ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ನಿಮಗೆ ಕ್ಯಾನ್ಸರ್‌ ಇದೆ ಎಂದು ಅರ್ಥ!

0 118,191

ಕ್ಯಾನ್ಸರ್ ಎನ್ನುವ ಪದ, ನಮ್ಮನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ! ಯಾಕೆಂದ್ರೆ ಈ ಕಾಯಿಲೆ ಕಾಣಿಸಿಕೊಂಡ ಮೇಲೆ, ಸಾವು ಖಚಿತ ಎನ್ನುವ ಆಲೋಚನೆ ನಮ್ಮ ಮನದಲ್ಲಿ ಬಂದು ಹೋಗುತ್ತದೆ. ಆದರೆ ಈ ಕಾಯಿಲೆಯ ಲಕ್ಷಣಗಳನ್ನು ಮೊದಲೇ ತಿಳಿದುಕೊಂಡರೆ, ಈ ಕಾಯಿಲೆಯಿಂದ ಪಾರಾಗಬಹುದು.ನಮ್ಮ ಆರೋಗ್ಯದಲ್ಲಿ ಸಣ್ಣದಾಗಿ ಸಮಸ್ಯೆಗಳು ಕಂಡುಬಂದರೂ ಕೂಡ, ನಿಧಾನವಾಗಿ ನಮಗೆ ಒಂದೊಂದೇ ಸೂಚ ನೆಗಳು, ರೋಗ ಲಕ್ಷಣಗಳ ಮೂಲಕ ಕಂಡು ಬರಲು ಶುರುವಾಗುತ್ತದೆ. ಉದಾಹರಣೆಗೆ ರಕ್ತದಲ್ಲಿ ಹಿಮೋ ಗ್ಲೋಬಿನ್ ಅಂಶ ಕಡಿಮೆ ಅದರೆ, ಸುಸ್ತು, ನಡೆಯಲು ಆಗದಿ ರುವುದು ಇಂತಹ ಸಮಸ್ಯೆಗಳು ಕಂಡು ಬರುತ್ತದೆ.

ಅದೇ ರೀತಿ ರಕ್ತದೊತ್ತಡದಲ್ಲಿ ಏರು ಪೇರಾದರೆ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರಲು ಶುರುವಾ ಗುತ್ತದೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ, ನಮ್ಮ ದೇಹದ ಒಳಭಾಗದಲ್ಲಿ ಕಂಡುಬರುವ ಬದಲಾವಣೆಗಳು ನಮಗೆ ತಿಳಿಯುತ್ತಾ ಹೋಗುತ್ತದೆ. ಬನ್ನಿ ಇಂದಿನ ಈ ಲೇಖನದಲ್ಲಿ, ದೇಹದಲ್ಲಿ ಕ್ಯಾನ್ಸರ್ ಸಂಬಂಧಿತ ರೋಗ ಲಕ್ಷಣಗಳು ಕಂಡು ಬಂದರೆ, ಏನೆಲ್ಲಾ ಸೂಚನೆ ಗಳು ಕಂಡು ಬರುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೋಡೋಣ..

ಗಂಟುಗಳು ಕಂಡು ಬರುವುದು–ಎಲ್ಲಿಯಾದರೂ ಗಂಟುಗಳು ಕಂಡು ಬರುವುದು, ಚೆನ್ನಾ ಗಿಯೇ ಇದ್ದ ನಮಗೆ ಇದಕ್ಕಿದ್ದಂತೆ ದೇಹದ ಯಾವುದೇ ಭಾಗದಲ್ಲಿ ಹೊಸದಾಗಿ ಗಂಟುಗಳ ತರಹ ಚರ್ಮ‌ ಕಂಡು ಬಂದರೆ ಮತ್ತು ಮೂರರಿಂದ ನಾಲ್ಕು ವಾರಗಳು ಅದು ಹಾಗೆ ಇದ್ದರೆ, ಅದು ಕ್ಯಾನ್ಸರ್‌ಗೆ ಸಂಬಂಧಪಟ್ಟ ಗಂಟು ಗಳು ಎಂದು ನಾವು ಅರ್ಥ ಮಾಡಿಕೊಳ್ಳಬಹುದು.

ಅದರಲ್ಲೂ ಪ್ರಮುಖವಾಗಿ ಎದೆಯ ಭಾಗದಲ್ಲಿ, ಕೈಗಳ ಕಂಕುಳಿನ ಭಾಗದಲ್ಲಿ, ಕುತ್ತಿಗೆಯ ಜಾಗದಲ್ಲಿ, ಇಲ್ಲಾಂದ್ರೆ ತಲೆಯಲ್ಲಿ ಈ ರೀತಿಯ ಗಂಟುಗಳು ಕಂಡುಬಂದರೆ ಅದು ಕ್ಯಾನ್ಸರ್ ಗೆ ಸಂಬಂಧಪಟ್ಟ ಗಂಟುಗಳು ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ!ಒಂದು ವೇಳೆ ಈ ರೀತಿಯ ಲಕ್ಷಣಗಳು, ನಿಮಗೂ ಕಂಡು ಬಂದರೆ, ಅದನ್ನು ನಿರ್ಲಕ್ಷ್ಯ ಮಾಡದೇ, ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.​

ಸ್ತನ ಕ್ಯಾನ್ಸರ್-ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಮಹಿಳೆ ಯರಲ್ಲಿ ಅತಿ ಹೆಚ್ಚು ಸ್ತನ ಕ್ಯಾನ್ಸರ್‌ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.ಸ್ತನ ಕ್ಯಾನ್ಸರ್ ಕಾಯಿಲೆಯ ಲಕ್ಷಣಗಳು ಹೇಗಿರುತ್ತದೆ ಎಂದರೆ, ಸ್ತನದ ವಿನ್ಯಾಸದಲ್ಲಿ ಬದಲಾವಣೆ, ಮೊಲೆ ತೊಟ್ಟು ಗಳಲ್ಲಿ ನೋವು ಕಂಡು ಬರುವುದು, ಸ್ತನದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು.ಒಂದು ವೇಳೆ ಮಹಿಳೆಯರಿಗೆ ಈ ಲಕ್ಷಣಗಳು ಕಂಡು ಬಂದರೆ, ಸರಿಯಾದ ಮುನ್ನೆಚ್ಚರಿಕೆ, ತಪಾಸಣೆ, ಸ್ವಹಃ ತಪಾಸಣೆ ಹಾಗೂ ವೈದ್ಯರ ಸಲಹೆಗಳನ್ನು ಪಡೆದು ಕೊಂಡು ಸ್ತನ ಕ್ಯಾನ್ಸರ್‌ನ ಅಪಾಯವನ್ನು ತಪ್ಪಿಸ ಬಹುದು.

​ಕಡಿಮೆಯಾಗದಿರುವ ಕೆಮ್ಮು!ಸಾಮಾನ್ಯವಾಗಿ ಮನುಷ್ಯನಿಗೆ ಕೆಮ್ಮಿನ ಸಮಸ್ಯೆ ಕಂಡು ಬರುವುದು, ವಾತಾವರಣದಲ್ಲಿ ಏರುಪೇರಾದಾಗ ಆರೋಗ್ಯ ದಲ್ಲಾಗುವ ಬದಲಾವಣೆಯಿಂದಾಗಿ, ಇಲ್ಲಾಂದ್ರೆ ವೈರಲ್ ಸೋಂಕಿ ನಿಂದಾಗಿ ಕಂಡು ಬರುತ್ತದೆ. ಇಂತಹ ಸಮಸ್ಯೆಗಳಿಗೆ ಔಷಧಿಗಳನ್ನು ತೆಗೆದುಕೊಂಡರೆ ಇದು ಹೊರಟು ಹೋಗುತ್ತದೆ.

ಆದರೆ ನಿರಂತರವಾಗಿ ಕೆಮ್ಮಿನ ಸಮಸ್ಯೆ ನಿಲ್ಲದೇ ಹೋದರೆ, ಕೆಮ್ಮಿದಾಗ ಕಫ, ಜೊತೆಗೆ ರಕ್ತ ಬರುತ್ತಿದ್ದರೆ, ಅದನ್ನು ಶ್ವಾಸ ಕೋಶದ ಕ್ಯಾನ್ಸರ್ ಎಂದು ಗುರುತಿಸ ಬಹುದು.ಇಂತಹ ಕ್ಯಾನ್ಸರ್ ಸಾಮಾನ್ಯವಾಗಿ ಧೂಮಪಾನ, ಮಧ್ಯಪಾನ ಮಾಡುವ ಜನರಿಗೆ ಈ ರೀತಿಯ ಕ್ಯಾನ್ಸರ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿರುತ್ತದೆ!​

ದೇಹದ ತೂಕ ಕಡಿಮೆ ಆಗುತ್ತಾ ಹೋಗುವುದು!

