ದೇಹದ ದುರ್ಗಂಧ ಬೆವರಿನ ವಾಸನೆಗೆ ಮನೆ ಮದ್ದು
ದೇಹದ ದುರ್ಗಂಧ ಬೆವರಿನ ವಾಸನೆಗೆ ಮನೆ ಮದ್ದು
ದೇಹದ ದುರ್ಗಂಧ ದೂರ ಮಾಡಲು ಮೊದಲು ಹೊಟ್ಟೆಯನ್ನು ಶುದ್ದಿಯಾಗಿ ಇಟ್ಟುಕೊಳ್ಳಬೇಕು ಅದಕ್ಕಾಗಿ ರಾತ್ರಿ ಮಲಗುವ ಮುನ್ನ ಎರಡು ಚಮಚ ಹರಳೆಣ್ಣೆಯನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ಸೇವನೆ ಮಾಡಬೇಕು ಇದರಿಂದ ಹೊಟ್ಟೆ ಸ್ವಚ್ಚ ಆಗುತ್ತದೆ ಅದು ಬೆವರಿನ ದುರ್ಗಂಧವನ್ನು ತಡೆಯಲು ಸಹಾಯ ಮಾಡುತ್ತದೆ
ಇನ್ನು ಹೆಚ್ಚಾಗಿ ಈ ಸಮಸ್ಯೆ ಕಾಡುತ್ತಿದೆ ಎಂದರೆ ಗರಿಕೆಯನ್ನು ಲೋಳೆಸರದ ಜೊತೆಗೆ ಸೇರಿಸಿ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಬೇಕು ಇದನ್ನು ಮೈಯಿಗೆ ಹಚ್ಚಿ ಎಳೆ ಬಿಸಿಲಿನಲ್ಲಿ ಬೆಳಿಗ್ಗೆ ನಿಂತುಕೊಂಡು ಅರ್ಧ ಗಂಟೆಯ ನಂತರ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು ಇದರಿಂದ ದೇಹದ ದುರ್ಗಂಧ ಬೆವರಿನ ವಾಸನೆ ದೂರಾಗುತ್ತದೆ