ನುಗ್ಗೆಕಾಯಿ ಇಂತವರು ತಿನ್ನೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!
ನುಗ್ಗೆಕಾಯಿ ತಿಂದರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆ ಎಂದು ನಮ್ಮ ಹಿರಿಯರು ಹೇಳುತ್ತಲಿದ್ದರು. ಕೇವಲ ನುಗ್ಗೆಕಾಯಿ ಮಾತ್ರವಲ್ಲದೆ ಅದರ ಸೊಪ್ಪು ಹಾಗೂ ತೊಗಟೆಯು ನಮಗೆ ಹಲವಾರು ರೀತಿಯಿಂದ ಆರೋಗ್ಯದಲ್ಲಿ ನೆರವಾಗುವುದು ಎಂದು ಹೇಳಲಾಗುತ್ತದೆ. ನುಗ್ಗೆಕಾಯಿ ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿಯಬಹುದು.
ಆಹಾರ ಕ್ರಮದಲ್ಲಿ ನುಗ್ಗೆಕಾಯಿ ಮತ್ತು ನುಗ್ಗೆಕಾಯಿ ಮರದ ಸೊಪ್ಪು ಬಳಸಿದರೆ ಅದು ನಮ್ಮ ಆರೋಗ್ಯವಾಗಿ ಇಡುವುದು. ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲಿ ಇಂದು ನುಗ್ಗೆಕಾಯಿಯು ತುಂಬಾ ಜನಪ್ರಿಯ ವಾಗಿದೆ. ಇದನ್ನು ವಿವಿಧ ರೀತಿಯ ಖಾದ್ಯ ಹಾಗೂ ಅಡುಗೆ, ಸೂಪ್ ಗಳಲ್ಲಿ ಬಳಕೆ ಮಾಡಿ ಕೊಂಡು ಅದರ ಲಾಭ ಪಡೆಯಲಾಗುತ್ತಿದೆ. ಈ ಲೇಖನದಲ್ಲಿ ನುಗ್ಗೆಕಾಯಿಯಿಂದ ಸಿಗುವ ಹಲವಾರು ಆರೋಗ್ಯ ಲಾಭಗಳ ಬಗ್ಗೆ ನಾವು ತಿಳಿಯುವ.
ರಕ್ತದಲ್ಲಿ ಸಕ್ಕರೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವುದು–ನುಗ್ಗೆಕಾಯಿಯಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳು ಇದ್ದು, ನಿಯಮಿತವಾಗಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಹೃದಯದ ಆರೋಗ್ಯ ಸುಧಾರಿಸುವುದು. ರಕ್ತವನ್ನು ದಪ್ಪವಾಗಿಸುವ ಮತ್ತು ಹೃದಯದ ಕಾರ್ಯವು ಸೂಕ್ತವಾಗಿ ಇರುವಂತೆ ನೋಡಿಕೊಳ್ಳುವುದು.
ಮೂಳೆಗಳನ್ನು ಬಲಪಡಿಸುವುದು–ನುಗ್ಗೆಕಾಯಿಯಲ್ಲಿ ಇರುವಂತಹ ಎರಡು ರೀತಿಯ ಪ್ರಮುಖ ಪೋಷಕಾಂಶಗಳಿಂದಾಗಿ ಇದು ಅಸ್ಥಿರಂಧ್ರತೆ ಮತ್ತು ಸಂಧಿವಾತವನ್ನು ದೂರವಿಟ್ಟು ಮೂಳೆಗಳನ್ನು ಬಲಪಡಿಸುವುದು. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶವು ಅತೀ ಮುಖ್ಯವಾಗಿ ಬೇಕಾಗಿರುವುದು. ನುಗ್ಗೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಮೂಳೆಗಳ ಆರೋಗ್ಯವು ಉತ್ತಮವಾಗುವುದು.
ಶೀತ ಮತ್ತು ಜ್ವರದ ವಿರುದ್ಧ ಹೋರಾಡಲು–ವಿಟಮಿನ್ ಸಿ ಅಧಿಕವಾಗಿರುವಂತಹ ನುಗ್ಗೆಕಾಯಿಯು ಕೆಲವೊಂದು ಸಾಮಾನ್ಯ ಸಮಸ್ಯೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ. ಇದರಲ್ಲಿ ಮುಖ್ಯವಾಗಿ ಕಾಡುವಂತಹ ಶೀತ, ಜ್ವರ ಹಾಗೂ ಗಂಟಲು ನೋವಿನ ಸಮಸ್ಯೆ ನಿವಾರಣೆ ಆಗುವುದು. ನುಗ್ಗೆಕಾಯಿ ಸೂಪ್ ಮಾಡಿಕೊಂಡು ಕುಡಿದರೆ ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು. ನುಗ್ಗೆಕಾಯಿಯಲ್ಲಿ ಚಿಕಿತ್ಸಕ ಗುಣವಿದೆ ಮತ್ತು ಇದು ಅಸ್ತಮಾ, ಉಬ್ಬರ ಮತ್ತು ಶ್ವಾಸಕೋಶದ ಇತರ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡುವುದು.
