ಹಿಮೋಗ್ಲೋಬಿನ್ ಕಡಿಮೆ ಆಗಿದೆ ಅಂತ ಚಿಂತೆ ಮಾಡಬೇಡಿ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ!
ಹಿಮೋಗ್ಲೋಬಿನ್ ಉತ್ಪಾದನೆಯು ದೇಹಕ್ಕೆ ಅತಿ ಮುಖ್ಯವಾದುದು. ಮುಖ್ಯವಾಗಿ ದೇಹಕ್ಕೆ ಆಮ್ಲಜನಕವನ್ನು ಸಾಗಿಸಲು ಹಿಮೋಗ್ಲೋಬಿನ್ ಕಾರಣವಾಗುತ್ತದೆ. ಒಂದು ವೇಳೆ ಹೆಚ್.ಬಿ ಮಟ್ಟ ಕಡಿಮೆಯಾದರೆ, ಅದು ದೌರ್ಬಲ್ಯ, ಆಯಾಸ, ರಕ್ತಹೀನತೆಗೆ ಕಾರಣವಾಗಬಹುದು. ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ರಕ್ತದಲ್ಲಿನ ಸಾಮಾನ್ಯ ಮಟ್ಟದ ಹಿಮೋಗ್ಲೋಬಿನ್ ಕಾಪಾಡಿಕೊಳ್ಳುವುದು ಅತ್ಯವಶ್ಯಕ.
ಹಿಮೋಗ್ಲೋಬಿನ್ ಮಟ್ಟವು ಗಣನೀಯವಾಗಿ ಕಡಿಮೆಯಾದರೆ, ರಕ್ತಹೀನತೆ ಎಂದು ಗುರುತಿಸಬಹುದು. ಹಾಗಾದರೆ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ಲೇಖನದ ಮೂಲಕ ತಿಳಿಯಿರಿ.
ಹಿಮೋಗ್ಲೋಬಿನ್ ಕಡಿಮೆಯಾದರೆ ಕಂಡು ಬರುವ ಲಕ್ಷಣಗಳು
- ದೌರ್ಬಲ್ಯ
- ಆಯಾಸ
- ತಲೆನೋವು
- ಉಸಿರಾಟದ ತೊಂದರೆ
- ತಲೆತಿರುಗುವಿಕೆ
- ಹಸಿವಾಗದೇ ಇರುವುದು
- ಹೃದಯ ಬಡಿತದಲ್ಲಿ ಏರುಪೇರು
೨. ಕಬ್ಬಿಣದ ಸೇವನೆಯನ್ನು ಹೆಚ್ಚಿಸಿ
ಕಡಿಮೆ ಮಟ್ಟದ ಹಿಮೋಗ್ಲೋಬಿನ್ ಹೊಂದಿರುವ ವ್ಯಕ್ತಿಗಳು ಹೆಚ್ಚು ಕಬ್ಬಿಣವುಳ್ಳ ಆಹಾರಗಳ ಸೇವನೆ ಮಾಡುವುದು ಒಳ್ಳೆಯದು. ವಾಸ್ತವವಾಗಿ, ಕಬ್ಬಿಣವು ಹಿಮೋಗ್ಲೋಬಿನ್ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಹೆಚ್ಚು ಕಬ್ಬಿಣವುಳ್ಳ ಆಹಾರಗಳು ಕೆಳಗಿನಂತಿವೆ…
- ಮಾಂಸ
- ಮೀನು
- ಮೊಟ್ಟೆ
- ಸೋಯಾ ಉತ್ಪನ್ನಗಳು
- ಡ್ರೈ ಫುಟ್ಸ್
- ಹಣ್ಣುಗಳು
- ಎಲೆಕೋಸು, ಪಾಲಕ್, ಕೋಸುಗಡ್ಡೆ, ಹಸಿರು ಬೀನ್ಸ್
- ಕಡಲೆಕಾಯಿ ಎಣ್ಣೆ
೩. ಫೋಲೇಟ್ ಸೇವನೆಯನ್ನು ಹೆಚ್ಚಿಸುವುದು ಉತ್ತಮ
ಫೋಲೇಟ್ ಎಂಬುದು ವಿಟಮಿನ್ ಬಿ ಆಗಿದ್ದು ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಪ್ರಮುಖವಾದ ಪಾತ್ರ ವಹಿಸುತ್ತದೆ. ಆಮ್ಲಜನಕವನ್ನು ದೇಹಕ್ಕೆ ಪೂರೈಸಲು ಫೋಲೇಟ್ ಅತಿ ಮುಖ್ಯವಾದುದು. ಫೋಲೇಟ್ ಕೊರತೆಯು ರಕ್ತಹೀನತೆ ಮತ್ತು ಕಡಿಮೆ ಹಿಮೋಗ್ಲೋಬಿನ್ ಮಟ್ಟಗಳಿಗೆ ಕಾರಣವಾಗಬಹುದು.
ಫೋಲೇಟ್ ಹೆಚ್ಚಿಸುವ ಆಹಾರಗಳು
- ಸೊಪ್ಪು
- ಅಕ್ಕಿ
- ಕಡಲೆಕಾಯಿ
- ಅವರೆಕಾಳು
- ಕಿಡ್ನಿ ಬೀನ್ಸ್ ಅಥವಾ ರಾಜ್ಮಾ
- ಆವಕಾಡೊಗಳು
೪. ಕಬ್ಬಿಣದ ಹೀರಿಕೊಳ್ಳುವಿಕೆಗೆ ಪೂರಕವಾಗುವ ಆಹಾರಗಳು ಇಲ್ಲಿವೆ-0ಒಬ್ಬ ವ್ಯಕ್ತಿಯು ತನ್ನ ದೇಹದ ಹಿಮೋಗ್ಲೋಬಿನ್ ಹೆಚ್ಚಿಸಲು ಕಬ್ಬಿಣ ಯಥೇಚ್ಛವಾದ ಪ್ರಮಾಣದಲ್ಲಿರುವ ಆಹಾರಗಳನ್ನು ಸೇವಿಸಬೇಕು. ವಾಸ್ತವವಾಗಿ, ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡಬೇಕು.ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿಗಳು ಮತ್ತು ಹಸಿರು ತರಕಾರಿಗಳಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸಬಹುದು.
೫. ಕಬ್ಬಿಣದ ಪೂರಕಗಳು
ಅತ್ಯಂತ ಕಡಿಮೆ ಮಟ್ಟದ ಹಿಮೋಗ್ಲೋಬಿನ್ ಹೊಂದಿರುವ ವ್ಯಕ್ತಿಗೆ ಕಬ್ಬಿಣದ ಪೂರಕಗಳನ್ನು ತೆಗೆದುಕೊಳ್ಳಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ವಾಸ್ತವವಾಗಿ, ಅತಿಯಾದರೆ ಅಮೃತವು ವಿಷ ಎಂಬಂತೆ, ಅತಿ ಹೆಚ್ಚು ಕಬ್ಬಿಣವು ದೇಹಕ್ಕೆ ಅಪಾಯಕಾರಿ. ಇದು ಕೆಲವೊಮ್ಮೆ ಹಿಮೋಕ್ರೊಮಾಟೋಸಿಸ್ಗೆ ಕಾರಣವಾಗಬಹುದು. ಇದರ ಪರಿಣಾಮ ನಿಮ್ಮ ಯಕೃತ್ತಿಗೆ ಸಮಸ್ಯೆ, ಮಲಬದ್ಧತೆ, ವಾಕರಿಕೆ ಮತ್ತು ವಾಂತಿಯಂತಹ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು.
ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸಲು ವೈದ್ಯರು ಕೆಲವು ಪೂರಕಗಳನ್ನು ಒಂದೆರಡು ತಿಂಗಳುಗಳ ಕಾಲ ಶಿಫಾರಸ್ಸು ಮಾಡುತ್ತಾರೆ.