ಸಕ್ಕರೆ ಕಾಯಿಲೆ ಇರೋರು ಬೆಳಗ್ಗಿನ ತಿಂಡಿಗೆ ರವೆ ಇಡ್ಲಿ ತಿಂದ್ರೆ ಏನಾಗುತ್ತೆ ಗೊತ್ತಾ!
ಪ್ರತಿ ದಿನ ಬೆಳಗ್ಗೆ ಹಾಸಿಗೆಯಿಂದ ಮೇಲೆದ್ದರೆ, ಯಾವ ತಿಂಡಿ ಮಾಡಬೇಕು ಎನ್ನುವುದು ಒಂದು ರೀತಿಯ ತಲೆನೋವು. ಆದರೆ ಸುಲಭವಾಗಿ ಬಹಳ ಬೇಗನೆ ಆಗುವುದು ಮತ್ತು ರುಚಿಕರವಾಗಿ ಇರುವುದು ಎಂದರೆ ಅದು ಉಪ್ಪಿಟ್ಟು. ಆದರೆ ತುಂಬಾ ಜನರು ಉಪ್ಪಿಟ್ಟು ತಿನ್ನಲು ಹಿಂದು ಮುಂದು ನೋಡುತ್ತಾರೆ.
ಅದರ ಬದಲು ರವೆ ಇಡ್ಲಿ ಮಾಡಿ ತಿನ್ನಬಹುದಿತ್ತು ಎಂದುಕೊಳ್ಳುವುದೂ ಉಂಟು. ಆದರೆ ಯಾವುದು ಹೇಗೆ ಮಾಡಿದರೂ ಕೂಡ ಆರೋಗ್ಯಕರವಾಗಿ ನಮ್ಮ ದೇಹಕ್ಕೆ ಕೆಲಸ ಮಾಡುತ್ತದೆ ಎನ್ನುವು ದಂತೂ ನಿಜ. ಹೌದು, ದೈಹಿಕ ಸ್ವಾಸ್ಥ್ಯ ತಜ್ಞರು ಹೇಳುವ ಪ್ರಕಾರ ರವೆಯಿಂದ ನೀವು ಯಾವುದೇ ಆಹಾರ ಉತ್ಪನ್ನವನ್ನು ತಯಾರು ಮಾಡಿ ಸವಿದರೂ ಕೂಡ ಅದು ಆರೋಗ್ಯಕರ ಪ್ರಯೋಜನ ಗಳನ್ನು ನೀಡುತ್ತದೆ. ಇಲ್ಲಿ ರವೆಯ ಆಹಾರ ಉತ್ಪನ್ನಗಳ ವಿವಿಧ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಬಹುದು….
ಅತಿಯಾಗಿ ತಿನ್ನುವುದು ತಪ್ಪುತ್ತದೆ—ನಿಮಗೆಲ್ಲ ಗೊತ್ತಿರುವ ಹಾಗೆ ರವೆಯನ್ನು ಗೋಧಿಯಿಂದ ಮಾಡಿರುವುದು. ಹೀಗಾಗಿ ಇದು ದೀರ್ಘ ಕಾಲ ನಿಮ್ಮ ಹೊಟ್ಟೆ ತುಂಬುವಂತೆ ಮಾಡುತ್ತದೆ ಮತ್ತು ಹೆಚ್ಚುವರಿ ಆಹಾರವನ್ನು ತಿನ್ನದಂತೆ ನಿಮ್ಮನ್ನು ನೋಡಿಕೊಳ್ಳುತ್ತದೆ.
ಹೀಗಾಗಿ ಕಡಿಮೆ ಸಮಯದಲ್ಲಿ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ತೂಕವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಬಹುದು. ರವೆ ನಿಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣವಾಗುತ್ತದೆ ಮತ್ತು ದೇಹದ ಕೊಬ್ಬಿನ ಅಂಶದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಶಕ್ತಿ ಕೊಡುತ್ತದೆ–ಹೌದು. ರವೆಯಿಂದ ತಯಾರು ಮಾಡಿದ ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದ ರಿಂದ ದೇಹಕ್ಕೆ ಆಯಾಸ ದೂರವಾಗಿ ತಕ್ಷಣವೇ ಅತ್ಯುತ್ತಮವಾದ ಶಕ್ತಿ ಬರುತ್ತದೆ. ಇದು ನಿಮ್ಮ ದೇಹದಲ್ಲಿ ಒಂದು ರೀತಿಯ ಸಂಚಲನವನ್ನು ಉಂಟು ಮಾಡಿ ಸೋಮಾರಿತನವನ್ನು ಹೋಗಲಾಡಿಸುತ್ತದೆ.
