ಈ ವಸ್ತುವನ್ನು ನೀವು ಇಷ್ಟ ಪಟ್ಟೋರಿಗೆ ಈ ಗಿಫ್ಟ್ ಮಾಡಿದರೆ ತಾಯಿ ಲಕ್ಷ್ಮಿ ದೇವಿಯಿಂದ ನೀವು ಶ್ರೀಮಂತರು!
ನಾವು ಪ್ರೀತಿಸುತ್ತಿರುವವರಿಗೆ ಏನಾದರು ಗಿಫ್ಟ್ ಗಳನ್ನು ನಾವು ಕೊಟ್ಟೆ ಕೊಡುತ್ತೇವೆ. ಹೀಗೆ ಅವರಿಗೆ ಗಿಫ್ಟ್ ಗಳನ್ನು ಕೊಡುವುದರಿಂದ ಲಕ್ಷ್ಮಿ ದೇವಿ ನಮಗೆ ಒಲಿಯುತ್ತಾಳೆ. ಹಾಗಾದರೆ ಯಾವ ರೀತಿ ಗಿಫ್ಟ್ ಕೊಡಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ನೀವು ಜೋಡಿ ಆನೆಯನ್ನು ಶುಭ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಬೇಕು. ಇದು ನಿಮಗೆ ತುಂಬಾನೇ ಮಂಗಳಕರವಾದ ಪರಿಣಾಮವನ್ನು ಕೊಡುತ್ತದೆ.
ಇನ್ನು ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಮತ್ತು ಮಂಗಳಕರ.ಇನ್ನು ಯಾರಿಗಾದರೂ ಹೂವುಗಳನ್ನು ಉಡುಗೊರೆಯಾಗಿ ನೀಡುವುದು ಬಹಳ ಶುಭವೆಂದು ಹೇಳಲಾಗುತ್ತದೆ.
ಜೇಡಿ ಮಣ್ಣಿನಿಂದ ಮಾಡಿದ ವಿಗ್ರಹ ಅಥವಾ ಇನ್ನು ಯಾವುದೊ ವಸ್ತುಗಳನ್ನು ಉಡುಗೊರೆಯಾಗಿ ಪಡೆಯುವುದು ಅಥವಾ ಯಾರಿಗಾದರೂ ಉಡುಗೊರೆಯಾಗಿ ನೀಡುವುದು ಕೂಡ ತುಂಬಾನೇ ಮಂಗಳಕರ ಎಂದು ಹೇಳಲಾಗುತ್ತದೆ. ನಿಮ್ಮ ಪ್ರೀತಿ ಪಾತ್ರರರಿಗೆ ಇಂತಹ ಉಡುಗೊರೆ ಕೊಡುವುದರಿಂದ ಲಕ್ಷ್ಮಿ ದೇವಿ ಅನುಗ್ರಹ ಜೊತೆಗೆ ಒಳ್ಳೆಯದು ಆಗುತ್ತದೆ.