ಕೊತ್ತಂಬರಿ ಸೊಪ್ಪು ಅಡುಗೆಯಲ್ಲಿ ಬಳಸುವ ಪ್ರತಿಯೊಬ್ಬರು ನೋಡಲೇಬೇಕಾದ ಮಾಹಿತಿ!

0 9,962

ಚಳಿಗಾಲದಲ್ಲಿ ಕೊತ್ತಂಬರಿ ಸೊಪ್ಪಿಗೆ ಕೊರತೆ ಇಲ್ಲಾ. ಕೊತ್ತಂಬರಿ ಸೊಪ್ಪು ಸಾಮಾನ್ಯವಾಗಿ ತರಕಾರಿಗಳಲ್ಲಿ ಪರಿಮಳಕ್ಕಾಗಿ ಮಾತ್ರ ಬಳಸಲಾಗುತ್ತದೆ.ಅದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ನೀವು ಮಲಬದ್ಧತೆ ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ ಕೊತ್ತಂಬರಿ ಸೊಪ್ಪು ನಿಮಗೆ ಉಪಯೋಗ ಆಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆಹಾರ ತಜ್ಞರ ಪ್ರಕಾರ ಕೊತ್ತಂಬರಿ ಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳು ಇವೇ. ಇದರಲ್ಲಿ ವಿಟಮಿನ್ ಸಿ ವಿಟಮಿನ್ ಕೆ ಆಂಟಿ ಆಕ್ಸಿಡೆಂಟ್ ಕ್ಯಾರೋಟಿನ್ ಇತ್ಯಾದಿಗಳು ಇವೇ. ಕೊತ್ತಂಬರಿ ಸೊಪ್ಪು ಬಹಳ ಕಡಿಮೆ ಕೊಬ್ಬನ್ನು ಹೊಂದಿರುತ್ತವೆ.ಹಾಗದರೆ ಕೊತ್ತಂಬರಿ ಸೊಪ್ಪಿನಿಂದ ಸಿಗುವ ಲಾಭಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳೋಣ ಬನ್ನಿ.

1, ಕೊತ್ತಂಬರಿ ಸೊಪ್ಪು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಪೊಟ್ಯಾಶಿಯಂ ಕ್ಯಾಲ್ಸಿಯಂ ವಿಟಮಿನ್ ಸಿ ಮತ್ತು ಮೆಗ್ನೀಷಿಯಂ ಸಮೃದ್ಧವಾಗಿದೆ.ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.2, ಕೊತ್ತಂಬರಿ ಸೊಪ್ಪು ಸೇವನೆಯಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚುತ್ತದೆ.ಅಲ್ಲದೆ ಕೆಟ್ಟ ಕೊಲೆಸ್ಟ್ರೇಲ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಚಳಿಗಾಲದಲ್ಲಿ ಕೊತ್ತಂಬರಿ ಸೊಪ್ಪು ಸೇವಿಸುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.

3, ಕೊತ್ತಂಬರಿ ಎಲೆ ಸೇವನೆಯು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ.ಏಕೆಂದರೆ ಇದು ಇನ್ಸೂಲಿನ್ ಬಿಡುಗಡೆ ಮಾಡುತ್ತದೆ.ಇದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.4, ಕೊತ್ತಂಬರಿ ಯಕೃತ್ತಿನ ಕಾರ್ಯವನ್ನು ಸಕ್ರಿಯಗೊಳಿಸುತ್ತದೆ. ಆ ಮೂಲಕ ಅನಿಲ ಹೊಟ್ಟೆ ಉಬ್ಬರದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

5, ಕೊತ್ತಂಬರಿ ಸೊಪ್ಪು ನಿಯಮಿತವಾಗಿ ಸೇವನೆ ಮಾಡುವುದರಿಂದ ಜೀರ್ಣಶಕ್ತಿ ಕೂಡ ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಕೊತ್ತಂಬರಿ ಸೊಪ್ಪು ಉತ್ತಮ ಗಿಡ ಮೂಲಿಕೆ ಆಗಿದೆ.6, ಕೊತ್ತಂಬರಿ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಇದೆ. ಇದು ರಕ್ತದ ಅಂಶ ಹೆಚ್ಚಲು ಸಹಾಯಮಾಡುತ್ತದೆ. ಇನ್ನು ಕೊತ್ತುಂಬರಿಸೊಪ್ಪು ಸೇವನೆ ಚರ್ಮವನ್ನು ಮೃದುವಾಗಿಸುತ್ತದೆ. ಮೊಡವೆಗಳು ಮತ್ತು ಬ್ಲಾಕ್ ಹೆಡ್ಸ್ ಗಳು ನಂತಹ ಸಮಸ್ಯೆಗಳನ್ನು ತೆಗೆದುಹಾಕಲು ಇದು ಸಹಾಯಕವಾಗಿದೆ.ಇನ್ನು ರೋಗನಿರೋಧಕ ಶಕ್ತಿ ಹೆಚ್ಚಿಸುವ ಉತ್ಕರ್ಷಕ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ.

Leave A Reply

Your email address will not be published.