ಸಕ್ಕರೆ ಕಾಯಿಲೆ ಇರುವವರು ಈ ಬೀಜಗಳನ್ನ ಸೇವಿಸಿ ನೋಡಿ ಯಾಕಂದ್ರೆ!

0 12,655

ತರಕಾರಿಗಳು ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲಾ ತರಕಾರಿಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಕುಂಬಳಕಾಯಿಯನ್ನು ಕೂಡ ನಾವು ಹಲವಾರು ವಿಧದಿಂದ ಬಳಕೆ ಮಾಡುತ್ತೇವೆ.

ಇದು ಕೂಡ ನಮ್ಮ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಕುಂಬಳಕಾಯಿಯಲ್ಲಿ ಮೆಗ್ನಿಶಿಯಂ, ಕಬ್ಬಿನಾಂಶ ಮತ್ತು ನಾರಿನಾಂಶ ಅಧಿಕವಾಗಿದೆ. ಹೀಗಾಗಿ ಕುಂಬಳಕಾಯಿಯನ್ನು ಹಲವಾರು ರೀತಿಯಲ್ಲಿ ಬಳಕೆ ಮಾಡಬಹುದು.

ಕುಂಬಳಕಾಯಿಯ ಬೀಜವನ್ನು ಕೂಡ ನಾವಿಂದು ಬಳಕೆ ಮಾಡುತ್ತೇವೆ. ಇದು ಕೂಡ ಆರೋಗ್ಯಕ್ಕೆ ಒಳ್ಳೆಯದು. ಕುಂಬಳಕಾಯಿ ಬೀಜವು ಯಾವೆಲ್ಲಾ ಲಾಭಗಳನ್ನು ನೀಡುವುದು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

​ಹೃದಯಕ್ಕೆ ಒಳ್ಳೆಯದು

ಕುಂಬಳಕಾಯಿ ಬೀಜದಲ್ಲಿ ಆರೋಗ್ಯಕಾರಿ ಕೊಬ್ಬು, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಇದು ಅಪಧಮನಿ ಆರೋಗ್ಯಕ್ಕೆ ಒಳ್ಳೇಯದು.ಇದರಲ್ಲಿ ಏಕಪರ್ಯಾಪ್ತ ಕೊಬ್ಬಿನಾಮ್ಲಗಳು ಇದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ನ್ನು ವೃದ್ಧಿಸುವುದು. ಇದರಲ್ಲಿ ಇರುವಂತಹ ಮೆಗ್ನಿಶಿಯಂ ಅಂಶವು ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ಸಹಕಾರಿ.

​ಉತ್ತಮ ನಿದ್ರೆಗೆ ಸಹಕಾರಿ

ಕುಂಬಳಕಾಯಿ ಬೀಜಗಳಲ್ಲಿ ಉತ್ತಮ ಪ್ರಮಾಣದ ಸೆರೊಟೊನಿನ್ ಅಂಶವಿದ್ದು, ಇದು ಒಂದು ರೀತಿಯ ನ್ಯೂರೋಕೆಮಿಕಲ್ ಆಗಿದ್ದು, ನೈಸರ್ಗಿಕವಾಗಿ ನಿದ್ರಾಜನಕ ಔಷಧಿಯಾಗಿ ಕೆಲಸ ಮಾಡುವುದು.ಇದರಲ್ಲಿ ಇರುವಂತಹ ಅಮಿನೋ ಆಮ್ಲ ಟ್ರೈಪ್ಟೊಫಾನ್ ಅಂಶವು ಸೆರೊಟೊನಿನ್ ಆಗಿ ಪರಿವರ್ತನೆ ಆಗಿ, ಉತ್ತಮ ನಿದ್ರೆಗೆ ಸಹಕರಿಸುವುದು. ಮಲಗುವ ಮೊದಲು ಸ್ವಲ್ಪ ಕುಂಬಳಕಾಯಿ ಸೇವನೆ ಮಾಡಿದರೆ ಅದು ತುಂಬಾ ಸಹಕಾರಿ ಆಗುವುದು.