ಅದರಲ್ಲೂ ರವೆಯಿಂದ ತಯಾರು ಮಾಡುವ ಆಹಾರ ಪದಾರ್ಥಗಳಿಗೆ ಕೆಲವೊಂದು ತರಕಾರಿ ಗಳನ್ನು ಹಾಕಿ ತಯಾರಿಸುವುದರಿಂದ ಒಳ್ಳೆಯ ರುಚಿಯ ಜೊತೆಗೆ ದೇಹಕ್ಕೆ ನಾರಿನ ಅಂಶ ಕೂಡ ಸಿಕ್ಕಂತೆ ಆಗುತ್ತದೆ.
ಮೂಳೆಗಳು ಮತ್ತು ನರಮಂಡಲ ವ್ಯವಸ್ಥೆಯ ಆರೋಗ್ಯ–ಮನುಷ್ಯನಿಗೆ ಮೂಳೆಗಳ ಸದೃಢತೆ ಹೆಚ್ಚಾಗಬೇಕು ಎಂದರೆ ಫಾಸ್ಫರಸ್, ಜಿಂಕ್ ಮತ್ತು ಮೆಗ್ನೀಷಿಯಂ ಇರುವಂತಹ ರವೆ ಬಳಸಿ ಯಾವುದಾದರೂ ರುಚಿಕರ ಆಹಾರ ಪದಾರ್ಥವನ್ನು ತಯಾರು ಮಾಡಿ ಸವಿಯಬೇಕು. ಇದು ದೇಹದಲ್ಲಿ ಸ್ವಯಂಚಾಲಿತವಾಗಿ ಅತ್ಯುತ್ತಮ ನರಮಂಡಲ ವ್ಯವಸ್ಥೆಯನ್ನು ಸಹ ಕಲ್ಪಿಸುತ್ತದೆ.
ಹೃದಯದ ಆರೋಗ್ಯ ವೃದ್ಧಿಸುತ್ತದೆ—ರವೆ ನಿಮ್ಮ ಹೃದಯ ರಕ್ತನಾಳದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಏಕೆಂದರೆ ರವೆಯಿಂದ ತಯಾರು ಮಾಡಿದ ಯಾವುದೇ ಆಹಾರ ಪದಾರ್ಥಗಳು ನಿಮಗೆ ಹೃದಯಾಘಾತ, ರಕ್ತನಾಳದ ತೊಂದರೆಗಳು ಇತ್ಯಾದಿಗಳನ್ನು ದೂರ ಮಾಡುತ್ತದೆ. ಇದು ನಿಮ್ಮ ಸೋಂಕು ದೂರ ಮಾಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಸಹ ಬಲಪಡಿಸುತ್ತದೆ.
ಅನಿಮಿಯಾ ಅಥವಾ ರಕ್ತಹೀನತೆ ಸಮಸ್ಯೆಗೆ ರಾಮಬಾಣ—ರವೆ ತನ್ನಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣದ ಅಂಶವನ್ನು ಒಳಗೊಂಡಿರುವುದರಿಂದ, ನಿಮಗೆ ಕಬ್ಬಿಣದ ಕೊರತೆ ಎದುರಾಗುವುದಿಲ್ಲ.ಕಬ್ಬಿಣದ ಅಂಶ ತುಂಬಿರುವ ಆಹಾರ ಪದ್ದತಿಯನ್ನು ಹೊಂದುವುದ ರಿಂದ ನಿಮ್ಮ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ ಮತ್ತು ನಿಮ್ಮ ಪ್ರತಿದಿನದ ಕಾರ್ಯಚಟುವಟಿಕೆ ಸರಾಗವಾಗಿ ನಡೆಯಲು ಸಹಾಯವಾಗುತ್ತದೆ.