ನಿಮ್ಮ ಲಿವರ್ ಅಪಾಯದಲ್ಲಿದೆದೆ ಎಂದು ಹೇಳುವ 8 ಲಕ್ಷಣಗಳು!
ನಮಗೆಲ್ಲಾ ಗೊತ್ತೇ ಇರುವ ಹಾಗೆ ದೇಹದ ಪ್ರತಿಯೊಂದು ಅಂಗಾಂಗಗಳು ಕೂಡ ತನ್ನದೇ ಆದ ವೈಶಿಷ್ಯ ಹಾಗೂ ಕಾರ್ಯ ವೈಖರಿಯನ್ನು ಹೊಂದಿ ಕೊಂಡಿದೆ. ಒಂದು ವೇಳೆ ದೇಹದ ಯಾವುದೇ ಒಂದು ಅಂಗಕ್ಕೆ ಸಮಸ್ಯೆಗಳು ಕಂಡು ಬಂದರೂ ಕೂಡ, ಅದರಿಂದ ಬೇರೆ ಅಂಗಗಳಿಗೂ ಕೂಡ ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ದೇಹದ ಆರೋಗ್ಯ ಸರಿಯಾಗಿ ಇಟ್ಟುಕೊಳ್ಳುವ ಕಡೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅದರಲ್ಲೂ ಮುಖ್ಯವಾಗಿ ದೇಹದ ಒಳಗಿನ ಅಂಗಾಂಗ ಗಳ ಕಡೆ ಹೆಚ್ಚು ಗಮನಹರಿಸಬೇಕು.
ಎಷ್ಟೋ ಸಲ, ಕೆಲವೊಂದು ಅನಾರೋಗ್ಯಕಾರಿ ಆಹಾರಪದ್ಧತಿ ಹಾಗೂ ಕೆಟ್ಟ ಜೀವನ ಶೈಲಿಯಿಂದಾಗಿ ನಮ್ಮ ದೇಹದ ಆರೋಕ್ಕೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಕಣ್ಣಿಗೆ ಕಾಣದ ದೇಹ ದೊಳಗಿನ ಅಂಗಾಂಗಗಳಿಗೆ ಕೂಡ ಹಾನಿ ಆಗುತ್ತಾ ಹೋಗುತ್ತದೆ. ಇದರಲ್ಲಿ ಮುಖ್ಯವಾಗಿ ಯಕೃತ್ ಅಂದ್ರೆ ದಿನದ ೨೪ ಗಂಟೆಯೂ ಕಾರ್ಯ ನಿರ್ವಹಿಸುವ ಪ್ರಮುಖ ಅಂಗವಾದ ಲಿವರ್! ಬನ್ನಿ ಇಂದಿನ ದೇಹದ ಯಕೃತ್‌ಗೆ ಹಾನಿಯಾದರೆ ಏನೆಲ್ಲಾ ಲಕ್ಷಣಗಳು ನಮ್ಮಲ್ಲಿ ಕಂಡು ಬರುತ್ತದೆ ಎನ್ನುವುದನ್ನು ನೋಡೋಣ ಬನ್ನಿ…
ಹೊಟ್ಟೆಯ ಸಮಸ್ಯೆ
ಸಾಮಾನ್ಯವಾಗಿ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾದ ಸಂದರ್ಭದಲ್ಲಿ ಸಹಜವಾಗಿ ಮನುಷ್ಯನಿಗೆ ಹೊಟ್ಟೆ ತೊಳಸಿದಂತೆ ಆಗಿ ವಾಕರಿಕೆ ಬರುತ್ತದೆ, ಆ ಬಳಿಕ ವಾಂತಿ ಕೂಡ ಆಗಿ ಬಿಡುತ್ತದೆ! ಇಂತಹ ಸಂದರ್ಭದಲ್ಲಿ ಒಂದು ಲೋಟ ನೀರು ಕುಡಿದರೂ ಕೂಡ, ವಾಂತಿ ಆಗಿಬಿಡುತ್ತದೆ.
ಹಾಗಂತ ಇದು ಕೇವಲ ಹೊಟ್ಟೆಯಲ್ಲಿ ಅಸ್ವಸ್ಥತೆಗೆ ಸಂಬಂಧಿಸಿದ ಕಾಯಿಲೆ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ, ಯಾಕೆಂದ್ರೆ ಪದೇಪದೇ ಈ ರೀತಿಯ ಸಮಸ್ಯೆಗಳು ಕಂಡು ಬರುತ್ತಿದ್ದರೆ, ಅದು, ನಿಮ್ಮ ಲಿವರ್ ನಲ್ಲಿ ಸಮಸ್ಯೆ ಇದೆ ಎಂದು ಸೂಚಿಸುವ ಲಕ್ಷಣಗಳಾಗಿರ ಬಹುದು! ಇಂತಹ ಸಮಯ ದಲ್ಲಿ ಕೂಡಲೇ ವೈದ್ಯರಲ್ಲಿ ಸಂಬಂಧ ಪಟ್ಟ ಪರೀಕ್ಷೆ ಮಾಡಿ ಕೊಳ್ಳುವುದು ಅತ್ಯಗತ್ಯ
ಬಾಯಿವಾಸನೆ ಬರಲು ಶುರುವಾಗುತ್ತದೆಯಂತೆ!
ಬಾಯಿಯ ಸ್ವಚ್ಛತೆ ಸರಿಯಾಗಿ ಮಾಡದೇ ಇರುವುದರಿಂದ ಬಾಯಿ ವಾಸನೆ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ. ಆದರೆ ಕೆಲವೊಮ್ಮೆ ದೇಹದೊಳಗಿನ ಲಿವರ್ ನಲ್ಲಿ ಸಮಸ್ಯೆಗಳು ಕಂಡು ಬಂದರೂ ಕೂಡ ಬಾಯಿಯಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆಯಂತೆ!
ಕಣ್ಣುಗಳ ಬಣ್ಣ ಹಳದಿ ಆಗಿಬಿಟ್ಟರೆ!
ಕೆಲವೊಂದು ಕಾಯಿಲೆಗಳ ಲಕ್ಷಣಗಳು ಕಣ್ಣುಗಳ ಮುಖಾಂತರ ಪತ್ತೆಹಚ್ಚಲಾಗುತ್ತದೆ! ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದ್ರೆ ಜಾಂಡಿಸ್ ಅಥವಾ ಹೆಪಟೈಟಿಸ್ ಕಾಯಿಲೆ! ಹೌದು ಈ ಕಾಯಿಲೆ ಕಾಣಿಸಿಕೊಂಡಾಗ ಕಣ್ಣುಗಳು ಅಥವಾ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಅಂತೆಯೇ ಕಣ್ಣುಗಳ ಬಣ್ಣ, ಬೆಳಗ್ಗೆ ಎದ್ದ ಕೂಡ ಹಳದಿ ಬಣ್ಣಕ್ಕೆ ತಿರುಗಿದ್ದರೆ, ಅದು ದೇಹದ ಲಿವರ್ ಭಾಗಕ್ಕೆ ಏನೋ ಸಮಸ್ಯೆ ಆಗಿದೆ ಎಂದರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ಸಮಸ್ಯೆಗೆ ಕೂಡಲೇ ವೈದ್ಯರ ಬಳಿ ಚರ್ಚಿಸಿ ಸಂಬಂಧ ಪಟ್ಟ ಚಿಕಿತ್ಸೆ ಮಾಡಿಕೊಳ್ಳಬೇಕಾಗುತ್ತದೆ.
ಗಾಢ ಬಣ್ಣದ ಮೂತ್ರ
ಮೂತ್ರ ಬಣ್ಣದಲ್ಲಿ ಏರುಪೇರಾದರೂ ಕೂಡ, ದೇಹದೊಳಗಿನ ಕಿಡ್ನಿ ಅಥವಾ ಲಿವರ್ ಭಾಗದಲ್ಲಿ ಏನೋ ಸಮಸ್ಯೆಗಳು ಉಂಟಾಗಿದೆ ಎಂದು ತಿಳಿದುಕೊಳ್ಳಬೇಕಕಾಗುತ್ತದೆ. ಅದರಲ್ಲೂ ದೇಹದ ಕಲ್ಮಶಗಳನ್ನು ಹೊರಹಾಕುವ ಲಿವರ್ ಭಾಗ ಸರಿಯಾಗಿ ಕೆಲಸ ಮಾಡದಿದ್ದರೆ, ದೇಹದೊಳಗೆ ಬೈಲ್ ಜ್ಯೂಸ್ ಹಾಗೂ ಲವಣಾಂಶಗಳು ಹೆಚ್ಚಾಗಿ ಉತ್ಪತ್ತಿ ಆಗುತ್ತಾ ಹೋಗುತ್ತವೆ!
