ಇವುಗಳ ಸೇವನೆ ದೊಡ್ಡ ದೊಡ್ಡ ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತೆ!
ಪ್ರತಿದಿನ ಡ್ರೈ ಫ್ರೂಟ್ಸ್ ಅಥವಾ ಒಣ ಫಲಗಳ ಸೇವನೆ ಮನುಷ್ಯನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಸ್ವಲ್ಪ ನೆನಸಿಟ್ಟ ಬಾದಾಮಿ, ವಾಲ್ ನಟ್ಸ್ ಗೋಡಂಬಿ, ಒಣ ಖರ್ಜುರ, ಒಣ ದ್ರಾಕ್ಷಿಗಳನ್ನು ತಿನ್ನುವುದರಿಂದ ಒಳ್ಳೆಯ ಆರೋಗ್ಯದ ಪ್ರಯೋಜನಗಳು ನಿಮಗೆ ಸಿಕ್ಕಿದಂತಾಗಿ ಇತರರಿಗಿಂತ ಆರೋಗ್ಯವಾಗಿರಲು ನೇರವಾಗುತ್ತದೆ. ಪ್ರಮುಖವಾಗಿ ಡ್ರೈ ಫ್ರೂಟ್ಸ್ ಗಳಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ಆರೋಗ್ಯಕರ ಕೊಬ್ಬಿನ ಅಂಶಗಳು ಪ್ರೊಟೀನ್ ಅಂಶ ನಾರಿನಂಶಗಳ ಜೊತೆಗೆ ಅಂಟಿ ಆಕ್ಸಿಡೆಂಟ್ ಗಳ ಪ್ರಮಾಣ ಕೂಡ ಹೆರಾಳವಾಗಿ ಕಂಡುಬರುವುದರಿಂದ ನಿಮ್ಮ ದೇಹದ ಉರಿಯುತವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ಶಕ್ತಿ ಇವುಗಳಿಗೆ ಇದೆ.
ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಕಂಡು ಬರುವ ವಿವಿಧ ಬಗೆಯ ಕ್ಯಾನ್ಸರ್ ಸಮಸ್ಸೆಗೆ ಈ ಡ್ರೈ ಫ್ರೂಟ್ಸ್ ರಾಮಬಾಣವಾಗಿ ಕೆಲಸ ಮಾಡುತ್ತವೆ.
1, ಬಾದಾಮಿ ಬೀಜಗಳು
ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಸೂಕ್ತವಾದ ಡ್ರೈ ಫ್ರೂಟ್ಸ್ ಎಂದರೆ ಅದು ಬಾದಾಮಿ ಬೀಜ.ಪ್ರತಿದಿನ 4-5 ನೆನಸಿಟ್ಟ ಬಾದಾಮಿ ಬೀಜಗಳನ್ನು ಸೇವನೆ ಮಾಡಬೇಕು ಎಂದು ತಜ್ಞರು ಕೂಡ ಸಲಹೆಯನ್ನು ನೀಡಿದ್ದಾರೆ. ಪ್ರಮುಖವಾಗಿ ಬಾದಾಮಿ ಬಿಜಾಗಳಲ್ಲಿ ಕಂಡು ಬರುವ ಅಂಟಿ ಇನ್ಫ್ಲುಮೀಟರಿ ಮತ್ತು ಅಂಟಿ ಆಕ್ಸಿಡೆಂಟ್ ಅಂಶಗಳು ದೇಹದಲ್ಲಿ ಕ್ಯಾನ್ಸರ್ ಸಂಬಂಧಿತ ಜೀವಕೋಶಗಳ ಬೆಳವಣಿಗೆ ಆಗದಂತೆ ನೋಡಿಕೊಳ್ಳುತ್ತದೆ.
2, ವಾಲ್ನಟ್
ಆರೋಗ್ಯಕಾರಿ ಕಾರ್ಬೋಹೈಡ್ರೇಟ್, ಒಮೆಗಾ -3 ಫ್ಯಾಟಿ ಆಸಿಡ್ ಅಂಶ, ದೇಹಕ್ಕೆ ಬೇಕಾಗುವ ಒಳ್ಳೆಯ ಕೊಬ್ಬಿನಾಂಶ ಮತ್ತು ಅಗಾಧ ಪ್ರಮಾಣದಲ್ಲಿ ಪ್ರೋಟೀನ್ ಅಂಶಗಳನ್ನು ಒಳಗೊಂಡಿರುವ ವಾಲ್ನಟ್ ಬೀಜಗಳನ್ನು ಪ್ರತಿದಿನ ನೆನೆ ಸಿಟ್ಟು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.
ಇನ್ನು ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ರಿಸರ್ಚ್ ಸಂಸ್ಥೆ ಹೇಳುವ ಪ್ರಕಾರ, ಪ್ರತಿದಿನ ವಾಲ್ನಟ್ ಅನ್ನು ನೆನೆ ಸಿಟ್ಟು ಸೇವನೆ ಮಾಡುವುದರಿಂದ, ಮಹಿಳೆಯರಲ್ಲಿ ಕಾಡುವ ಸ್ತನ ಕ್ಯಾನ್ಸರ್ ಹಾಗೂ ಪುರುಷರಲ್ಲಿ ಕಾಡುವ ಪ್ಯಾಂಕ್ರಿ ಯಾಟಿಕ್ ಕ್ಯಾನ್ಸರ್ ಗಳ ನಿವಾರಣೆಗೆ ನಿವಾರಣೆಯ ಸಾಮ ರ್ಥ್ಯವನ್ನು ಪಡೆದಿವೆ ಎಂದು ತಮ್ಮ ವರದಿಯಲ್ಲಿ ತಿಳಿಸಿದೆ.
3, ನೆನಸಿಟ್ಟ ಖರ್ಜುರ
ಖರ್ಜೂರ ಗಳಲ್ಲಿ ಅಪಾರ ಪ್ರಮಾಣದ ಕ್ಯಾಲೋರಿಗಳು ಸಿಗುತ್ತವೆ, ಹೀಗಾಗಿ ಪ್ರತಿದಿನ ನೆನೆಸಿಟ್ಟ ಒಂದೆರಡು ಖರ್ಜೂ ರಗಳನ್ನು ಸೇವನೆ ಮಾಡುವುದರಿಂದ, ದೇಹಕ್ಕೆ ಶಕ್ತಿ ಸಿಕ್ಕಂ ತಾಗಿ ಸುಸ್ತು-ಆಯಾಸ ದೂರವಾಗುತ್ತದೆ ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ.
ಆದರೆ ಇದರ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ಸೀಮಿತ ವಾಗಿಲ್ಲ, ಈ ಹಣ್ಣಿನಲ್ಲಿ ಕಂಡು ಬರುವ ನಾರಿನಂಶದ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಕರುಳಿನ ಚಲನೆ ಉತ್ತಮ ಗೊಳಿಸಿ, ಹಲವು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.ಪ್ರಮುಖವಾಗಿ ದಿನಾ ಒಂದೆರಡು ನೆನೆಟ್ಟ ಖರ್ಜೂರ ಗಳನ್ನು ಸೇವನೆ ಮಾಡುವುದರಿಂದ, ದೇಹದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಬೆಳವಣಿಗೆಯನ್ನು ಕಡಿಮೆ ಮಾಡ ಬಹುದು.
4, ಒಣ ಅಂಜುರಾ ಹಣ್ಣು
ಡ್ರೈಫ್ರೂಟ್ಸ್ ಗಳಲ್ಲಿ ಹಲವು ಬಗೆಯ ಫೈಟೋ ಕೆಮಿಕಲ್ ಅಂಶಗಳು ಕಂಡು ಬರುವುದರಿಂದ, ನಮ್ಮ ಜೀವಕೋಶ ಗಳನ್ನು ಕ್ಯಾನ್ಸರ್ ಪ್ರಭಾವದಿಂದ ಕಾಪಾಡುವ ಕಾರ್ಯವನ್ನು ಮಾಡುತ್ತದೆ.
ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ, ಒಣ ಅಂಜೂರದ ಹಣ್ಣು. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಕರಗುವ ನಾರಿನಾಂಶ, ವಿಟಮಿನ್, ಖನಿಜಾಂಶಗಳು ಮತ್ತು ಪಾಲಿಫಿನಾಲ್ ಅಂಶ ಗಳನ್ನು ಒಳಗೊಂಡಿ ರುವ ಅಂಜೂರ ಹಣ್ಣುಗಳಲ್ಲಿ ಫೈಟೋ ಕೆಮಿಕಲ್ ಅಂಶಗಳು ಕೂಡ ಅಗಾಧ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳವಣಿಗೆಯಾದಂತೆ ತಡೆಯುತ್ತದೆ.
5, ಒಣ ಪ್ಲಮ್ ಹಣ್ಣುಗಳು
ಹುಳಿಸಿಹಿ ಮಿಶ್ರಿತ ಈ ಹಣ್ಣುಗಳಲ್ಲಿ ಬಲವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಕಂಡು ಬರುವುದರಿಂದ, ದೇಹದಲ್ಲಿ ಕ್ಯಾನ್ಸರ್ ಜೀವಕೋಶ ಗಳಿಗೆ ಕಾರಣವಾಗಿ ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವಿಶೇಷವಾಗಿ ಈ ಒಣ ಹಣ್ಣಿನಲ್ಲಿ ಬೀಟಾ ಕಾರ್ಬೋಲಿನ್ ಮತ್ತು ಫಿನೋಲಿಕ್ ಅಂಶಗಳು ಕಂಡು ಬರುವುದ ರಿಂದ ಕರುಳಿನ ಕ್ಯಾನ್ಸರ್ ನಿವಾರಣೆಯಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ.