ಅಗರಬತ್ತಿನಲ್ಲಿ ಇಷ್ಟೆಲ್ಲಾ ಉಪಯೋಗ ಇದೆ ಅಂತ ಇಷ್ಟು ದಿನ ಗೊತ್ತೇ ಇರಲಿಲ್ಲ!ಅಡುಗೆ ಮನೆಯಲ್ಲಿ ತುಂಬಾ ಉಪಯೋಗ ಆಗುತ್ತೆ..
ಪ್ರತಿಯೊಬ್ಬರ ಮನೆಯಲ್ಲಿ ಅಗರಬತ್ತಿಯನ್ನು ಬಳಸುತ್ತಾರೆ.5 ಅಗರಬತ್ತಿ ಅಥವಾ ಊದಿನಕಡ್ಡಿ ತೆಗೆದುಕೊಂಡು ಚೆನ್ನಾಗಿ ಜಜ್ಜಿಕೊಳ್ಳಬೇಕು.ನಂತರ ಪುಡಿಯನ್ನು ಒಂದು ಬಾಕ್ಸ್ ನಲ್ಲಿ ಹಾಕಿ ಅದರ ಮೇಲೆ ಪೇಪರ್ ಹಾಕಬೇಕು. ನಂತರ ಪೇಪರ್ ಸುತ್ತ ರಬ್ಬರ್ ಬ್ಯಾಂಡ್ ಹಾಕಬೇಕು.ನಂತರ ಪೇಪರ್ ಮೇಲೆ ಚಿಕ್ಕ ಚಿಕ್ಕ ಹೊಲ್ಸ್ ಮಾಡಿ. ಇದನ್ನು ರೂಮ್ ಫ್ರೆಷ್ನರ್ ಆಗಿ ಬಳಸಬಹುದು. ಇದನ್ನು ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು. ಡ್ರೆಸ್ ಕಾಬೋರ್ಡ್ ಒಳಗೆ ಇಟ್ಟರೆ ತುಂಬಾ ಚೆನ್ನಾಗಿ ಸ್ಮೆಲ್ ಬರುತ್ತದೆ.ಸ್ವಲ್ಪನು ಬ್ಯಾಡ್ ಸ್ಮೆಲ್ ಇರುವುದಿಲ್ಲ.
ಇನ್ನು ಆಗರಬತ್ತಿಯನ್ನು ನೀರಿನಲ್ಲಿ ನೆನಸಿ ಚೆನ್ನಾಗಿ ಉರಿಸಿದರೆ ಸ್ಮೆಲ್ ಜಾಸ್ತಿ ಬರುತ್ತದೆ ಹಾಗೂ ಇದು ಬೇಗಾ ಖಾಲಿ ಆಗಲ್ಲ.ಇದು ತುಂಬಾ ಹೊತ್ತು ಉರಿಯುತ್ತಿರುತ್ತದೆ. ಹೆಚ್ಚಾಗಿ ಕಿಚನ್ ನಲ್ಲಿ ಟೊಮೇಟೊ ಈರುಳ್ಳಿ ಕೆಟ್ಟು ಹೋದಾಗ ಆ ಸ್ಮೆಲ್ ಹಾಗೆ ಇರುತ್ತದೆ.ಆಗರಬತ್ತಿ ಹಚ್ಚಿದರೆ ಸೊಳ್ಳೆ ಮತ್ತು ಬ್ಯಾಡ್ ಸ್ಮೆಲ್ ಇರುವುದಿಲ್ಲ.
ಆಗರಬತ್ತಿ ಪುಡಿ ಮತ್ತು ಎರಡು ಕರ್ಪೂರ ಪುಡಿ ಮಾಡಿ ಹಾಗೂ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ನೀರನ್ನು ಸ್ಪ್ರೇ ಬಾಟಲ್ ನಲ್ಲಿ ಹಾಕಿ ಜಿರಳೆ ಇರುವ ಜಾಗಕ್ಕೆ ಸ್ಪ್ರೇ ಮಾಡಬೇಕು.ಆಗ ಜೀರಿಲೆಗಳು ಬರುವುದಿಲ್ಲ.