ಎಕ್ಕದ ಗಿಡದ ವಾಸ್ತು/ನಿಮ್ಮ ಮನೆಯ ಈ ಭಾಗದಲ್ಲಿ ಎಕ್ಕದ ಗಿಡ ಬೆಳೆಸಿದರೆ ಮನೆಯಲ್ಲಿ ಸಾದ ಸಿರಿತನ ತುಂಬಿರತ್ತೆ!

0 13,854

ಮನೆಯಲ್ಲಿ ಬಿಳಿ ಎಕ್ಕದ ಗಿಡ ಹಾಕುವುದರಿಂದ ಯಾವೆಲ್ಲಾ ಉಪಯೋಗಗಳು ಆಗುತ್ತದೆ ಎಂದು ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಬಿಳಿ ಎಕ್ಕ ಗಿಡ ಪ್ರತಿಯೊಬ್ಬರಿಗೂ ಪರಿಚಯವಿರುತ್ತದೆ. ಮನೆಯ ವಾಸ್ತು ದೋಷವನ್ನು ನಿವಾರಿಸುವ ಜೊತೆಗೆ ಹಲವು ದೈಹಿಕ, ಆರೋಗ್ಯ ಸಮಸ್ಯೆಗೂ ಪರಿಹಾರವನ್ನು ಒದಗಿಸುತ್ತದೆ ಈ ಬಿಳಿ ಎಕ್ಕ. ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಆರೋಗ್ಯ ಮತ್ತು ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ .

ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು. ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ ಇರುತ್ತಾರೆ. ಅಂಥವರಿಗೆ ಈ ಬಿಳಿ ಎಕ್ಕದ ಗಿಡ ಅದೃಷ್ಟ ತರಲಿದೆ. ಬಿಳಿ ಎಕ್ಕದ ಗಿಡ ನಮಗೆ ಸುಲಭವಾಗಿ ಸಿಗುತ್ತದೆ. ಎಲ್ಲಾ ಪ್ರದೇಶಗಳಲ್ಲಿಯೂ ಲಭಿಸುವಂತ ಗಿಡ. ಬಿಳಿ ಎಕ್ಕದ ಗಿಡ 5 ರಿಂದ 6 ಅಡಿ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಬಿಳಿ, ನೀಲಿ ಮಿಶ್ರಿತವಾದ ಬಣ್ಣದಲ್ಲಿ ಹೂವನ್ನು ಅರಳಿಸುತ್ತದೆ.

ಮನೆಯ ಅಂಗಳದಲ್ಲಿ ಹಚ್ಚ ಹಸಿರಿನ ಗಿಡಗಳೂ ಕಂಗೊಳಿಸಿದಾಗ ನಿಮ್ಮ ಅಂದದ ಗೃಹಕ್ಕೊಂದು ಶೋಭೆ ಬರುತ್ತದೆ. ಕೆಲವೊಮ್ಮೆ ಮನೆಯಲ್ಲಿ ಇರಿಸುವಂತ ಗಿಡಗಳಿಂದಲೂ ಸಂಪತ್ತು, ಸಮೃದ್ಧಿ ಹೆಚ್ಚಾಗಬಹುದು. ಈ ಆಧುನಿಕ ಯುಗದಲ್ಲಿ ಮನೆಯ ಒಳಾಂಗಣವೂ ಹಸಿರಿನಿಂದ ಕೂಡಿರಬೇಕು ಎಂದು ಪಾಟ್‌ಗಳನ್ನು ಇಡುವ ಪರಿಪಾಠ ಬೆಳೆದಿದೆ. ಹಾಗಂತ ಎಲ್ಲಾ ಗಿಡಗಳನ್ನು ಮನೆಯಂಗಳದಲ್ಲಿ, ಮನೆಯ ಒಳಾಂಗಣದಲ್ಲಿ ನೆಡುವುದು ಸೂಕ್ತವಲ್ಲ. ಹಾಗಾದರೆ ಯಾವ ಗಿಡ ನಿಮಗೆ ಅದೃಷ್ಟ ತರುವುದು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ಬಿಳಿ ಎಕ್ಕದ ಗಿಡವು ಬಹಳ ಪವಿತ್ರವಾಗಿದ್ದು, ಬಿಳಿ ಎಕ್ಕದ ಹೂವು ಶಿವನಿಗೆ ಅತ್ಯಂತ ಪ್ರಿಯ. ಈ ಗಿಡವು ಮನೆಗೆ ಸಂಪತ್ತು ಹಾಗೂ ಅದೃಷ್ಟವನ್ನು ತರುವುದು. ಈ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಈ ಗಿಡವು ನಿಮ್ಮ ಶತ್ರುಗಳ ಮೇಲೆ ಜಯವನ್ನು ತರುವುದು. ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯನ್ನು ಹೆಚ್ಚಿಸುವುದು.

ಬಿಳಿ ಎಕ್ಕದ ಗಿಡ -ಆರೋಗ್ಯ ಪ್ರಯೋಜನಗಳು–ಬಿಳಿ ಎಕ್ಕದ ಗಿಡದ ಪ್ರತಿಯೊಂದು ಭಾಗವೂ ಔಷಧ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡದ ಹಾಲು ವಿಷಪೂರಿತವಾದದ್ದು, ಅದನ್ನು ಹೊರತು ಪಡಿಸಿದರೆ ಎಕ್ಕದ ಗಿಡ ಸರಿ ಸುಮಾರು 64 ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ.

ಎಕ್ಕದ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ದೇಹದಲ್ಲಿ ಇರುವ ವಿಷದ ಅಂಶ ನಿರ್ಮೂಲನೆಗೊಳ್ಳುವುದು.

ಕಾಲುಗಳಲ್ಲಿ ಮುಳ್ಳು ಚುಚ್ಚಿದ್ದರೆ ಮುಳ್ಳು ಒಳಭಾಗದಲ್ಲಿದ್ದು ವಿಪರೀತ ನೋವನ್ನು ಕೊಡುತ್ತಿದ್ದರೆ, ಇದರ ಹಾಲನ್ನು ಆ ಜಾಗಕ್ಕೆ ಹಾಕಿದರೆ ನೆಟ್ಟಿರುವಂತ ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆಯಾಗುತ್ತದೆ.

ಅತಿಯಾಗಿ ಬೆನ್ನು ನೋವು ಅಥವಾ ಮಂಡಿ ನೋವು ಸಮಸ್ಯೆ ಕಾಡುತ್ತಿದ್ದರೆ, ಎಕ್ಕ ಗಿಡದ ಎಲೆಗಳನ್ನು ಬೆಂಕಿ ಕೆಂಡ ಸೋಕಿಸಿ ನೋವು ಇರುವ ಜಾಗಕ್ಕೆ ಶಾಖ ಕೊಟ್ಟರೆ ಕೆಲವೇ ದಿನಗಳಲ್ಲಿ ನೋವು ಇಲ್ಲದಂತಾಗುವುದು.

Leave A Reply

Your email address will not be published.