ಇದ್ದಕ್ಕಿದಂತೆ ಮನುಷ್ಯನಿಗೆ ತನ್ನ ದೇಹದ ತೂಕ ಕಡಿಮೆ ಆಗುತ್ತಾ ಬಂದರೆ, ಇದು ಯಾವುದೋ ಒಂದು ಕಾಯಿಲೆ ಯ ಲಕ್ಷಣಗಳು ಎಂದು ತಿಳಿದುಕೊಳ್ಳಬಹುದು.ಅದರಲ್ಲೂ ಕಾರಣವಿಲ್ಲದೆ ದೇಹದ ತೂಕ ಕಡಿಮೆ ಆಗುತ್ತಾ ಬಂದರೆ, ಅದು ಕ್ಯಾನ್ಸರ್‌ನ ಮೊದಲಯ ಲಕ್ಷಣ ಎಂದು ವೈದ್ಯರು ಹೇಳುತ್ತಾರೆ. ಇನ್ನು ಕೆಲವರಿಗೆ ಹೊಟ್ಟೆ ಯ ಜಾಗದಲ್ಲಿ ಕಂಡು ಬರುತ್ತದೆ ಹಾಗೂ ದೇಹದ ತೂಕ ದಿನಾ ಹೋದ ಹಾಗೆ, ಕಡಿಮೆ ಆಗುತ್ತಾ ಬರುತ್ತದೆ.​

ಚರ್ಮದಲ್ಲಿ ಬದಲಾವಣೆ

ದೇಹದೊಳಗಿನ ಕೆಲವೊಂದು ಬದಲಾವಣೆಗಳು, ನೇರೆವಾಗಿ ಅದು ನಮ್ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.ಉದಾಹರಣೆಗೆ ಹೇಳಬೇಕೆಂದರೆ, ಚರ್ಮದಲ್ಲಿ ತುರಿಕೆ, ಚರ್ಮದ ಬಣ್ಣ ಕೆಂಪಗೆ ಆಗುವುದು, ಚರ್ಮದ ಬಣ್ಣ ಅಲ್ಲಲ್ಲಿ ಕಪ್ಪು ಬಣ್ಣಕ್ಕೆ ತಿರುಗುವುದು, ಇವೆಲ್ಲಾ ಚರ್ಮದ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು!ಹೀಗಾಗಿ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೇ ಕೂಡಲೇ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ, ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ​

ಕ್ಯಾನ್ಸರ್ ಕಾಯಿಲೆಯ ಇನ್ನಿತರ ಲಕ್ಷಣಗಳು

ಪದೇ ಪದೇ ತಲೆನೋವು, ಸುಸ್ತು, ಆಯಾಸವಾಗುವುದು, ಲೈಂಗಿಕಕ್ರಿಯೆಯಲ್ಲಿ ಸುಖ ಸಿಗದೇ ಹೋಗುವುದು, ಇವೆಲ್ಲಾ ಲಕ್ಷಣಗಳು ಕೂಡ ಕ್ಯಾನ್ಸರ್ ಕಾಯಿಲೆಯ ರೋಗಲಕ್ಷಣಗಳು ಆಗಿರಲೂ ಬಹುದು!ಇನ್ನು ಕೆಲವರಿಗೆ ಶ್ವಾಸಕೋಶದ ಕ್ಯಾನ್ಸರ್ ರೋಗ ಲಕ್ಷಣ ಗಳು ಕಂಡು ಬಂದಾಗ ಪದೇ ಪದೇ ಎದೆ ನೋವಿನ ಸಮಸ್ಯೆಯೂ ಕೂಡ ಕಂಡು ಬರುತ್ತದೆ.ಇನ್ನು ಗರ್ಭಕೋಶದಲ್ಲಿ ಕ್ಯಾನ್ಸರ್ ಗಂಟುಗಳು ಕಂಡು ಬಂದರೆ, ಮಹಿಳೆಯರಿಗೆ ಲೈಂಗಿಕ ಕ್ರಿಯೆಯ ಸಂದರ್ಭ ದಲ್ಲಿ ನೋವು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

Leave A Reply

Your email address will not be published.