ನಿಮ್ಮ ಕಣ್ಣಿನ ಬಣ್ಣ ನಿಮ್ಮ ಬಗ್ಗೆ ಏನು ಹೇಳುತ್ತದೆ ಗೊತ್ತಾ..?

0 8

ನಿಮ್ಮ ಕಣ್ಣಿನ ಬಣ್ಣ ನಿಮ್ಮ ಬಗ್ಗೆ ಏನು ಹೇಳುತ್ತದೆ ಗೊತ್ತಾ..?

ಮಾತುಗಳು ಹೇಳದ ಅದೆಷ್ಟೋ ವಿಷಯಗಳು ಕಣ್ಣುಗಳನ್ನು ಹೇಳುತ್ತದೆ ತನ್ನ ಪ್ರಿಯಕರನ ಪ್ರೀತಿಯನ್ನು ಪಡೆಯಲು ಇರುವ ತವಕವನ್ನು ಆ ಕಣ್ಣುಗಳು ಬಿಂಬಿಸುವಂತೆ ಇತರ ಭಾವಗಳನ್ನು ಆ ಕಣ್ಣುಗಳು ಬಿಂಬಿಸಬಲ್ಲವು ಕೋಪ, ಹತಾಷೆ ದುಃಖ, ದ್ವೇಷ ಮೊದಲಾದ ಭಾವನೆಗಳನ್ನು ಯಾವುದೇ ಒಂದು ಪದಗಳ ಬಳಕೆ ಇಲ್ಲದೆ ಕಣ್ಣುಗಳ ಮೂಲಕ ವ್ಯಕ್ತಪಡಿಸಬಹುದು ಆದರೆ ಕಣ್ಣುಗಳ ಬಣ್ಣಗಳು ಸಹ ವ್ಯಕ್ತಿಯ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ನಮ್ಮ ಕಣ್ಣುಗಳಿಗೆ ಬಣ್ಣ ನೀಡುವ ಪಾಪೆಯ ವಿನ್ಯಾಸ ಕಾರಣವಾಗಿದೆ ಇದರಲ್ಲಿರುವ ವರ್ಣತಂತುಗಳು ಕಣ್ಣಿಗೆ ಬಣ್ಣಗಳನ್ನು ನೀಡುತ್ತದೆ ಅಂತೆಯೇ ಕಪ್ಪು, ಕಂದು, ಹಸಿರು,ಬೆಕ್ಕಿನ ಕಣ್ಣು ಮೊದಲಾದ ಬಣ್ಣಗಳು ಕಣ್ಣಿನಲ್ಲಿ ಇದೆ ಇವು ಸೌಂದರ್ಯವನ್ನು ವರ್ದಿಸುತ್ತದೆ ಸಂಗಾತಿಯನ್ನು ಆಕರ್ಷಿಸಲು ಕಣ್ಣುಗಳು ಪ್ರಮುಖ ಪಾತ್ರ ವಹಿಸುತ್ತದೆ ಕಣ್ಣಿನ ಬಣ್ಣ ಹಾಗೂ ವಿನ್ಯಾಸ ಪ್ರತಿ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ ಪ್ರಪಂಚದಲ್ಲಿರುವ ಮನುಷ್ಯನ ಕಣ್ಣುಗಳು