ಜೀರ್ಣಕ್ರಿಯೆ ಸಮಸ್ಯೆ–ಜೀರ್ಣಕ್ರಿಯೆ ಸಮಸ್ಯೆಗಳಿಗೆ ನುಗ್ಗೆಕಾಯಿಯು ತುಂಬಾ ಪರಿಣಾಮಕಾರಿ. ಒಂದು ಚಮಚ ನುಗ್ಗೆಕಾಯಿ ಎಲೆಯ ಜ್ಯೂಸ್ ನ್ನು ಜೇನುತುಪ್ಪದ ಜತೆಗೆ ಬೆರೆಸಿಕೊಂಡು ಅದನ್ನು ಎಳನೀರಿಗೆ ಹಾಕಿಕೊಂಡು ಕುಡಿದೆ ಅದರಿಂದ ಕೊಲೆರಾ, ಅತಿಸಾರ, ಕೊಲೈಟಿಸ್ ಮತ್ತು ಕಾಮಾಲೆ ರೋಗ ಕಡಿಮೆ ಆಗುವುದು.
ಶ್ವಾಸಕೋಶ ಸಮಸ್ಯೆ–ಅಸ್ತಮಾ ಮತ್ತು ಇತರ ಕೆಲವೊಂದು ರೀತಿಯ ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ನುಗ್ಗೆಕಾಯಿ ಪ್ರಮುಖ ಪಾತ್ರ ವಹಿಸುವುದು. ನುಗ್ಗೆಕಾಯಿಯನ್ನು ಬೇಯಿಸಿದ ನೀರಿನ ಹಬೆಯನ್ನು ತೆಗೆದು ಕೊಂಡರೆ ಆಗ ಶ್ವಾಸಕೋಶದ ಸಮಸ್ಯೆ ನಿವಾರಣೆ ಆಗುವುದು ಮತ್ತು ಮುಂದಿನ ಕೆಲವು ದಿನಗಳಲ್ಲಿ ಸಮಸ್ಯೆಯು ಕಡಿಮೆ ಆಗುವುದು.
ಬಂಜೆತನ–ಈ ತರಕಾರಿಯ ಹುಡಿಯ ರೂಪವನ್ನು ಬಳಸಿಕೊಂಡರೆ ಆಗ ಖಂಡಿತವಾಗಿಯೂ ಬಂಜೆತನ, ವೀರ್ಯ ತೆಳುವಾಗುವುದು ಮತ್ತು ಶೀಘ್ರ ಸ್ಖಲನ ಸಮಸ್ಯೆ ನಿವಾರಿಸಬಹುದು. ಲೈಂಗಿಕ ಅಸಾಮರ್ಥ್ಯ ಮತ್ತು ಸರಿಯಾದ ಶಕ್ತಿ ಪ್ರದರ್ಶನಕ್ಕೆ ಸಾಧ್ಯವಗದೆ ಇದ್ದರೆ ಆಗ ನುಗ್ಗೆಕಾಯಿ ನೆರವಾಗುವುದು.
ಮೂತ್ರಕೋಶದ ಸಮಸ್ಯೆ–ಒಂದು ನುಗ್ಗೆಕಾಯಿಯ ಎಲೆಗಳ ತಾಜಾ ರಸವನ್ನು ಒಂದು ಲೋಟ ಸೌತೆಕಾಯಿ ಅಥವಾ ಕ್ಯಾರೆಟ್ ಜ್ಯೂಸ್ ನ ಜತೆಗೆ ಬೆರೆಸಿಕೊಂಡು ಕುಡಿದರೆ ಆಗ ಅದರಿಂದ ಮೂತ್ರ ವಿಸರ್ಜನೆ ವೇಳೆ ಕಾಣಿಸಿಕೊಳ್ಳುವಂತಹ ಉರಿಯೂತ ಕಡಿಮೆ ಆಗುವುದು. ಒಂದು ಚಮಚ ನುಗ್ಗೆಕಾಯಿ ಎಲೆಯ ರಸ ಮತ್ತು ಹತ್ತು ಗ್ರಾಂನಷ್ಟು ಕಲ್ಲುಪ್ಪನ್ನು ಬೆರೆಸಿಕೊಂಡು ಕುಡಿದರೆ ಅದರಿಂದ ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
ಕ್ಯಾನ್ಸರ್ ಮಟ್ಟ ತಗ್ಗಿಸುವುದು–ನಿಯಮಿತವಾಗಿ ನುಗ್ಗೆಕಾಯಿ ಮತ್ತು ಅದರ ಸೊಪ್ಪನ್ನು ತಿಂದರೆ ಆಗ ಕ್ಯಾನ್ಸರ್ ಬರುವಂತಹ ಅಪಾಯವನ್ನು ಶೇ.80ರಷ್ಟು ಕಡಿಮೆ ಮಾಡಬಹುದು ಮತ್ತು ಸ್ತನ ಕ್ಯಾನ್ಸರ್ ಗೆ ಒಳಗಾಗಿರುವಂತಹ ಮಹಿಳೆಯರಲ್ಲಿ ಇದು ಸಾಬೀತು ಆಗಿದೆ.
ವಿಟಮಿನ್ ಗಳಿಂದ ಸಮೃದ್ಧ–ನುಗ್ಗೆಕಾಯಿಯಲ್ಲಿ ವಿಟಮಿನ್ ಬಿಯಾಗಿರುವಂತಹ ಥಯಾಮಿನ್, ರಿಬೋಫ್ಲಾವಿನ್ ಮತ್ತು ನಿಯಾಸಿನ್ ಸಮೃದ್ಧವಾಗಿದೆ. ಇದು ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಇರುವಂತಹ ಫಾಲಿಕ್ ಆಮ್ಲವು ಗರ್ಭಿಣಿಯರಿಗೆ ಒಳ್ಳೆಯದು. ನುಗ್ಗೆಕಾಯಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಮತ್ತು ಇದು ಕಣ್ಣಿನ ಆರೋಗ್ಯ ಕಾಪಾಡುವುದು ಮತ್ತು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು.
ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು–ನುಗ್ಗೆಕಾಯಿಯಲ್ಲಿ ಇರುವಂತಹ ಕೆಲವೊಂದು ಪ್ರಮುಖ ಪೋಷಕಾಂಶಗಳು ಯಕೃತ್ ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಹೊಟ್ಟೆಯ ಕೆಲವು ಸಮಸ್ಯೆಗಳಾಗಿರುವಂತಹ ಮಲಬದ್ಧತೆ, ಅಸಿಡಿಟಿ, ಗ್ಯಾಸ್ಟ್ರಿಕ್ ಇತ್ಯಾದಿಗಳನ್ನು ನಿವಾರಣೆ ಮಾಡುವುದು. ಹೊಟ್ಟೆಯ ಕ್ಯಾನ್ಸರ್ ನ್ನು ದೂರವಿಡುವುದು. ನೈಸರ್ಗಿಕವಾಗಿ ಇದು ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಹೊಟ್ಟೆಯನ್ನು ಆರೋಗ್ಯವಾಗಿಡುವುದು.
ಮೊಡವೆ ವಿರುದ್ಧ ಹೋರಾಡುವುದು–ಚರ್ಮದ ಕೆಲವೊಂದು ಸಮಸ್ಯೆಗಳಾಗಿರುವಂತಹ ಮೊಡವೆ ಹಾಗೂ ಬೊಕ್ಕೆಯನ್ನು ಇದು ದೂರವಿಡುವುದು. ರಕ್ತವನ್ನು ಶುದ್ಧೀಕರಿಸುವ ಇದು ರಕ್ತದಲ್ಲಿ ಇರುವಂತಹ ಎಲ್ಲಾ ರೀತಿಯ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು.
ಕೂದಲು ಮತ್ತು ಚರ್ಮದಕ್ಕಾಗಿ–ವಿಟಮಿನ್ ಎ, ಬಿ ಮತ್ತು ಫಾಲಿಕ್ ಆಮ್ಲದಿಂದ ಇದು ಸಮೃದ್ಧವಾಗಿದೆ ಮತ್ತು ಇದರಿಂದಾಗಿ ಸುಂದರ ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುವುದು. ಅದೇ ರೀತಿಯಲ್ಲಿ ಕೂದಲು ಕೂಡ ರೇಷ್ಮೆಯಂತೆ ಹೊಳೆಯುವುದು.
ಹೃದಯದ ಆರೋಗ್ಯ ಕಾಪಾಡುವುದು–ರಕ್ತದೊತ್ತಡ ಹೆಚ್ಚಾಗುವಂತಹ ಯಾವುದೇ ಸಮಸ್ಯೆಯು ನಿಮಗಿದ್ದರೆ ಆಗ ನೀವು ಈ ತರಕಾರಿಯನ್ನು ತಿಂದು ಹೃದಯ ಕಾಯಿಲೆಯನ್ನು ದೂರವಿಡಬಹುದು.
ಸದೃಢ ಮೂಳೆಗಳಿಗಾಗಿ–ನುಗ್ಗೆಕಾಯಿ ಸೇವನೆ ಮಾಡಿದರೆ ಅದರಿಂದ ಮೂಳೆಗಳ ಆರೋಗ್ಯವು ತುಂಬಾ ಸುಧಾರಣೆ ಆಗುವುದು. ನುಗ್ಗೆಕಾಯಿಯಲ್ಲಿ ಇರುವಂತಹ ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶವು ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.