ಮೊಸರು ಅನ್ನ ತಿನ್ನುವ ಪ್ರತಿಯೊಬ್ಬರು ನೋಡಲೇಬೇಕಾದ ಮಾಹಿತಿ!

0 6,501

ಬೇಸಿಗೆ ಕಾಲದಲ್ಲಿ ಇಷ್ಟ ಆಗುವ ಕೆಲವೊಂದು ತಿಂಡಿ ತಿನಿಸುಗಳು ಮಳೆಗಾಲದಲ್ಲಿ ಇಷ್ಟ ಆಗುವುದಿಲ್ಲ. ಅದರಂತೆ ತಯಾರು ಮಾಡಿದ ಅಡುಗೆ ಪದಾರ್ಥಗಳು ಅಷ್ಟೇ.ಕೆಲವು ಆಹಾರ ಪದಾರ್ಥಗಳು ಮನೆಯಲ್ಲಿ ಕೆಲವೊಂದು ಮಂದಿಗೆ ತುಂಬಾ ಪ್ರಿಯ ಆಗಿರುತ್ತವೆ.ಇನ್ನು ಕೆಲವರಿಗೆ ಕಷ್ಟ ಆಗುತ್ತವೆ. ಅದರೆ ಎಲ್ಲಾರು ಇಷ್ಟಪಟ್ಟು ಎಲ್ಲಾ ಸಮಯದಲ್ಲೂ ತಿನ್ನುವ ಬೆಳಗಿನ ಉಪಹಾರದ ತಿಂಡಿ ಎಂದರೆ ಅದು ಮೊಸರನ್ನ. ಗಟ್ಟಿ ಮೊಸರು ಮತ್ತು ಹಾಲಿನ ಸಮ್ಮಿಶ್ರಣದಿಂದ ತಯಾರುಮಾಡುವ ಮೊಸರು ಅನ್ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೊಟ್ಟೆ ಕೆಟ್ಟು ಹೋದರೆ ಇದು ಬಹಳ ಬೇಗನೆ ಪರಿಹಾರ ಒದಗಿಸುತ್ತದೆ. ಹಾಗಾದರೆ ಮೊಸರನ್ನ ತಿನ್ನುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

1, ಅತಿಯಾದ ಉಷ್ಣಾಂಶದಿಂದ ಅನೇಕ ಆರೋಗ್ಯ ತೊಂದರೆಗಳು ಎದುರು ಆಗುತ್ತವೆ.ದೇಹವನ್ನು ಸಾಧ್ಯವಾದಷ್ಟು ಇಂತಹ ಸಂದರ್ಭದಲ್ಲಿ ತಂಪಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು.ಇದಕ್ಕೆ ಅನುಕೂಲಕರವಾಗಿ ಮೊಸರು ಅನ್ನ ಕೆಲಸ ಮಾಡುತ್ತದೆ. ಯಾವುದೇ ಸಂದರ್ಭದಲ್ಲಿ ದೇಹ ಅತಿಯಾದ ತಾಪ ಮಾನದಿಂದ ನಿಮಗೆ ಜ್ವರ ಬಂದ ಅನುಭವ ಉಂಟಾದರೆ ಮೊಸರನ್ನವನ್ನು ಸೇವನೆ ಮಾಡಬೇಕು.ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.

2, ಇನ್ನು ಒಂದು ಬೋಟ್ಟಲು ಮೊಸರು ಅನ್ನ ಹೊಟ್ಟೆ ತುಂಬುತ್ತದೆ. ದೀರ್ಘಕಾಲದವರೆಗೆ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಕ್ಯಾಲೋರಿ ಅಂಶ ಕಡಿಮೆ ಪ್ರಮಾಣದಲ್ಲಿದೆ. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

3, ಇನ್ನು ಮೊಸರನ್ನ ತಯಾರು ಮಾಡುವ ವಿಧಾನ ಏನು ಎಂದರೆ ಮೊದಲು ಒಂದು ಬೋಟ್ಟಲಿನಲ್ಲಿ ಅನ್ನವನ್ನು ಮೋಸರಿನ ಜೊತೆ ಕಲಸಿಕೊಳ್ಳಬೇಕು.ಒಂದು ಬಂಡಲಿನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಅದಕ್ಕೆ ಜೀರಿಗೆ ಉದ್ದಿನ ಬೆಳೆ ಸಾಸಿವೆ ಮತ್ತು ಕರಿ ಬೇವಿನ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು.ತಯಾರಾದ ಒಗ್ಗರಣೆಯನ್ನು ಮೊಸರು ಅನ್ನದ ಮಿಶ್ರಣದ ಮೇಲೆ ಸುರಿದು ರುಚಿಗೆ ಸ್ವಲ್ಪ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಬೇಕು. ಮೊಸರು ಅನ್ನ ನಿಮ್ಮ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುವುದು ಮಾತ್ರವಲ್ಲದೆ ನಿಮ್ಮ ದೇಹಕ್ಕೆ ಆರೋಗ್ಯಕರವಾದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಇದರಲ್ಲಿ ಅಪಾರ ಪ್ರಮಾಣದ ಆರೋಗ್ಯದ ಪ್ರಯೋಜನಗಳು ಸಿಗುವುದರಿಂದ ಬೆಳಗಿನ ಉಪಹಾರದ ಸಮಯದಲ್ಲಿ ಹೊಟ್ಟೆ ಹಸಿವನ್ನು ನಿಗಿಸಲು ಮತ್ತು ಆರೋಗ್ಯಕರವಾದ ಲಾಭಗಳನ್ನು ಪಡೆದುಕೊಳ್ಳಲು ಮೊಸರನ್ನ ಸೇವನೆ ಮಾಡಬೇಕು.

Leave A Reply

Your email address will not be published.