ಈ ಬಗ್ಗೆ ಸಂಶೋಧಕರು ಹೇಳುವ ಪ್ರಕಾರ ಇವುಗಳು, ದೇಹದೊಳಗೆ ಹೆಚ್ಚಾಗುತ್ತಾ ಹೋದ ಹಾಗೆ ಕೊನೆಗೆ ಮೂತ್ರ ವಿಸರ್ಜನೆ ಮತ್ತು ಮಲ ವಿಸರ್ಜನೆಯ ಸಂದರ್ಭದಲ್ಲಿ ಹೊರಗೆ ಬರುತ್ತವೆ. ಇದೇ ಕಾರಣಕ್ಕೆ ಮೂತ್ರ ತಿಳಿ ಬಣ್ಣದಿಂದ ಗಾಢವಾದ ಬಣ್ಣಕ್ಕೆ ಬದಲಾಗುತ್ತದೆ. ಇದೆಲ್ಲಾ ಲಕ್ಷಣಗಳು ಕೂಡ ಲಿವರ್ ಹಾನಿಯಾಗಿದೆ ಎಂದು ಸೂಚಿಸುತ್ತದೆ.
ಮೈಕೈ ಕಾಲುಗಳು ಊದಿಕೊಳ್ಳುವುದು!
ಸಡನ್ ಆಗಿ ಕೈ ಕಾಲುಗಳಲ್ಲಿ ಇದ್ದಕ್ಕಿದ್ದಂತೆ ಊತ ಕಂಡುಬರುವುದು ಕೂಡ ಲಿವರ್ ಭಾಗದಲ್ಲಿ ಸಮಸ್ಯೆ ಕಂಡುಬಂದಾಗ! ಕೆಲವೊಮ್ಮೆ ಇನ್ನೂ ಅಪಾಯದ ಸಂಗತಿ ಎಂದ್ರೆ ಮೊದಲು ಕೈ ಕಾಲು ಗಳಲ್ಲಿ ಊತ ಕಂಡು ಬಂದು, ದಿನಾ ಹೋದ ಹಾಗೆ ಇಡೀ ದೇಹ ಊದಿಕೊಂಡಂತೆ ಕಾಣಬಹುದು.
ಈ ಬಗ್ಗೆ ವೈದ್ಯರು ಹೇಳುವ ಪ್ರಕಾರ ಯಾವಾಗ ದೇಹದ ಲಿವರ್‌ಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲವೋ, ಅಂದ್ರೆ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಾಧ್ಯ ಆಗುವು ದಿಲ್ಲವೋ, ಆ ಸಂದರ್ಭದಲ್ಲಿ ಇಂತಹ ಲಕ್ಷಣಗಳು ಕಂಡು ಬರುವ ಸಾಧ್ಯತೆ ಹೆಚ್ಚಿಸುತ್ತದೆ ಯಂತೆ!
ವೈದ್ಯರು ಹೇಳುವ ಪ್ರಕಾರ…
ಬೆಂಗಳೂರಿನ ಖ್ಯಾತ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಅವರು ಹೇಳುವ ಪ್ರಕಾರ, ದೇಹದ ಲಿವರ್ ಆರೋಗ್ಯವಾಗಿ ಇರಬೇಕೆಂದ್ರೆ, ಸರಿಯಾದ ಜೀವನಶೈಲಿಯನ್ನು ಅನುಸರಿಸಬೇಕು. ಅಂದ್ರೆ ಹಚ್ಚಹಸಿರೆಲೆ ತರಕಾರಿ, ಹಣ್ಣಗಳು, ನೆನೆಸಿಟ್ಟ ಬಾದಾಮಿ, ಕೆಂಪು ಅಕ್ಕಿಯ ಅನ್ನ ಇವುಗಳನ್ನು ಸೇವನೆ ಮಾಡುವುದರಿಂದ ಲಿವರ್‌ನ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಎಂದು ಅಭಿಪ್ರಾಯಪಡುತ್ತಾರೆ.
ಅಲ್ಲದೆ ಆಯುರ್ವೇದ ವೈದ್ಯರು ಹೇಳುವ ಪ್ರಕಾರ, ಸಾಧ್ಯವಾದಷ್ಟು ಸಂಸ್ಕರಿತ ಆಹಾರ, ಪ್ಯಾಕೆಟ್ ಆಹಾರಗಳನ್ನು ಆದಷ್ಟು ಅವೈಡ್ ಮಾಡುವುದರಿಂದ ಕೂಡ ಈ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು