ಅರಿಶಿನ ಹೇಗೆ ಉಪಯೋಗಿಸಬೇಕು ಮಾರ್ಕೆಟ್ ನಲ್ಲಿ ಸಿಗುವ ಪುಡಿ ಬೇಡವೇ ಬೇಡ!
ಸಾಮಾನ್ಯವಾಗಿ ಅರಿಶಿಣದ ಪುಡಿ ಮಾರ್ಕೆಟ್ ನಲ್ಲಿ ಸಿಗುತ್ತದೆ. ಇದನ್ನು ಎಲ್ಲಾರು ಉಪಯೋಗಿಸುತ್ತಾರೆ. ಅದರೆ ಅರಿಶಿಣದ ಪುಡಿ ಯಲ್ಲಿ ವಿಶೇಷವಾದ ಔಷಧಿಯ ಗುಣ ಕಾರ್ಕ್ಯೂಮ್ ಅನ್ನೋದು ಇದೆ. ಕಾರ್ಕ್ಯೂಮ್ ಅನ್ನು ತೆಗೆದು ಅರಿಶಿನ ಮಾಡಿ ಮಾರ್ಕೆಟ್ ಗೆ ಬಿಡುತ್ತಾರೆ. ಏಕೆಂದರೆ ಕಾರ್ಕ್ಯೂಮ್ ಗೆ ಬಹಳ ಬೆಲೆ ಇದೆ. ಇದು ಕ್ಯಾನ್ಸರ್ ವಿರುದ್ಧ ಹೊರಡುವ ಶಕ್ತಿಯನ್ನು ಹೊಂದಿದೆ. ಇದನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಹಾಗಾಗಿ ರೆಡಿಮೇಡ್ ಅರಿಶಿದ ಪುಡಿಯನ್ನು ದಯಮಾಡಿ ಉಪಯೋಗ ಮಾಡಬೇಡಿ.
ಅರಿಶಿನ ಕೊಂಬನ್ನು ತೆಗೆದುಕೊಳ್ಳಿ ಚೆನ್ನಾಗಿ ವಾಶ್ ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ನಂತರ ಇದನ್ನು ನೀವೇ ಪುಡಿ ಮಾಡಿಕೊಂಡು ಉಪಯೋಗ ಮಾಡಬಹುದು. ಅಲರ್ಜಿ ಇರುವವರು ಅರಿಶಿನ ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಬೆಳಗ್ಗೆ ಮತ್ತು ಸಂಜೆ ತಿನ್ನುವುದರಿಂದ ಅಲರ್ಜಿ ಕಡಿಮೆ ಆಗುತ್ತದೆ ಮತ್ತು ಶೀತ ನೆಗಡಿ ಕೆಮ್ಮು ದಮ್ಮು ಕಡಿಮೆ ಆಗುತ್ತದೆ. ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ.
ಮುಖದಲ್ಲಿ ಪಿಂಪಲ್ ಇರುವವರು ಅರಿಶಿನ ಕೊಂಬನ್ನು ತೆಯ್ದು ಅದನ್ನು ಪಿಂಪಲ್ ಇರುವ ಜಾಗಕ್ಕೆ ಹಚ್ಚಿದರೆ ಖಂಡಿತವಾಗಿ ಪಿಂಪಲ್ ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೆ ಅರಿಶಿನ ಹಾಲನ್ನು ಸಂಜೆ ಸಮಯದಲ್ಲಿ ಕುಡಿಯುವುದರಿಂದ ಕಫದ ಸಮಸ್ಸೆ ಉಂಟಾಗುವುದಿಲ್ಲ. ಉಳಿದವರು ರಾತ್ರಿ ಕುಡಿದರು ಸಹ ಪರವಾಗಿಲ್ಲ. ಈ ಒಂದು ಉಪಾಯವನ್ನು ನೀವು ಅನುಸರಿಸಿ ಅರಿಶಿಣದ ಉಪಯೋಗವನ್ನು ನೀವು ಪಡೆದುಕೊಳ್ಳಿ.