ಸತ್ಯನಾರಾಯಣ ವ್ರತವನ್ನು ಆಚರಿಸುವುದು ಏಕೆ?

0 12

ಸತ್ಯನಾರಾಯಣ ವ್ರತವನ್ನು ಆಚರಿಸುವುದು ಏಕೆ?

ವರ್ಷವರ್ಷವೂ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವವರು ಇದ್ದಾರೆ. ಅದೇ ರೀತಿ ಅನಂತಪದ್ಮನಾಭ ವ್ರತವನ್ನೂ, ಸತ್ಯನಾರಾಯಣ ವ್ರತವನ್ನೂ ಆಚರಿಸುವವರು ಇದ್ದಾರೆ. ವ್ರತಗಳನ್ನು ಆಚರಿಸುವ ಉದ್ದೇಶವಾದರೂ ಏನು ನೀವೇ ನೋಡಿ

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

ಮಹಾಲಕ್ಷ್ಮಿಯು ಸಂಪತ್ ಸಮೃದ್ಧಿಯ ವರವನ್ನು ಕರುಣಿಸುವ ಮೂಲಕ ಶ್ರೇಯಸ್ಸಿನ ಅಥವಾ ಯಶಸ್ಸಿನ ಸೌಭಾಗ್ಯಕ್ಕೆ ಕಾರಣಳಾಗುವವಳು. ಮಹಾಲಕ್ಷ್ಮಿ ಯೊಡನೆ ಸಂಪತ್ ಸಮೃದ್ಧಿಯನ್ನು ಕರುಣಿಸಿ ಶ್ರೇಯಸ್ಸು ಯಶಸ್ಸುಗಳ ಸೌಭಾಗ್ಯ ಅನುಗ್ರಹಿಸುವಂತೆ ಮೊರೆ ಇಡುತ್ತಾ ಸಾಮಾನ್ಯವಾಗಿ ಹೆಂಗಳೆಯರು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಅದಕ್ಕಾಗಿ ಸಂಪತ್ತು ತುಂಬಿ ಹರಿಯುವ ಪ್ರತೀಕವಾಗಿ ಪವಿತ್ರ ಜಲ ತುಂಬಿರುವ ಕಲಶವನ್ನೂ, ಸೌಭಾಗ್ಯವೂ ಕಣಕಣದಲ್ಲೂ ಉಕ್ಕುವ ಪ್ರತೀಕವಾಗಿ ಅಕ್ಕಿ ತುಂಬಿರುವ ಕಲಶವನ್ನೂ ಸ್ಥಾಪಿಸಿ ಅವುಗಳಲ್ಲಿ ಮಹಾಲಕ್ಷ್ಮಿಯನ್ನು ಆವಾಹಿಸಲಾಗುತ್ತದೆ. ವರ್ಷದ 12 ತಿಂಗಳೂ ಸಂಪತ್ತು, ಶ್ರೇಯಸ್ಸು, ಯಶಸ್ಸುಗಳ ಸೌಭಾಗ್ಯದ ವರವನ್ನು ಕರುಣಿಸಿ ಕಾಪಾಡುವ ಮಹಾಲಕ್ಷ್ಮಿಯ ದಿವ್ಯ ಕೃಪೆಯ ದ್ಯೋತಕವಾಗಿ 12 ಗಂಟುಗಳಿರುವ ಹಳದಿ ದಾರವನ್ನು ಮಹಾಲಕ್ಷ್ಮಿಗೆ ಅರ್ಪಿಸಿ ಕೈಗೆ ಕಟ್ಟಿಕೊಂಡು, ವರ್ಷವಿಡೀ ಸಂಪತ್ತು, ಶ್ರೇಯಸ್ಸು, ಯಶಸ್ಸುಗಳ ದಿವ್ಯವರ ಕರುಣಿಸುವಂತೆ ಮೊರೆ ಇಡುತ್ತಾ, ಭಕ್ತಿ, ಶ್ರದ್ಧೆಗಳಿಂದ ಮಹಾಲಕ್ಷ್ಮಿಯ ಕೃಪೆಗಾಗಿ ( ಆದ್ದರಿಂದಲೇ ಹಳದಿ ದಾರ) ಸತತ ಸ್ಮರಿಸುವ ದೀಕ್ಷೆ ತೊಟ್ಟು ಪೂಜೆಗೆಯ್ಯುವುದೇ ಈ ವ್ರತಾಚರಣೆಯ ವಿಧಾನ.

