ಗಾಜಿನ ಬಳೆಗಳನ್ನು ಧರಿಸುವ ಪ್ರತಿಯೊಬ್ಬ ಮಹಿಳೆಯರು ತಪ್ಪದೆ ಈ ಮಾಹಿತಿ ನೋಡಿ!
ಬಳೆಗಳು ಮುತ್ತೈದೆಯರ ಸಂಕೇತ. ಬಳೆಗಳು ಮಹಿಳೆಯರ ಸೌಂದರ್ಯವನ್ನು ವೃದ್ಧಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬಳೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಈ ಬಳೆಗಳನ್ನು ಧರಿಸುವಾಗ ಕೆಲವು ಶಾಸ್ತಗಳನ್ನು ಅನುಸರಿಸಿದರೆ ಉತ್ತಮ. ನಿಯಮದಂತೆ ಸೂಕ್ತ ಬಣ್ಣದ ಬಳೆ ಧರಿಸುವುದರಿಂದ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.
ಬಳೆಯನ್ನು ಶನಿವಾರ ಮತ್ತು ಮಂಗಳವಾರ ಖರೀದಿ ಮಾಡಬಾರದು. ಬಳೆ ಧರಿಸುವ ಮುನ್ನ ತಾಯಿ ಗೌರಿಗೆ ಸಮರ್ಪಣೆ ಮಾಡಬೇಕು. ಹೊಸ ಬಳೆಯನ್ನು ಪ್ರಾಂತಃ ಕಾಲ ಅಥವಾ ಸಂಧ್ಯಾ ಕಾಲದಲ್ಲಿ ಧರಿಸಿ.
ಅವಿವಾಹಿತರು ಯಾವುದೇ ಬಣ್ಣದ ಬಳೆ ಧರಿಸಬಹುದು. ಆದರೆ ವಿವಾಹಿತ ಮಹಿಳೆಯರು ಕಪ್ಪು ಬಣ್ಣದ ಬಳೆಯನ್ನು ಧರಿಸಬಾರದು. ಅಲ್ಲದೇ ಬಿಳಿ ಬಣ್ಣದ ಬಳೆ ಧರಿಸುವುದಾದರೆ ಅದರ ಜೊತೆ ಕೆಂಪು ಬಣ್ಣದ ಬಳೆ ಹಾಕಿ. ಹಾಗೇ ಗಾಜು ಅಥವಾ ಬೆಳ್ಳಿ, ಬಂಗಾರದ ಬಳೆಯನ್ನು ಮಾತ್ರ ಮಹಿಳೆಯರು ಧರಿಸಬೇಕು.
ವೈವಾಹಿಕ ಜೀವನ ಸುಖಕರವಾಗಿರಬೇಕೆಂದರೆ ಗುಲಾಬಿ ಬಣ್ಣದ ಬಳೆ ಧರಿಸಿ. ಶೀಘ್ರ ಮದುವೆ ಬಯಸುವವರು ತಾಯಿ ದುರ್ಗೆಗೆ ಕೆಂಪು ಬಳೆಗಳನ್ನು ಅರ್ಪಣೆ ಮಾಡಿ. ಸಂತಾನ ಪ್ರಾಪ್ತಿಗೆ ಹಳದಿ ಬಣ್ಣದ ಬಳೆ ಧರಿಸಿ.
ಗಾಜಿನ ಬಳೆಗಳನ್ನು ಧರಿಸುವುದು ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿ. ಏಕೆಂದರೆ ಅವುಗಳು ಧರಿಸಿರುವ ಮಹಿಳೆಯರಿಗೆ ಸಾಕಷ್ಟು ಸಕಾರಾತ್ಮಕತೆಯನ್ನು ನೀಡುತ್ತವೆ. ಗಾಜಿನ ಬಳೆಗಳು ಸುತ್ತಮುತ್ತಲಿನ ಸಕಾರಾತ್ಮಕತೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸುತ್ತಮುತ್ತಲಿನ ಯಾವುದೇ ನಕಾರಾತ್ಮಕ ಶಕ್ತಿಯನ್ನು ಶುದ್ಧೀಕರಿಸುತ್ತದೆ.