ಪೂರ್ವ ಭಾದ್ರ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0 17

ಪೂರ್ವ ಭಾದ್ರ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ಪೂರ್ವ ಭಾದ್ರ ನಕ್ಷತ್ರದಲ್ಲಿ ಜನಿಸಿದವರು ಜೀವನದಲ್ಲಿ ಕೆಲವು ಸಿದ್ಧಾಂತಗಳನ್ನು ಇಟ್ಟುಕೊಂಡಿರುತ್ತಾರೆ ಎತ್ತರವಾದ ನಿಲುವನ್ನು ಹೊಂದಿರುತ್ತಾರೆ ಯಾವುದೇ ಸಂದರ್ಭದಲ್ಲಿ ತಮ್ಮ ಸಿದ್ಧಾಂತಕ್ಕೆ ಧಕ್ಕೆ ಬರುವಂತೆ ಮಾಡುವುದಿಲ್ಲ ಆದರೆ ಸಂದರ್ಭಕ್ಕೆ ಒಗ್ಗಿಕೊಳ್ಳುವಂತಹ ವ್ಯಕ್ತಿಗಳಾಗಿರುತ್ತಾರೆ

ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಇಂದ್ರಿಯಗಳ ಮೇಲೆ ಹಿಡಿತವನ್ನು ಹೊಂದಿರುತ್ತಾರೆ ಬುದ್ಧಿವಂತರಾಗಿರುವ ಇವರು ಎಲ್ಲಾ ರೀತಿಯ ಕಲೆಗಳಲ್ಲಿ ತಜ್ಞರಾಗಿರುತ್ತಾರೆ ಆದರೂ ಉದ್ವಿಗ್ನ ಸ್ವಭಾವದ ಕಾರಣ ಇವರು ಹಠವಾದಿ ಮತ್ತು ಶೂರರಾಗಿರುತ್ತಾರೆ ಶತ್ರುಗಳನ್ನು ಮಣಿಸುವಂಥವರಾಗಿದ್ದು ಕಷ್ಟಗಳನ್ನು ಎದುರಿಸುವಂತಹ ಮತ್ತು ಕಷ್ಟಗಳನ್ನು ತೆಗೆದುಕೊಳ್ಳಲು ಯಾವುದೇ ರೀತಿಯ ಹಿಂಜರಿಕೆ ಮಾಡುವುದಿಲ್ಲ ಜೊತೆಗೆ ಹಣಕಾಸಿಗೆ ಸಂಬಂಧಪಟ್ಟ ಇಲಾಖೆಗೆ ಇವರು ಸೂಕ್ತರಾಗಿರುತ್ತಾರೆ ಇವರು ಸಹಾಯಕ್ಕೆ ಅರ್ಹರಾಗಿ ಇದ್ದಾರೋ ಇಲ್ಲವೋ ಎಂದು ಯೋಚಿಸಿ

ಸಹಾಯ ಮಾಡುತ್ತಾರೆ ಅಷ್ಟು ಸುಲಭವಾಗಿ ಸಹಾಯ ಮಾಡಲು ಒಪ್ಪುವುದಿಲ್ಲ ದಾನದ ವಿಚಾರ ಬಂದಾಗ ಇವರು ಸಂಪೂರ್ಣವಾಗಿ ವಾಸ್ತವ ವಾದಿಗಳಾಗುತ್ತಾರೆ ಇವರು ಆರ್ಥಿಕವಾಗಿ ದುರ್ಬಲರಾದರು ಇತರರಿಗೆ ಇವರ ಮೇಲೆ ಇರುವ ವಿಶ್ವಾಸ ಹೋಗುವುದಿಲ್ಲ ಜೊತೆಗೆ ಇವರು ಆಧ್ಯಾತ್ಮದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಇವರು ಯಾರನ್ನು ಹಚ್ಚಿಕೊಳ್ಳುವುದು ಇಲ್ಲ ಯಾರನ್ನು ದೂರ ಮಾಡುವುದು ಇಲ್ಲ ಆದರೆ ಈ ನಕ್ಷತ್ರದಲ್ಲಿ ಜನಿಸಿದವರು ತೀಕ್ಷ್ಣಮತಿಗಳಾಗಿದ್ದು ಕೋಪಿಷ್ಟಿಗಳು ಆಗಿರುತ್ತಾರೆ.

ಅಧಿಪತಿ- ಗುರು.
ಅಧಿದೇವತೆ- ಅಜೈಕಪಾದ.
ರಾಶಿ- ಕುಂಭ, ಮೀನಾ.
ಜನ್ಮನಾಮ-ಸೆ, ಸೋ, ದ, ದಿ.
ಯೋನಿ- ಸಿಂಹ.
ಸೂಕ್ತ ವೃತ್ತಿ-ಹಣಕಾಸು ಸಂಬಂಧಿಸಿದ ಉದ್ದಿಮೆ, ಅರ್ಥಶಾಸ್ತ್ರ, ರಾಜಕೀಯ, ಗಣಕೀಕರಣ, ವೈದ್ಯಕೀಯ ಕೆಲಸಗಳು, ವಿಮಾನಯಾನ,ಪುಸ್ತಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಪಟ್ಟ ಕ್ಷೇತ್ರಗಳು,

ಈ ನಕ್ಷತ್ರದವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಜೊತೆಗೆ ಮಧುಮೇಹ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಇವರಿಗೆ ಕಾಡುತ್ತಿರುತ್ತದೆ ಆದ್ದರಿಂದ ಗುರು ಮತ್ತು ರುದ್ರದೇವರ ಆರಾಧನೆಯನ್ನು ಮಾಡುತ್ತಿರುವುದರಿಂದ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Leave A Reply

Your email address will not be published.