ಅನಂತಪದ್ಮನಾಭ ವ್ರತವು ಕಷ್ಟ-ನಷ್ಟ ಗಳನ್ನೆಲ್ಲ ಕರಗಿಸುವಂತೆ ಮಹಾವಿಷ್ಣುವಿನ ವಿಶೇಷ ಕೃಪೆಗಾಗಿ ಕೈಗೊಳ್ಳುವ ವ್ರತ. ಇದರಲ್ಲಿ ಕಲಶದಲ್ಲಿ ಯಮುನೆಯನ್ನು ಸ್ಥಾಪಿಸಿ, ಅದರ ಮೇಲೆ ಹೆಡೆಯ ಆಶ್ರಯದಲ್ಲಿರುವ ಸಾಲಿಗ್ರಾಮವನ್ನೂ, 14 ಗಂಟು ಗಳಿರುವ ಕೆಂಪುದಾರವನ್ನೂ ಇಟ್ಟು ಪೂಜಿಸಿ, ಆ ದಾರವನ್ನು ಕೈಗೆ ಕಟ್ಟಿಕೊಳ್ಳಲಾಗುತ್ತದೆ. ಬಾಳಿನ ಕಷ್ಟನಷ್ಟಗಳಿಗೆ ಕಾರಣವಾಗುವ ಸಂಚಿತ ಕರ್ಮ ಹೆಡೆಬಿಚ್ಚಿದಾಗ ಅಂದು ಕೃಷ್ಣನಾಗಿ ಯಮುನೆಯಲ್ಲಿ ಕಾಳಿಂಗನ ಹೆಡೆಯ ಮೇಲೆ ಕುಣಿದು ಮರ್ದಿಸಿ ದಂತೆ ಮರ್ದಿಸಿಯೋ, ಅನಂತಪದ್ಮನಾಭನಾಗಿ ಶೇಷನ ಹೆಡೆಯನ್ನು ತಂಪೀವ ಕೊಡೆಯಾಗಿ ಸಿದಂತೆ ಕೊಡೆಯಾಗಿಸಿಯೋ, ಭೂಮಿಯ ಮೇಲ್ಗಡೆಯ ಹಾಗೂ ಕೆಳಗಡೆಯ ಏಳೇಳು ಲೋಕಗಳಿಂದ ಕಷ್ಟನಷ್ಟಗಳ ಸಂಕುಲವನ್ನು ಸಣ್ಣ ಗಂಟುಗಳೋಪಾದಿಯಲ್ಲಿ ಕರಗಿಸಿ ಕಾಪಾಡುವಂತೆ ದೀನ ಮೊರೆ ಸಲ್ಲಿಸಿ ಪೂಜಿಸುತ್ತಾ, ಅಚಲ ಶ್ರದ್ಧಾಭಕ್ತಿ ನಿಷ್ಠೆಗಳನ್ನು ರಕ್ತಗತವಾಗಿಸಿಕೊಂಡು ( ಆದ್ದರಿಂದಲೇ ಕೆಂಪು ದಾರ) ಮುಂದಿನ ದಿನಗಳಲ್ಲಿ ಬಾಳುವ ದೀಕ್ಷೆತೊಡುವುದೇ ಈ ವ್ರತಾಚರಣೆಯ ವಿಧಾನ.

ಸತ್ಯನಾರಾಯಣ ದೇವರು ಸತ್ಯಸಂಕಲ್ಪ ನಾದ ಎಂದರೆ ಸಂಕಲ್ಪಿಸಿದ್ದನ್ನು ಅಥವಾ ಎಣಿಸಿದ್ದನ್ನು ಸತ್ಯವಾಗಿಸುವ ಅಥವಾ ಕರುಣಿಸುವ ನಾರಾಯಣ ದೇವರು. ಆದ್ದರಿಂದ ಕಷ್ಟ ಕಂಟಕಗಳನ್ನು ನೀಗಿಸಿ ಇಷ್ಟಾರ್ಥ ಕರುಣಿಸುವಂತೆ ಸತ್ಯನಾರಾಯಣ ಪೂಜೆ ಅಥವಾ ವ್ರತವನ್ನು ಆಚರಿಸುತ್ತಾರೆ. ಅದಕ್ಕಾಗಿ ಕಲಶದಲ್ಲಿ ಸತ್ಯನಾರಾಯಣ ದೇವರನ್ನು ಆವಾಹಿಸಿ, ಶ್ರದ್ಧಾಭಕ್ತಿಗಳಿಂದ ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿಯೇ ಅನಾದಿಕಾಲದಿಂದಲೂ ಸತ್ಯನಾರಾಯಣ ವ್ರತ ಕೈಗೊಂಡು ಇಷ್ಟಾರ್ಥ ಸಿದ್ಧಿಸಿಕೊಂಡವರ ಕಥೆಗಳನ್ನು ಉಲ್ಲೇಖಿಸಿ ಸತ್ಯನಾರಾಯಣ ದೇವರ ಮಹಿಮೆಯನ್ನು ಮನಗಾಣಿಸಿ, ಇಷ್ಟಾರ್ಥ ಸಿದ್ಧಿಸುವ ಸತ್ಯನಾರಾಯಣ ದೇವರ ಕೃಪೆಯ ಭರವಸೆಯನ್ನು ಮೂಡಿಸಲಾಗುತ್ತದೆ. ಸತ್ಯವಾದ ಶ್ರದ್ಧಾಭಕ್ತಿಯಿಂದ ಸತ್ಯನಾರಾಯಣ ದೇವರ ಮೊರೆಹೋದಲ್ಲಿ ಸತ್ಯನಾರಾಯಣದೇವರು ಸತ್ಯಸಂಕಲ್ಪ ಇಷ್ಟಾರ್ಥಗಳನ್ನೆಲ್ಲಾ ಸತ್ಯವಾಗಿಸುವನೆಂಬ ನಿಷ್ಠೆಯಿಂದ ಸತ್ಯನಾರಾಯಣದೇವರಪೂಜೆ ನೆರವೇರಿಸುವುದೇ ಈ ವ್ರತಾಚರಣೆಯ ವಿಧಾನ

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

Leave A Reply

Your email address will not be published.