ವಿವಿಧ ಬಣ್ಣಗಳನ್ನು ಹೊಂದಿರುತ್ತದೆ ಶಾಸ್ತ್ರಗಳ ಪ್ರಕಾರ ಕಣ್ಣುಗಳ ಬಣ್ಣವು ಮಾನವನ ಸ್ವಭಾವ ದೊಂದಿಗೆ ನಿಖರವಾದ ವಿನ್ಯಾಸವನ್ನು ಹೊಂದಿದೆ ಕಣ್ಣುಗಳ ಬಣ್ಣಗಳಿಂದ ಯಾವುದೇ ವ್ಯಕ್ತಿಯ ಸ್ವಭಾವದ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು ಯಾವ ಕಣ್ಣಿನ ಬಣ್ಣ ಅವರ ಬಗ್ಗೆ ಏನು ಹೇಳುತ್ತದೆ ಎಂದು ಈಗ ತಿಳಿಯೋಣ:
ಕಂದು ಬಣ್ಣದ ಕಣ್ಣುಗಳು ವಿಶ್ವದಲ್ಲಿ ಅತಿ ಹೆಚ್ಚಿನ ಕಣ್ಣಿನ ಬಣ್ಣ ಎಂದರೆ ಕಂದು ಬಣ್ಣ ಅಥವಾ ಘಾಢ ಕಾಫಿ ಬಣ್ಣವಾಗಿದೆ ಕಂದು ಬಣ್ಣದ ಕಣ್ಣನ್ನು ಹೊಂದಿರುವ ಜನರ ಮೆದುಳು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ ಈ ಜನರಿಗೆ ಸಂಬಂಧಗಳನ್ನು ಹೇಗೆ ಗೌರವಿಸಬೇಕು ಎಂದು ತಿಳಿದಿರುತ್ತದೆ ಈ ಜನರು ಯಾರನ್ನಾದರೂ ತಮ್ಮತ್ತ ಸುಲಭವಾಗಿ ಆಕರ್ಷಿಸುತ್ತಾರೆ

ಈ ವ್ಯಕ್ತಿಗಳು ಸಾಮಾನ್ಯವಾಗಿ ಭಾವನಾತ್ಮಕ ರಾಗಿದ್ದು ಉತ್ತಮ ಸ್ವಭಾವವನ್ನೂ ಹೊಂದಿರುತ್ತಾರೆ ಆಕರ್ಷಕವಾದ ಮೈಕಟ್ಟು ಉತ್ತಮ ಸ್ನೇಹಿತರನ್ನು ಹೊಂದಿರುವ ಈ ಜನರು ಎಲ್ಲರೊಂದಿಗೆ ಬೆರೆತು ಉತ್ತಮ ಸಂಬಂಧವನ್ನು ಹೊಂದಿರಲು ಬಯಸುತ್ತಾರೆ ಇವರ ವರ್ತನೆಯು ಕ್ರಿಯಾತ್ಮಕವಾಗಿಯೂ ಪ್ರಾಯೋಗಿಕವಾಗಿಯೂ ಇರುತ್ತದೆ ಇವರು ತಮಗಿಂತಲೂ ತಮ್ಮ ಪ್ರೀತಿಪಾತ್ರರಿಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ ಅಗತ್ಯ ಇದ್ದರೆ ತಮ್ಮವರಿಗಾಗಿ ಸಕಲ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ.

ಬೂದು ಬಣ್ಣದ ಕಣ್ಣುಗಳು ಈ ಬಣ್ಣದ ಕಣ್ಣುಗಳನ್ನೂ ಹೊಂದಿರುವ ಜನರು ಯಾವುದೇ ಕೆಲಸಗಳನ್ನು ಶರತ್ತಾಗಿ ಸ್ವೀಕರಿಸಿ ಪೂರ್ಣಗೊಳಿಸುತ್ತಾರೆ ಈ ಜನರ ಹೃದಯ ಶುದ್ಧವಾಗಿರುತ್ತದೆ ಸುಳ್ಳು ಹೇಳುವುದು ಇವರಿಗೆ ಇಷ್ಟವಾಗುವುದಿಲ್ಲ ಬೂದು ಬಣ್ಣದ ಕಣ್ಣುಗಳು ತಟ್ಟನೆ ನೋಡಿದಾಗ ಕಣ್ಣಿನಲ್ಲಿ ಪೊರೆಬಂದಂತೆ ಕಾಣುವ ಈ ವ್ಯಕ್ತಿಗಳು ವಿರಳವಾಗಿದ್ದು ಅತ್ಯಂತ ಶಾಂತ ಮನೋಭಾವವನ್ನು ಹೊಂದಿರುತ್ತಾರೆ ಎಂತಹ ಪರಿಸ್ಥಿತಿಯಲ್ಲೂ ಶಾಂತತೆಯನ್ನು ಕಾಪಾಡಿಕೊಳ್ಳುವುದು ಇವರ ವ್ಯಕ್ತಿತ್ವವಾಗಿದೆ ಇವರು ಅತ್ಯಂತ ಧೈರ್ಯಶಾಲಿಗಳು ಮಹತ್ವಕಾಂಕ್ಷಿಗಳು ಆಗಿರುತ್ತಾರೆ ಜೀವನದಲ್ಲಿ ಮುನ್ನುಗ್ಗಲು ಯಾವುದೇ ರೀತಿಯ ಗಂಡಾಂತರಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ ಇದೇ ಕಾರಣಕ್ಕಾಗಿ ವಿಶ್ವದ ಅನೇಕ ನಾಯಕರು ಬೂದು ಬಣ್ಣದ ಕಣ್ಣುಗಳನ್ನು ಹೊಂದಿದ್ದಾರೆ.