ಉರಿಯೂತ ಶಮನಕಾರಿ

ಕುಂಬಳಕಾಯಿ ಬೀಜದಲ್ಲಿ ಉರಿಯೂತ ಶಮನಕಾರಿ ಗುಣಗಳಿದ್ದು, ಇದು ಸಂಧಿವಾತದ ನೋವು ಕಡಿಮೆ ಮಾಡುವುದು. ಗಂಟು ನೋವು ಕಡಿಮೆ ಮಾಡಲು ಇದು ಒಳ್ಳೆಯ ಮನೆಮದ್ದು.

​ಪ್ರತಿರೋಧಕ ಶಕ್ತಿ ವೃದ್ಧಿ

ಈ ಬೀಜದಲ್ಲಿ ಅಧಿಕ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ಫೈಥೋಕೆಮಿಕಲ್ ಇದ್ದು, ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸುವುದು.

​ಪ್ರಾಸ್ಟೇಟ್ ಆರೋಗ್ಯ

ಪುರುಷರ ಫಲವತ್ತೆ ಮತ್ತು ಪ್ರಾಸ್ಟೇಟ್ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸತು ತುಂಬಾ ಲಾಭಕಾರಿ. ಕುಂಬಳಕಾಯಿ ಬೀಜದಲ್ಲಿ ಇರುವಂತಹ ಡಿಎಚ್ ಇಎ ಅಂಶವು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು.

​ಮಧುಮೇಹಿಗಳಿಗೆ ಒಳ್ಳೆಯದು

ಕುಂಬಳಕಾಯಿ ಬೀಜವು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ನಿಯಂತ್ರಣದಲ್ಲಿ ಇಡಲು ಸಹಕಾರಿ.ಇದರಲ್ಲಿ ಜೀರ್ಣಿಸಬಲ್ಲ ಪ್ರೋಟೀನ್ ಇದ್ದು, ಇದರಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುವುದು.

​ತೂಕ ಇಳಿಸಲು ಸಹಕಾರಿ

ಬೊಜ್ಜು ದೇಹವನ್ನು ಕರಗಿಸಲು ಬಯಸುವವರು ಕುಂಬಳಕಾಯಿ ಬೀಜ ಬಳಕೆ ಮಾಡಿದರೆ ಉತ್ತಮ.ಈ ಬೀಜದಲ್ಲಿ ಅತ್ಯಧಿಕ ಪ್ರಮಾಣದ ಪೋಷಕಾಂಶಗಳಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುವುದು. ಇದರಲ್ಲಿನ ನಾರಿನಾಂಶವು ಬಯಕೆ ಕಡಿಮೆ ಮಾಡುವುದು ಹಾಗೂ ಅನಾರೋಗ್ಯಕಾರಿ ತಿನ್ನುವುದನ್ನು ತಪ್ಪಿಸುವುದು.

​ಕೂದಲಿನ ಬೆಳವಣಿಗೆಗೆ

ಕುಂಬಳಕಾಯಿ ಬೀಜದಲ್ಲಿ ಇರುವಂತಹ ಕುಕುರ್ಬಿಟಾಸಿನ್ ಎನ್ನುವ ಅಮಿನೋ ಆಮ್ಲವು ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ.ಇದು ವಿಟಮಿನ್ ಸಿಯಿಂದಲೂ ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆಗೆ ಸಹಕಾರಿ. ಕುಂಬಳಕಾಯಿ ಬೀಜದ ಎಣ್ಣೆಯನ್ನು ತಲೆಗೆ ಹಾಕಬಹುದು ಅಥವಾ ನಿತ್ಯವೂ ಕುಂಬಳಕಾಯಿ ಬೀಜ ಸೇವನೆ ಮಾಡಬಹುದು.

ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧ

ಕುಂಬಳಕಾಯಿ ಬೀಜದಲ್ಲಿ ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ ಇ ಮತ್ತು ಕ್ಯಾರೋಟಿನಾಯ್ಡ್ ಗಳು ಇವೆ.ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಫ್ರೀ ರ್ಯಡಿಕಲ್ ನಿಂದಾಗಿ ಅಂಗಾಂಶಗಳಿಗೆ ಆಗುವ ಹಾನಿ ತಪ್ಪಿಸುವುದು. ಇದರಿಂದಾಗಿ ಹಲವಾರು ರೀತಿಯ ಕಾಯಿಲೆಗಳನ್ನು ತಡೆಯುವುದು.

ಕುಂಬಳಕಾಯಿ ಬೀಜದ ಎಣ್ಣೆಯನ್ನು ಬಳಸಿಕೊಂಡರೆ ಅದರಿಂದ ದೇಹದಲ್ಲಿನ ಉರಿಯೂತ ಕಡಿಮೆ ಮಾಡಬಹುದು ಎಂದು ಇಲಿಗಳ ಮೇಲೆ ನಡೆಸಿರುವಂತಹ ಸಂಶೋಧನೆಯಿಂದ ಪತ್ತೆ ಮಾಡಲಾಗಿದೆ. ಇಲಿಗಳಿಗೆ ನೀಡಿರುವಂತಹ ಔಷಧಿಯಲ್ಲಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಕಂಡುಬಂದಿಲ್ಲ.

​ಕ್ಯಾನ್ಸರ್ ಅಪಾಯ ತಪ್ಪಿಸುವುದು

ಕುಂಬಳಕಾಯಿ ಬೀಜವನ್ನು ಸೇವನೆ ಮಾಡಿದರೆ ಆಗ ಕೆಲವೊಂದು ರೀತಿಯ ಕ್ಯಾನ್ಸರ್ ನ ಅಪಾಯ ಕಡಿಮೆ ಮಾಡಬಹುದು ಎಂದು ಕಂಡುಕೊಳ್ಳಲಾಗಿದೆ.ಹೊಟ್ಟೆ, ಶ್ವಾಸಕೋಶ, ಸ್ತನಗಳು, ಕರುಳು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಇದು ಕಡಿಮೆ ಮಾಡುವುದು. ಕುಂಬಳಕಾಯಿ ಬೀಜ ಸೇವನೆ ಮಾಡಿದರೆ ಆಗ ಮಹಿಳೆಯರಲ್ಲಿ ಋತುಬಂಧದ ಬಳಿಕ ಕಂಡುಬರುವ ಸ್ತನಗಳ ಕ್ಯಾನ್ಸರ್ ಅಪಾಯ ತಗ್ಗಿಸಬಹುದು.

​ವೀರ್ಯದ ಗುಣಮಟ್ಟ ವೃದ್ಧಿ–ಸತುವಿನ ಅಂಶವು ದೇಹದಲ್ಲಿ ಕಡಿಮೆ ಇದ್ದರೆ ಅದರಿಂದ ವೀರ್ಯದ ಗುಣಮಟ್ಟವು ಕಡಿಮೆ ಆಗುವುದು ಮತ್ತು ಪುರುಷರಲ್ಲಿ ಬಂಜೆತನವು ಕಾಡುವುದು. ಆದರೆ ಕುಂಬಳಕಾಯಿ ಬೀಜದಲ್ಲಿ ಅಧಿಕ ಮಟ್ಟದ ಸತುವಿನ ಅಂಶವಿದ್ದು, ಇದನ್ನು ಸೇವನೆ ಮಾಡಿದರೆ ಆಗ ವೀರ್ಯದ ಗುಣಮಟ್ಟವು ಹೆಚ್ಚಾಗುವುದು.

ಆಟೋಇಮ್ಯೂನ್ ಕಾಯಿಲೆ ಮತ್ತು ಕಿಮೋಥೆರಪಿಯಿಂದಾಗಿ ವೀರ್ಯದ ಮೇಲೆ ಆಗುವ ಹಾನಿಯನ್ನು ಕುಂಬಳಕಾಯಿ ಬೀಜವು ಕಡಿಮೆ ಮಾಡುವುದು ಎಂದು ಅಧ್ಯಯನಗಳು ಹೇಳಿವೆ.ಇದರಲ್ಲಿ ಇರುವಂತಹ ವಿವಿಧ ರೀತಿಯ ಆಂಟಿಆಕ್ಸಿಡೆಂಟ್ ಗಳು ಟೆಸ್ಟೋಸ್ಟೆರಾನ್ ಮಟ್ಟ ಸುಧಾರಣೆ ಮಾಡುವುದು. ಇದೆಲ್ಲವು ಒಟ್ಟಾದರೆ ಆಗ ಸಂತಾನೋತ್ಪತ್ತಿ ಕ್ರಿಯೆಯು ಉತ್ತಮವಾಗುವುದು.

Leave A Reply

Your email address will not be published.