ದೇವಸ್ಥಾನದ ಅಕ್ಕ ಪಕ್ಕ ಮನೆ ಇದ್ರೆ ಶುಭವೋ ಅಶುಭವೋ!

0 10,850

ದೇವಸ್ಥಾನ ಪವಿತ್ರ ಸ್ಥಳವಾದರೂ ದೇವರ ಗುಡಿಯ ನೆರಳು ಮನೆಯ ಮೇಲೆ ಬೀಳಬಾರದು. ಈ ರೀತಿ ದೇವಸ್ಥಾನದ ಅಕ್ಕಪಕ್ಕ ಮನೆ ಇದ್ರೆ ತೊಂದರೆ ಪಡಬೇಕಾಗುತ್ತದೆ ಎಂಬುದಾಗಿ ಪ್ರತೀತಿ ಇದೆ. ಇಂತಹ ಸಂದರ್ಭದಲ್ಲಿ ಕೆಲವು ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂಬುದಾಗಿ ವಾಸ್ತುಶಾಸ್ತ್ರ ತಿಳಿಸುತ್ತದೆ.

ದೇವಸ್ಥಾನದ ಬಳಿ ಮನೆ ನಿರ್ಮಾಣ ಮಾಡುವುದು ಶುಭ ಅಲ್ಲ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ದೇವಸ್ಥಾನದ ನೆರಳು ಮನೆಯ ಮೇಲೆ ಬಿದ್ದರೆ ಅದು ಶ್ರೇಯಸ್ಸು ಅಲ್ಲ. ಇದರಿಂದ ಕಷ್ಟ ಎದುರಾಗುತ್ತದೆ ಎಂಬ ನಂಬಿಕೆ ಇದೆ.

ಒಂದು ವೇಳೆ ದೇವಸ್ಥಾನದ ಪಕ್ಕವೇ ಮನೆ ಕಟ್ಟಲು ಮುಂದಾದರೆ ಮನೆಯ ಮುಖ್ಯದ್ವಾರದ ಮೇಲೆ ದೇವಸ್ಥಾನದ ನೆರಳು ಬೀಳದಂತೆ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಶಿವ, ಸೂರ್ಯ, ವಿಷ್ಣು ದೇಗುಲದ ಎದುರು ಮುಂಬಾಗಿಲು ಬಾರದಂತೆ ಕ್ರಮ ಕೈಗೊಳ್ಳಬೇಕು

ದೇವಸ್ಥಾನ ಅಕ್ಕ ಪಕ್ಕದಲ್ಲಿದ್ದರೆ, ಮನೆ ದೇವಸ್ಥಾನ ಗೋಪುರಕ್ಕಿಂತ ಎತ್ತರ ಇರದಂತೆ ನೋಡಿಕೊಳ್ಳಬೇಕು. ಮನೆಯ ಬಾಗಿಲು ಕೂಡ ದೇಗುಲದ ಬಾಗಿಲಿಗಿಂತ ಎತ್ತರದಲ್ಲಿರ ಬಾರದು. ಮನೆಯ ಪಿಲ್ಲರ್ ಗಳು ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿರಬಾರದು

ದೇವಸ್ಥಾನದಿಂದ ಹೊರಹೊಮ್ಮುವ ಘಂಟೆ ನಾದ, ಆರತಿ, ಧೂಪ, ದೀಪಗಳು ಋಣಾತ್ಮಕ ಶಕ್ತಿಯನ್ನು ಗುಡಿಯಿಂದ ಹೊರದೂಡುತ್ತದೆ. ಈ ವೇಳೆ ಈ ಋಣಾತ್ಮಕ ಶಕ್ತಿ ದೇಗುಲದ ಪಕ್ಕದ ಮನೆಗೆ ನುಗ್ಗುತ್ತವೆ. ಇದರಿಂದ ಮನೆಯಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ ಎಂಬ ವೈಜ್ಞಾನಿಕ ಮಾಹಿತಿ.

ಇದೇ ಕಾರಣಕ್ಕೆ ದೇವಸ್ಥಾನದ ಅಕ್ಕಪಕ್ಕ ಮನೆ ನಿರ್ಮಾಣ ಮಾಡಬಾರದು ಎಂಬ ಪ್ರತೀತಿ ಇದೆ. ಜೊತೆಗೆ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳದಂತೆ ಎಚ್ಚರಿಕೆವಹಿಸಬೇಕು ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ

ದೇವಸ್ಥಾನ ಮಾತ್ರವಲ್ಲದೇ, ಚರ್ಚ್​ ಮಸೀದಿ, ದರ್ಗಾಗಳ ನೆರಳು ಸಹ ಮನೆಯ ಮೇಲೆ ಬೀಳುವುದು ಒಳ್ಳೆಯದಲ್ಲ. ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ

Leave A Reply

Your email address will not be published.