ಮಲೆ ಮಹದೇಶ್ವರ ಸ್ವಾಮಿ ಬೆಟ್ಟದ ರಹಸ್ಯಗಳು
ಮಲೆ ಮಹದೇಶ್ವರ ಸ್ವಾಮಿ ಬೆಟ್ಟದ ರಹಸ್ಯಗಳು
ಮಹದೇಶ್ವರ ಸ್ವಾಮಿಯ ಪಾಲಕರು ಶ್ರೀ ಚಂದ್ರಶೇಖರ ಮೂರ್ತಿ ಹಾಗೂ ಉತ್ತರಾಜಮ್ಮ ಅವರು ಮಹದೇಶ್ವರ ಸ್ವಾಮಿಯನ್ನು ಮೊದಲ ಬಾರಿಗೆ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಲ್ಲಿ ನೋಡಿದರು ಅಲ್ಲಿಂದ ಬಂದ ನಂತರ ಸುತ್ತೂರು,ಕುಂತೂರು ಮಠದ ಮಾರ್ಗವಾಗಿ ಈಗಿನ ಮಹದೇಶ್ವರ ದೇವಸ್ಥಾನದ ಪ್ರದೇಶಕ್ಕೆ ಬಂದು ತಮಗೆ ವಾಸ ಮಾಡಲು ಯೋಗ್ಯವಾದ ಸ್ಥಳ ಇದೆ ಎಂದು ತೀರ್ಮಾನ ಮಾಡಿ ಅಲ್ಲೇ ನೆಲೆ ನಿಂತರಂತೆ
ಸುಮಾರು 600 ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು ಬೆಟ್ಟದಲ್ಲಿ ನೆಲೆಸಿ ದೀರ್ಘಕಾಲ ಜಪತಪವನ್ನು ಮಾಡಿದ್ದರಂತೆ ಅವರ ದೀರ್ಘಕಾಲದ ಜಪದಿಂದ ಜನರ ಕಷ್ಟಗಳನ್ನು ನಿವಾರಿಸುತ್ತಿದ್ದಾರಂತೆ ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗದ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ ಬೆಟ್ಟದಿಂದ ಸುತ್ತುವರಿದ ವಿಶಾಲ ಪ್ರದೇಶದಲ್ಲಿ ಇರುವ ದೇವಾಲಯ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿದೆ ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹಾದೇಶ್ವರ ಒಬ್ಬ ಮಹಿಮಾ ಪುರುಷ, ಪವಾಡ ಪುರುಷ ಎಂದು ಕಾವ್ಯಗಳಲ್ಲಿ ಕರೆಯಲಾಗುತ್ತದೆ ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಹದೇಶ್ವರರು ಜನ್ಮ ತಾಳಿದರೆಂದು ಕುರುಹುಗಳು ಇದೆ ತಮ್ಮ ಅಪಾರವಾದ ಶಕ್ತಿಯಿಂದ ಅವರು ಸಮಾಜದ ಉದ್ದಾರಕ್ಕಾಗಿ ಶ್ರಮಿಸುತ್ತಿದ್ದರು
ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂದು ಎಲ್ಲರ ನಂಬಿಕೆ ಜೊತೆಗೆ ಹೈದರಾಲಿಯ ಕಾಲ 1761ರ ಒಂದು ಶಾಸನದಲ್ಲಿ ಮಹದೇಶ್ವರನ ಬಗ್ಗೆ ವಿವರಗಳನ್ನು ಕಾಣಬಹುದು ಇವರು ಹನಗನಹಳ್ಳಿಯಲ್ಲಿ ಮಠದ ಮೂರನೇ ಮಠಾಧೀಶರಾಗಿದ್ದಾರೆಂದು ತಿಳಿದು ಬರುತ್ತದೆ ಮಹದೇಶ್ವರರು ಈಗಿನ ಮಹಾದೇಶ್ವರ ದೇವಸ್ಥಾನದ ಪ್ರದೇಶದಲ್ಲೂ ಮಠವನ್ನು ಸ್ಥಾಪಿಸಿದರೆಂದು ಇತಿಹಾಸದಿಂದ ತಿಳಿದು ಬಂದಿದೆ ಅಲ್ಲಿನ ಜನರು ಪ್ರಮುಖವಾಗಿ ಆದಿವಾಸಿ ಗಿರಿಜನರನ್ನು ಸುಶಿಕ್ಷಿತ ಸಭ್ಯ ಜನರನ್ನಾಗಿ ಪರಿವರ್ತಿಸಬೇಕೆಂಬ ಕಾರ್ಯಗಳಿಗಾಗಿ ಮಟ ಸ್ಥಾಪಿಸಿದ್ದರು ಎನ್ನುವುದು ಮಹದೇಶ್ವರರ ಲೋಕ ಕಲ್ಯಾಣದ ಸೇವೆಯಲ್ಲಿ ಕಾಣಬಹುದು
ಅಲ್ಲಿನ ಏಳು ಮಲೆ ಬೆಟ್ಟಗಳನ್ನು ವಿವಿಧ ಜಾನಪದ ಹೆಸರುಗಳಿಂದ ಕರೆಯಲಾಗುತ್ತದೆ 22 ಬೆಟ್ಟಗಳಲ್ಲಿ ಆನೆ ಮಲೆ, ಜೇನುಮಲೆ, ಕಾಣಮಲೆ, ಪಂಚಮಲೆ, ಪವಳ ಮಲೆ, ರುದ್ರಾಕ್ಷಿ ಮಲೆ, ವಿಭೂತಿಮಲೆ, ಕೊಂಗಮಲೆ ಬೆಟ್ಟಗಳಿಂದ ಸುತ್ತುವರಿದ ಸಂಪೂರ್ಣ ಪ್ರದೇಶವನ್ನು ಮಹದೇಶ್ವರ ಬೆಟ್ಟ ಎಂದು ಕರೆಯುತ್ತಾರೆ ಈ ಪುಣ್ಯ ಕ್ಷೇತ್ರದ ಮಹಿಮೆಯು ಲೋಕ ವಿಕ್ಯಾತಿಯಿಂದಾಗಿ ಮಲೆಯ ಮಹತ್ಕಾರ ಮಹಾದೇವನನ್ನು ನೆನೆದು ದೂಪ ಮತ್ತು ದೀಪ ಹಚ್ಚಿ ನಮ್ಮನ್ನು ಕಾಯುತಂದೆ ಎನ್ನುತ್ತಾ ಮಹದೇಶ್ವರ ಬೆಟ್ಟಕ್ಕೆ ಬಂದು ಹೋಗುವವರು ಹೆಚ್ಚು
ಮಹದೇಶ್ವರ ಸ್ವಾಮಿಯ ಜನರು ಕೇಳಿದ ವರಗಳನ್ನು ನೀಡುತ್ತಾ ಜನರ ಸಂಕಷ್ಟಗಳನ್ನು ನಿವಾರಿಸುವ ಸ್ವಾಮಿ ಈ ಬೆಟ್ಟವು ಕೊಳ್ಳೇಗಾಲಕ್ಕೆ 80 ಕಿಲೋಮೀಟರ್ ಹಾಗೂ ಮೈಸೂರಿನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಹೆಸರುಗಳಿಂದ ಖ್ಯಾತಿ ಪಡೆದಿರುವ ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರ ಸ್ಥಳವಾಗಿದೆ