ನೀಲಿ ಬಣ್ಣದ ಕಣ್ಣುಗಳು ಈ ಬಣ್ಣದ ಕಣ್ಣನ್ನು ಹೊಂದಿರುವವರು ಎಲ್ಲರನ್ನೂ ಬೇಗ ಆಕರ್ಷಿಸುತ್ತಾರೆ ಬಹಳ ಬೇಗ ಹೆಸರು ಗಳಿಸುತ್ತಾರೆ ನಿಮ್ಮ ಕಣ್ಣುಗಳು ಯಾವ ಬಣ್ಣದಲ್ಲಿ ಇರಬೇಕು ಎಂಬುದನ್ನು ನೀವು ಬಯಸುತ್ತೀರಾ ಎಂದರೆ ಈ ಪ್ರಶ್ನೆಗೆ ಅತ್ಯಂತ ಉತ್ತರಗಳು ನೀಲಿ ಬಣ್ಣದ ಕಣ್ಣಿಗೆ ಬಿದ್ದಿದೆ ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವ ವ್ಯಕ್ತಿಗಳು ಸುಲಭವಾಗಿ ಎಲ್ಲರ ಗಮನವನ್ನು ತಮ್ಮ ಕಡೆಗೆ ಸೆಳೆದುಕೊಳ್ಳುತ್ತಾರೆ ಅಂತೆಯೇ ತಮ್ಮ ಸುತ್ತಮುತ್ತಲಿನ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುವ ಮತ್ತು ಅಗತ್ಯ ಬಿದ್ದರೆ ಸಹಾಯ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ ಇವರು ಉತ್ತಮ ಹೆಸರು ಮತ್ತು ವಿಶ್ವಾಸವನ್ನು ಗಳಿಸುತ್ತಾರೆ.

ಕಪ್ಪು ಬಣ್ಣದ ಕಣ್ಣುಗಳು ಕಪ್ಪು ಬಣ್ಣದ ಕಣ್ಣುಗಳು ಸಾಮಾನ್ಯವಾಗಿ ದೂರದಿಂದ ಕಪ್ಪು ಬಣ್ಣದಂತೆ ಕಂಡರು ಹತ್ತಿರದಿಂದ ಕಂಡಾಗ ಗಾಢ ಕಂದು ಬಣ್ಣವೇ ಹೆಚ್ಚಿನವರಿಗೆ ಇರುತ್ತದೆ ಅಪರೂಪಕ್ಕೆ ಅಪ್ಪಟ ಕಪ್ಪು ಬಣ್ಣದ ಕಣ್ಣುಗಳನ್ನು ಹೊಂದಿರುವ ವ್ಯಕ್ತಿಗಳು ಕಂಡು ಬರುತ್ತಾರೆ ಕಪ್ಪು ಬಣ್ಣದ ಕಣ್ಣುಗಳನ್ನು ಹೊಂದಿರುವ ವ್ಯಕ್ತಿಗಳು ತಮ್ಮ ರಹಸ್ಯವನ್ನು ಮರೆಮಾಚುತ್ತಾರೆ ಅವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಅವರು ಪ್ರದರ್ಶನವನ್ನು ಇಷ್ಟಪಡುವುದಿಲ್ಲ ಮೋಸದಿಂದ ದೂರ ಇರುತ್ತಾರೆ ಅವರ ದಿವ್ಯದೃಷ್ಟಿ ಅತ್ಯುತ್ತಮವಾಗಿರುತ್ತದೆ ತಮಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿರುತ್ತಾರೆ ಇದೇ ಕಾರಣದಿಂದ ಇಂತಹ ವ್ಯಕ್ತಿಗಳ ಸ್ನೇಹ ಪಡೆಯುವುದು ತುಂಬಾ ಕಷ್ಟವಾಗಿರುತ್ತದೆ ಆದರೆ ಒಮ್ಮೆ ಇವರ ಸ್ನೇಹ ಪಡೆದರೆ ತಮ್ಮ ಸ್ನೇಹಿತರಿಗಾಗಿ ಪ್ರಾಣವನ್ನು ಪಣ ಇಡಲು ಸಿದ್ದರಾಗಿರುತ್ತಾರೆ ಇವರಲ್ಲಿ ತಾಳ್ಮೆ ಕಡಿಮೆ ಇದ್ದರೂ ಸದಾ ಸಕಾರಾತ್ಮಕವಾಗಿ ಯೋಚಿಸುತ್ತಾರೆ.

