ಕಳೆದು ಹೋಗಿದ್ದರ ಕಡೆ ತಿರುಗಿ ನೋಡಬೇಡ
ಯಾರ ಹತ್ರ ನೆಮ್ಮದಿ ಇದ್ಯೋ ಆತ ಈ ಜಗತ್ತಿನಲ್ಲಿ ಆತನೇ ಎಲ್ಲರಿಗಿಂತ ಶ್ರೀಮಂತ ವ್ಯಕ್ತಿಯಾಗಿರುತ್ತಾನೆ..
ಹಣ ಇದ್ದರೆ ನಿನ್ನ ಕೆಟ್ಟ ಗುಣಗಳು ಯಾರ ಕಣ್ಣಿಗೂ ಕಾಣೋದಿಲ್ಲ, ಒಂದು ವೇಳೆ ನಿನ್ನ ಹತ್ರ ಹಣ ಇಲ್ಲ ಅಂದಾಗ ನಿನ್ನ ಒಳ್ಳೆ ಗುಣಗಳು ಕೂಡಾ ಯಾರ ಕಣ್ಣಿಗೂ ಕಾಣೋದಿಲ್ಲ.
ಹೇಳಿದ್ದೆಲ್ಲಾ ಕೇಳೋ ಕಿವಿಗಳು, ಅನುಮಾನದ ನೋಟ ಮತ್ತು ದುರ್ಬಲ ಮನಸ್ಸು ಮನುಷ್ಯನಿಗೆ ಸ್ವರ್ಗದ ನಡುವೆ ಇದ್ರೂ ಸಹಾ ಅಲ್ಲೂ ನರಕದ ಅನುಭವವನ್ನ ನೀಡುತ್ತೆ
ಕಳೆದು ಹೋಗಿದ್ದು, ಹೋಗಲಿ ಬಿಡು, ನಿನ್ನ ಬಳಿಗೆ ಹರಿದು ಬರ್ತಾ ಇರೋದನ್ನ ತಡೆಯದೇ ಸ್ವಾಗತ ನೀಡು.. ಹಲವು ಸಂದರ್ಭಗಳಲ್ಲಿ ಶೂನ್ಯದಿಂದ ಪ್ರಾರಂಭ ಮಾಡೋದು ಅನಿವಾರ್ಯವಾಗಿರುತ್ತೆ..
ಕಳೆದು ಹೋಗಿದ್ದರ ಬಗ್ಗೆ ತಿರುಗಿ ನೋಡಬೇಡ, ಯಾಕಂದ್ರೆ ಅದರಿಂದಾಗಿ ಈಗ ಸಿಗಬಹುದಾದ ಸಂತೋಷವನ್ನ ಕೂಡಾ ಕಳೆದುಕೊಂಡು ಬಿಡ್ತೀಯಾ..
ಸಮಯ ಕಳೆದು ಹೋಗುತ್ತೆ, ಆದರೆ ನಾವೂ ಅದ್ರಲ್ಲಿ ಕಳೆದು ಹೋಗಬಾರದು, ನಾವು ಎಷ್ಟು ಮುಗ್ದರು ಅಂದ್ರೆ, ದುಃಖ ಬಂದಾಗ ದಾರಿ ಕಾಣದೆ ನಿಂತು ಬಿಡ್ತೀವಿ ಅದೇ ಸುಖ ಬಂದಾಗ ಸಂತೋಷದಲ್ಲಿ ದಾರಿ ತಪ್ಪಿ ಬಿಡ್ತೀವಿ…
ಇವೆಲ್ಲವುಗಳ ನಡುವೆ ಸರಿಯಾದ ಸಮಯ ಬಂದಾಗ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ಸಿಗುತ್ತೆ ಅನ್ನೋದನ್ನೇ ಮರೆತು ಬಿಡ್ತೀವಿ..
ಆಸೆಗಳು ಈಡೇರದೆ ಪ್ರಾಣ ಹೋದ್ರೆ ಅದನ್ನ ಸಾವು ಅಂತ ಕರೀತೀವಿ, ಆದರೆ ಪ್ರಾಣ ಇರುವಾಗಲೇ ಆಸೆಗಳೆಲ್ಲವೂ ದೂರ ಆದ್ರೆ ಆಗ ಸಿಗೋ ಸಾವನ್ನ ಮೋಕ್ಷ ಅಂತೀವಿ…
ಕೆಲವೊಮ್ಮೆ ಕೋಪ ಕೂಡಾ ನಗುವಿಗಿಂತ ಹೆಚ್ಚು ವಿಶೇಷವಾಗಿರುತ್ತೆ, ಯಾಕಂದ್ರೆ ನಗು ಅನ್ನೋದು ಎಲ್ಲರಿಗಾಗಿ ಇರುತ್ತೆ, ಆದ್ರೆ ಕೋಪ ಅನ್ನೋದು ಮಾತ್ರ , ಯಾರನ್ನು ಹೆಚ್ಚಾಗಿ ಪ್ರೀತಿಸ್ತೀವೋ, ಯಾರನ್ನ ಕಳೆದುಕೊಳ್ಳಲು ಇಷ್ಟಪಡೋದಿಲ್ವೋ ಅವರಿಗಾಗಿ ಮಾತ್ರವೇ ಇರುತ್ತೆ.
ಯಾವ ದಿನ ಒಬ್ಬ ವ್ಯಕ್ತಿಯನ್ನ ಅವನ ತಾಯಿಯಲ್ಲ, ಬದಲಿಗೆ ಅವನ ಜವಾಬ್ದಾರಿಗಳು ನಿದ್ದೆಯಿಂದ ಎಬ್ಬಿಸುತ್ತೋ ಆ ದಿನ ಅವನು ಕುಟುಂಬವನ್ನು ನಿಭಾಯಿಸೋ ಸಾಮರ್ಥ್ಯ ಪಡೆದಿದ್ದಾನೆ ಅಂತಾನೇ ಅರ್ಥ..
ಜೀವನದಲ್ಲಿ ಒಬ್ಬ ವ್ಯಕ್ತಿಯ ಗಳಿಕೆಯನ್ನು ಸಂಪಾದಿಸಿರೋ ಸಂಪತ್ತಿನಿಂದ ಅಳೆಯೋಕೆ ಆಗೋದಿಲ್ಲ, ಬದಲಾಗಿ ಅವನ ಅಂತಿಮ ಯಾತ್ರೆಯಲ್ಲಿ ಭಾಗಿಯೋಗೋ ಜನರ ಗುಂಪು ಅವನು ಅಸಲಿಗೆ ಗಳಿಸಿದ್ದೆಷ್ಟು ಅನ್ನೋದನ್ನ ನಿರ್ಧಾರ ಮಾಡುತ್ತೆ.
ಯಾವಾಗ ಯಾವುದೇ ಒಂದು ಕಾರಣ ಇಲ್ಲದೆ ನಗುವಿನ ಅನುಭೂತಿಯನ್ನು ಪಡೆದುಕೊಳ್ತಿಯೋ ಆಗ ಅರ್ಥ ಮಾಡಿಕೋ ನಿನಗಾಗಿ ಯಾರೋ, ಎಲ್ಲೋ ಒಂದು ಕಡೆ ಪ್ರಾರ್ಥನೆಯನ್ನ ಮಾಡ್ತಿದ್ದಾರೆ ಅಂತ…
ಸ್ನೇಹ ಸಂಬಂಧ ಇರೋದೇ ಆದ್ರೆ ಅದು ಕೃಷ್ಣ ಮತ್ತು ಕುಚೇಲನ ಸಂಬಂಧದ ಹಾಗಿರಬೇಕು.. ಒಬ್ಬನು ಏನನ್ನೂ ಕೇಳೋದಿಲ್ಲ, ಮತ್ತೊಬ್ಬನು ತಾನು ಕೊಟ್ಟಿದ್ದನ್ನ ಎಂದಿಗೂ ಹೇಳೋದಿಲ್ಲ..
ಆಡೋ ಮಾತಿನಲ್ಲಿ ಬಹಳ ಶಕ್ತಿ ಇದೆ ಅಂತ ಹಿರಿಯರು ಹೇಳಿರೋ ಮಾತು ಖಂಡಿತ ಸತ್ಯ. ಅದಕ್ಕೆ ಸಿಹಿಯಾದ ಮಾತುಗಳನ್ನ ಆಡುವವರ ಖಾರದ ಮೆಣಸಿನಕಾಯಿ ಕೂಡ ಮಾರಾಟವಾಗಿ ಬಿಡುತ್ತೆ, ಆದರೆ ಕಹಿಯಾದ ಮಾತನಾಡುವವರ ಜೇನನ್ನ ಕೂಡಾ ಕೊಳ್ಳೋದಕ್ಕೆ ಯಾರು ಹತ್ರ ಬರೋದಿಲ್ಲ..
ತಾಳ್ಮೆಯ ಕೈಯನ್ನ ಎಂದೂ ಕೂಡಾ ಬಿಡಬೇಡ, ಪ್ರತಿಯೊಂದು ಕೆಲಸವೂ ಸುಲಭವಾಗೋದಕ್ಕೆ ಮೊದಲು ಬಹಳ ಕಷ್ಟವಾಗೇ ಇರುತ್ತೆ..
ಕಾಲ ನಮಗೆ ವಿಷಯಗಳನ್ನು ಅರ್ಥ ಮಾಡಿಸುವ ವಿಧಾನ ಬಹಳ ಕಠಿಣವಾಗಿರುತ್ತೆ, ಆದರೆ ಅದೇ ವೇಳೆ ಕಾಲ ನಮಗೆ ಕಲಿಸಿದ ಪಾಠಗಳು, ಅರ್ಥ ಮಾಡಿಸಿದ ವಿಷಯಗಳು ನಮ್ಮ ಇಡೀ ಜೀವನ ಪೂರ್ತಿ ನೆನಪಲ್ಲಿ ಉಳಿಯುತ್ತೆ..
ವಯಸ್ಸು ಹೆಚ್ಚಾದಂತೆ ಬಹಳಷ್ಟು ಬದಲಾವಣೆಗಳಾಗುತ್ತೆ, ಮೊದಲು ಹಠ ಮಾಡ್ತಿದ್ದ ನಾವೇ ಈಗ ಹೊಂದಾಣಿಕೆ ಮಾಡಿಕೊಳ್ತೇವೆ..
ಬೇರೆಯವರ ಸುಖ ಮತ್ತು ಸಂತೋಷಕ್ಕೆ ಕಾರಣ ಆಗು ಆದ್ರೆ ಪಾಲುದಾರ ಆಗಬೇಡ.. ಅದೇ ವೇಳೆ ಬೇರೆಯವರ ದುಃಖದಲ್ಲಿ ಪಾಲುದಾರನಾಗು ಆದ್ರೆ ಕಾರಣ ಆಗಬೇಡ..
ನಮಗೆ ಯಾರಾದರೂ ಕೆಟ್ಟದ್ದನ್ನು ಮಾಡಬೇಕು ಅಂತ ಅಂದುಕೊಂಡ್ರೆ ಅದು ಅವರ ಕರ್ಮದಲ್ಲಿ ಬರೆಯಲಾಗಿರುತ್ತೆ,
ನಾವು ಯಾಕೆ ಬೇರೆ ಅವರಿಗೆ ಕೆಟ್ಟದ್ದನ್ನ ಬಯಸಿ ನಮ್ಮ ಕರ್ಮ ಮತ್ತು ಸಮಯ ಎರಡನ್ನು ವ್ಯರ್ಥ ಮಾಡಿಕೊಳ್ಳಬೇಕು, ಸದಾ ಒಳ್ಳೆಯದನ್ನ ಮಾತ್ರವೇ ಆಲೋಚನೆ ಮಾಡುತ್ತಾ ಮುಂದೆ ಸಾಗೋಣ..