ಲಗ್ನಪತ್ರದ ತುದಿಗೆ ಅರಿಶಿಣ ಮತ್ತು ಕುಂಕುಮ ಹಚ್ಚುವುದು ಏಕೆ?
ಲಗ್ನಪತ್ರದ ತುದಿಗೆ ಅರಿಶಿಣ ಮತ್ತು ಕುಂಕುಮ ಹಚ್ಚುವುದು ಏಕೆ?
ಬಡವರ ಮದುವೆಯಾಗಲಿ ಅಥವಾ ಶ್ರೀಮಂತರ ಮದುವೆಯಾಗಲಿ ಲಗ್ನ ಪತ್ರಿಕೆ ಎನ್ನುವುದು ಹತ್ತು ರೂಪಾಯಿಯಿಂದ ಹಿಡಿದು 10 ಲಕ್ಷದವರೆಗೂ ಬೆಲೆ ಬಾಳುವ ಲಗ್ನಪತ್ರಿಕೆ ಇದೆ ಅವರವರ ಶಕ್ತಿಗೆ ಅನುಗುಣವಾಗಿ ಲಗ್ನ ಪತ್ರಿಕೆಗಳನ್ನು ಮಾಡಿಸುತ್ತಾರೆ ಹೆಣ್ಣಿನ ಮನೆಯವರೇ ಆಗಲಿ ಅಥವಾ ಗಂಡಿನ ಮನೆಯವರೇ ಆಗಲಿ ಲಗ್ನ ಪತ್ರಿಕೆಯನ್ನು ನೀಡಿ ಮದುವೆಗೆ ಆಹ್ವಾನ ಮಾಡುತ್ತಾರೆ ಇದು ಪರಂಪರಾಗತವಾಗಿ ನಡೆದುಕೊಂಡು ಬಂದಿದೆ ಮದುವೆ ಎನ್ನುವುದು ಎರಡು ಹೃದಯಗಳನ್ನು ಬೆಸೆಯುವ ಬಾಂಧವ್ಯವಾದರೆ
ಲಗ್ನ ಪತ್ರಿಕೆ ಎನ್ನುವುದು ಒಂದು ಮದುವೆಯನ್ನು ನಡೆಸುವ ಸೇತುವೆ ಇದರಲ್ಲಿ ಗಂಡು ಹೆಣ್ಣು ಮನೆಯವರ ಶುಭ ಕೋರಿಕೆ ಇರುತ್ತದೆ ತಾತ, ಮುತ್ತಾತರ ಸ್ಮರಣೆ ಇರುತ್ತದೆ ಕುಟುಂಬಸ್ಥರೆಲ್ಲ ಮರೆಯದೆ ಬನ್ನಿ ಎನ್ನುವ ಸವಿನಯ ಪ್ರಾರ್ಥನೆ ಇರುತ್ತದೆ ಯಾವ ಲಗ್ನಪತ್ರಿಕೆ ಆಗಲಿ ಬಂದು ಬಾಂಧವರಿಗೆ ಕೊಡುವ ಮುಂಚೆ ಅದಕ್ಕೆ ಪೂಜೆಯನ್ನು ಮಾಡುತ್ತಾರೆ ಯಾವುದೇ ವಿಜ್ಞಗಳು ಬಾರದೆ ಇರಲಿ ಎಂದು ಮೊದಲು ಲಗ್ನಪತ್ರಿಕೆಗೆ ಪೂಜೆ ಮಾಡಿ ಬಂಧು ಬಾಂಧವರಿಗೆ ನೀಡುವುದು ಮಹಿಳೆಯ ಹಣೆಗೆ ಕುಂಕುಮ ಕೆನ್ನೆಗೆ ಹರಿಸಿನ ಹೇಗೆ ಸಿಂಗಾರವೋ
ಹಾಗೆ ಲಗ್ನಪತ್ರಿಕೆಗೆ ಹರಿಶಿಣ ಕುಂಕುಮ ಇಡುವುದು ಕೂಡ ಶ್ರೇಷ್ಠ ಈ ಆಚರಣೆಯ ಹಿಂದೆ ಒಂದು ರೋಚಕ ಕಥೆ ಇದೆ ಒಮ್ಮೆ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿ ಹಾಗೂ ಆಕೆ ಸಹೋದರಿ ನಡುವೆ ವಾದ ಪ್ರತಿವಾದಗಳು ಏರ್ಪಡುತ್ತದೆ ಅದು ಯಾವ ವಿಚಾರವಾಗಿ ಎಂದರೆ ಯಾರ ಸ್ಥಾನಮಾನ ಹೆಚ್ಚು ಇಬ್ಬರಲ್ಲಿ ಯಾರು ಎಲ್ಲೆಲ್ಲಿಗೆ ಬೇಕು ಎಂದು ಇಬ್ಬರ ಜಗಳದಿಂದ ಸಿಟ್ಟಾದ ಲಕ್ಷ್ಮೀದೇವಿ ಸಮುದ್ರದಲ್ಲಿ ಅಡಗಿ ಕೂರುತ್ತಾರೆ ಆಗ ಸಮುದ್ರದ ಬಳಿಗ ಬಂದ ಜೇಷ್ಠದೇವಿ ಲಕ್ಷ್ಮೀದೇವಿಯನ್ನು ಹೊರಗೆ ಬರಲು ಬೇಡಿಕೊಳ್ಳುತ್ತಾರೆ ಜೇಷ್ಠದೇವಿ ಎಷ್ಟೇ ಕೇಳಿಕೊಂಡರು ಲಕ್ಷ್ಮಿ ದೇವಿ ಮಾತ್ರ ನೀರಿನಿಂದ ಹೊರಗೆ ಬರುವುದಿಲ್ಲ
ಕೊನೆಗೆ ತನ್ನ ಸಹೋದರಿಯ ಮಾತಿಗೆ ಮಣಿದ ಲಕ್ಷ್ಮಿ ದೇವಿ ತಾನು ಯಾವ ಯಾವ ಪ್ರದೇಶದಲ್ಲಿ ಯಾವ ಯಾವ ವಸ್ತುಗಳಲ್ಲಿ ಇರುತ್ತೇನೆ ಎಂಬ ಬೇಡಿಕೆ ಇಡುತ್ತಾಳೆ ಅಂದು ಲಕ್ಷ್ಮಿ ದೇವಿ ಅರಿಶಿಣದಲ್ಲಿ ಲಕ್ಷ್ಮೀದೇವಿಯು ಕೂಡ ಒಬ್ಬಳು ಅಂದಿನಿಂದ ಲಗ್ನ ಪತ್ರಿಕೆಯಲ್ಲಿ ಅರಿಶಿಣವನ್ನು ಇಡುವುದು ಕೂಡ ಒಂದಾಗಿದೆ ಈ ಮೂಲಕ ತಾಯಿ ಲಕ್ಷ್ಮೀದೇವಿಗೆ ವಿವಾಹದ ಆಹ್ವಾನ ನೀಡಿದಂತೆ ಅರಿಶಿಣ ಕುಂಕುಮದ ಜೊತೆಗೆ ಲಗ್ನಪತ್ರಿಕೆಯ ಒಳಗೆ ಮಂತ್ರಾಕ್ಷತೆಯನ್ನು ಹಾಕುತ್ತಾರೆ
ಇದು ಸಹ ತಲಾತಲಾಂತರದಿಂದ ನಡೆದುಕೊಂಡು ಬಂದಿರುವುದು ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸಿದರೆ ಮಾತ್ರ ಆ ಕಾರ್ಯಕ್ಕೆ ಒಂದು ಅರ್ಥ ಸಿಗುವುದು ಮದುವೆಯಲ್ಲಿ ಇದನ್ನು ನೋಡಿರುತ್ತೇವೆ ಗಂಡು ಹೆಣ್ಣಿನ ಕತ್ತಿಗೆ ತಾಳಿಯನ್ನು ಕಟ್ಟುತ್ತಿದ್ದಂತೆ ಅಕ್ಷತೆಯಲ್ಲಿ ಇಬ್ಬರ ತಲೆಗೆ ಹಾಕಿ ಬಂದವರೆಲ್ಲ ಅವರನ್ನು ಹರಸುತ್ತಾರೆ