ಹಸಿರು ಬಣ್ಣದ ಕಣ್ಣುಗಳು ಈ ವ್ಯಕ್ತಿಗಳು ವಿರಳವಾಗಿದ್ದು ಅತಿ ಸುಲಭವಾಗಿ ಯಾರನ್ನ ಬೇಕಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ ಇವರು ಹೆಚ್ಚು ಸ್ಪರ್ಧಾತ್ಮಕವಾಗಿ ಇರುತ್ತಾರೆ ಸೃಜನಶೀಲರು ಮತ್ತು ನಾಚಿಕೆ ಸ್ವಭಾವದವರು ಆಗಿರುತ್ತಾರೆ ಸ್ನೇಹಿತರನ್ನು ಸಂತೋಷವಾಗಿ ಇಡಲು ತಮ್ಮ ಎಲ್ಲಾ ಸಹಕಾರಗಳನ್ನು ನೀಡುವ ಇವರು ಪ್ರೇಮದ ಬಗ್ಗೆ ಮಾತ್ರ ಅತ್ಯಂತ ಹೆಚ್ಚಿನ ವ್ಯಾಕುಲರಾಗಿರುತ್ತಾರೆ ಇದೇ ಕಾರಣದಿಂದಾಗಿ ತಮ್ಮ ಪ್ರೇಮಿಯೂ ಯಾರೊಂದಿಗೆ ಮಾತನಾಡಿದರು ಸುಲಭವಾಗಿ ಕೋಪಗೊಳ್ಳುತ್ತಾರೆ.

ಬೆಕ್ಕಿನ ಕಣ್ಣುಗಳು ಬೆಕ್ಕಿನ ಕಣ್ಣುಗಳು ಬೂದು ಮತ್ತು ಕಂದು ಬಣ್ಣಕ್ಕೆ ಸರಿಯಾಗಿ ಮಿಶ್ರಣವಾಗದೆ ಕಲಸು ಕಲಸು ಬಣ್ಣವಾಗಿರುವುದರಿಂದ ಬೆಕ್ಕಿನ ಕಣ್ಣಿನಂತೆ ತೋರುವ ವ್ಯಕ್ತಿಗಳು ಆಕರ್ಷಿತರಾಗಿದ್ದರು ಅವರ ಸ್ನೇಹ ಸಂಪಾದಿಸುವುದು ಸುಲಭ ಅಲ್ಲ ವಾಸ್ತವವಾಗಿ ಇಂತಹ ವ್ಯಕ್ತಿಗಳು ಅತ್ಯಂತ ಸೂಕ್ಷ್ಮ ಸ್ವಭಾವದವರು ಮತ್ತು ದಯಾಮಯಿಗಳು ಆಗಿರುತ್ತಾರೆ ಆದರೆ ಪ್ರತಿಯೊಬ್ಬ ಬೆಕ್ಕಿನ ಕಣ್ಣುಗಳನ್ನು ಹೊಂದಿರುವ ವ್ಯಕ್ತಿಗಳ ಸ್ವಭಾವವು ಒಂದೇ ರೀತಿ ಇರುವುದಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.