ನಿಮ್ಮ ಎಲ್ಲ ಕೆಲಸಗಳು ಕಾರ್ಯಗಳು ಕನಸುಗಳು ನೆರವೇರುತ್ತವೆ.
ಒಂದು ವೇಳೆ ದೀಪದಲ್ಲಿ ಹೂವು ಅರಳುವುದನ್ನು ನೀವು ಕಂಡರೆ, ದೇವರ ಕೃಪೆ ಅನುಗ್ರಹ ಆಶೀರ್ವಾದ ನಿಮ್ಮ ಮೇಲೆ ಇದೆ ಎಂದು ತಿಳಿದುಕೊಳ್ಳಬೇಕು. ಇದು ದೊಡ್ಡದಾದ ಸಂಕೇತವಾಗಿದ್ದು ನಿಮ್ಮ ಕಷ್ಟ ಕಾರ್ಪನ್ಯಗಳಿಗೆ ದೇವರು ಮೊರೆ ಹೋಗಿ ಸಹಾಯ ಮಾಡಲು ಮುಂದಾಗುತ್ತಾನೆ ಅನ್ನುವ ಸಂಕೇತ ಕೂಡ ಇದಾಗಿದೆ. ಒಳ್ಳೆಯ ಮನೋಭಾವನೆ ಇಂದ ಹಾಗೂ ಶುದ್ಧವಾದ ಮನಸ್ಸಿನಿಂದ ಭಕ್ತಿ ಭಾವದಿಂದ ನೀವು ದೇವರಲ್ಲಿ ಪ್ರಾರ್ಥನೆ ಮಾಡಿದರೆ ನಿಮ್ಮ ಆಸೆಗಳು ಈಡೇರುತ್ತವೆ. ಇವರು ಮಾಡುವ ಪೂಜೆ ಪುರಸ್ಕಾರ ದೇವರಿಗೆ ಹೋಗಿ ತಲುಪುತ್ತದೆ. ಹಾಗೂ ಮನಸ್ಸಿಚ್ಚೆಗಳು ಸಂಪೂರ್ಣವಾಗಿ ಪೂರ್ತಿಯಾಗುತ್ತವೆ.
ದುಃಖ ದುಮ್ಮಾನಗಳು ನಶಿಸಿ ಹೋಗುತ್ತವೆ. ಕುಟುಂಬದಲ್ಲಿ ಯಾವುದೇ ಜಗಳಗಳು ಹೊಡೆದಾಟ ಬಡಿದಾಟ ಆಗುವುದಿಲ್ಲ. ಕಾರಣ ದೇವರು ನಿಮ್ಮ ಜೊತೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಇದ್ದಾನೆ ಎಂದು ಅರ್ಥ. ಪ್ರತಿಯೊಂದು ಹಂತದಲ್ಲಿ ದೇವರು ನಿಮ್ಮೊಂದಿಗೆ ಸದಾ ಕಾಲ ಇರುತ್ತಾರೆ. ಒಂದು ವೇಳೆ ನೀವು ಕೂಡ ದೀಪದಲ್ಲಿ ಹೂವು ಅರಳುವುದನ್ನು ಕಂಡರೆ ನೀವು ಧರ್ಮ ಪುಣ್ಯ ಮಾಡಬೇಕು. ಧರ್ಮ ಪುಣ್ಯ ಅಂದರೆ ಗೋಮಾತೆಗೆ ನೀವು ರೊಟ್ಟಿಯನ್ನು ಹಣ್ಣು ಹಂಪಲುಗಳನ್ನು ತಿನ್ನಿಸುವುದನ್ನು ಮಾಡಬೇಕು. ಹಾಗೂ ಬೆಕ್ಕು ನಾಯಿಗಳಿಗೆ ಬಿಸ್ಕಿಟ್ ಹಾಗೂ ಇನ್ನಿತರ ವಸ್ತುಗಳನ್ನು ತಿನ್ನಿಸಬೇಕು. ಮಂಗಳವಾರ ದಿನ ಪಾರಿವಾಳ ಪಕ್ಷಿಗಳಿಗೆ ದವಸ ಧಾನ್ಯಗಳನ್ನು ಹಾಕಬೇಕು. ಇದರಿಂದ ನಿಮಗೆ ಮತ್ತಷ್ಟು ಲಾಭಗಳು ಉಂಟಾಗುತ್ತವೆ ಹಾಗೂ ಎಲ್ಲ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿಗಳ ವಾತಾವರಣ ಸೃಷ್ಟಿ ಆಗುತ್ತದೆ.
ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸುಖ ಶಾಂತಿ ದೊರೆಯುತ್ತದೆ. ದೀಪದಲ್ಲಿ ಹೂವು ಅರಳುವುದನ್ನು ಕಂಡರೆ ನೀವು ಅದೃಷ್ಟವಂತರು ಹಾಗೂ ಭಾಗ್ಯಶಾಲಿಗಳು ಆಗುತ್ತೀರೀ. ಹೂವು ಅರಳುವುದರ ಅರ್ಥ ಭಗವಂತನು ನಿಮ್ಮ ಪ್ರಾರ್ಥನೆ ಹಾಗೂ ಪೂಜೆ ಪುರಸ್ಕಾರವನ್ನು ಸ್ವೀಕಾರ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು.