ಬಸಳೆ ಸೊಪ್ಪು ತಿನ್ನೋದ್ರಿಂದ ಈ ಸಮಸ್ಸೆಗಳಿಗೆ ಅದ್ಬುತ ಮನೆಮದ್ದು ಯಾಕೆ ಗೊತ್ತಾ!

0 2,261

ಮನೆಯ ಮುಂಭಾಗದ ಒಂದು ಕುಂಡದಲ್ಲಿ ಬಳ್ಳಿಯಂತೆ ಬೆಳೆದು ಪಕ್ಕದಲ್ಲೇ ಇರುವ ಯಾವುದಾದರೂ ಒಂದು ಮರಕ್ಕೆ ಸುರಳಿಯಾಕಾರದಲ್ಲಿ ಹಬ್ಬಿ ಮನೆಯ ಅಂದವನ್ನು ಹೆಚ್ಚಿಸುವ ಬಸಳೆ ಸೊಪ್ಪಿನ ಬಳ್ಳಿ ಮನೆ ಮಂದಿಯ ಆರೋಗ್ಯ ರಕ್ಷಣೆಯಲ್ಲಿ ತನ್ನದೇ ಆದ ರೀತಿಯಲ್ಲಿ ನೆರವಿಗೆ ಬರುತ್ತದೆ. ಇದನ್ನು ಹಳ್ಳಿಗಾಡಿನಲ್ಲಿ ‘ ಬಚ್ಚಲೇ ಸೊಪ್ಪು ‘ ಎಂದು ಸಹ ಕರೆಯುತ್ತಾರೆ.

ಹೆಚ್ಚಾಗಿ ನಮ್ಮ ಭಾರತದಲ್ಲಿ ಕಂಡು ಬರುವ ಈ ಸಸ್ಯ ಪಕ್ಕದ ಚೀನಾ, ಸಿಲೋನ್, ಮಲೇಷ್ಯಾ, ಆಫ್ರಿಕಾ, ಅಮೇರಿಕಾ ಮತ್ತು ಬ್ರೆಜಿಲ್ ದೇಶಗಳಲ್ಲಿ ಸಹ ಬೆಳವಣಿಗೆ ಹೊಂದಿರುವುದನ್ನು ಕಾಣಬಹುದು. ಇದೊಂದು ಸದಾ ಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಬಳ್ಳಿಯಾಗಿದ್ದು, ಸುಮಾರು 9 ಮೀಟರ್ ಎತ್ತರ ಬೆಳೆಯಬಲ್ಲದು. ಬಸಳೆ ಬಳ್ಳಿಯ ಎಲೆಗಳು ನೋಡಲು ವೀಳ್ಯದ ಎಲೆಗಳಂತೆ ಇದ್ದು 3 ರಿಂದ 9 ಸೆಂಟಿಮೀಟರ್ ಅಗಲ ಹೊಂದಿರುತ್ತವೆ.

ಬಸಳೆ ಸೊಪ್ಪಿನಲ್ಲಿರುವ ಪೌಷ್ಟಿಕಾಂಶಗಳ ವಿವರ

ಬಸಳೆ ಸೊಪ್ಪು ತನ್ನಲ್ಲಿರುವ ಹಲವಾರು ಬಗೆಯ ಪೌಷ್ಟಿಕ ಸತ್ವಗಳಿಂದ ಮನುಷ್ಯನ ಆರೋಗ್ಯಕ್ಕೆ ಬಹಳಷ್ಟು ಬಗೆಯಲ್ಲಿ ಸಹಕಾರಿ ಎಂದು ತಿಳಿದು ಬಂದಿದೆ. ಬೇರೆಲ್ಲಾ ಹಸಿರು ಎಲೆ ತರಕಾರಿಗಳನ್ನು ಮೀರಿಸುವಂತಹ ಸತ್ವಗಳು ಬಸಳೆ ಸೊಪ್ಪಿನಲ್ಲಿ ಅಡಗಿವೆ. ಇದರಲ್ಲಿ ಕಡಿಮೆ ಕ್ಯಾಲೋರಿ ಅಂಶವಿದ್ದು, ವಿಟಮಿನ್ ‘ ಎ ‘, ವಿಟಮಿನ್ ‘ ಸಿ ‘, ವಿಟಮಿನ್ ‘ ಬಿ9 ‘, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಮೆಗ್ನೀಷಿಯಂ, ಪೋಸ್ಫ್ಯಾರಸ್, ಪೊಟ್ಯಾಸಿಯಂ ಮತ್ತು ಇನ್ನಿತರ ಖನಿಜಾಂಶಗಳು ಸೇರಿವೆ. ಜೊತೆಗೆ ಲ್ಯೂಟೀನ್ ಮತ್ತು ಬೀಟಾ – ಕೆರೋಟಿನ್ ಎಂಬ ಎರಡು ಆಂಟಿ – ಓಕ್ಸಿಡೆಂಟ್ ಗಳು ಸಹ ಇವೆ.

ಬಾಯಿಯಲ್ಲಿ ಉಂಟಾಗುವ ಹುಣ್ಣಿನಿಂದ ಹಿಡಿದು ಸರ್ವರೋಗಕ್ಕೂ ಮದ್ದು ಎಂಬ ಖ್ಯಾತಿ ಬಸಳೆ ಸೊಪ್ಪಿಗಿದೆ. ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಬಸಳೆ ಸೊಪ್ಪನ್ನು ತಮ್ಮ ದಿನ ನಿತ್ಯ ಮಾಡುವ ಅಡುಗೆ ಪದಾರ್ಥಗಳಲ್ಲಿ ಬಳಸುತ್ತಾ ಬಂದಿದ್ದಾರೆ. ಈ ಲೇಖನದಲ್ಲಿ ಮನುಷ್ಯನಿಗೆ ಬಸಳೆ ಸೊಪ್ಪಿನ ಸೇವನೆಯಿಂದ ಉಂಟಾಗುವ ಕೆಲವು ಆರೋಗ್ಯ ಪ್ರಯೋಜನಗಳನ್ನು ವಿವರಿಸಲಾಗಿದೆ.

ಹೃದಯದ ತೊಂದರೆ ದೂರ–ಬಸಳೆ ಸೊಪ್ಪಿನಲ್ಲಿ ಫೋಲೇಟ್ ಅಂಶ ಅಧಿಕವಾಗಿದೆ. ಇದು ಸಾಮಾನ್ಯವಾಗಿ ರಕ್ತದಲ್ಲಿನ ಹಿಮೋಸಿಸ್ಟಿನ್ ಮಟ್ಟವನ್ನು ತಗ್ಗಿಸುತ್ತದೆ. ಮನುಷ್ಯನಲ್ಲಿ ಹೀಮೋಸಿಸ್ಟಿನ್ ಹಾರ್ಟ್ ಅಟ್ಯಾಕ್ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುವ ಅಂಶ.

ಬಸಳೆ ಸೊಪ್ಪಿನಲ್ಲಿರುವ ಫೋಲೇಟ್ ಅಂಶ ಹಿಮೋ ಸಿಸ್ಟಿನ್ ಅಂಶವನ್ನು ಮೆಥಿಯೋನಿನ್ ಅಂಶವನ್ನಾಗಿ ಪರಿವರ್ತಿಸುವುದರಿಂದ ದೇಹದ ಮೆಟಬಾಲಿಕ್ ಪ್ರಕ್ರಿಯೆಗಳಿಗೆ ಮತ್ತು ಆಂಟಿ – ಆಕ್ಸಿಡೆಂಟ್ ಕಾರ್ಯ ಚಟುವಟಿಕೆಗಳಿಗೆ ಬಹಳಷ್ಟು ಸೂಕ್ತವಾಗುತ್ತದೆ. ಸಂಶೋಧನೆಗಳು ಸಹ ಫೋಲೇಟ್ ಅಂಶವನ್ನು ಹೆಚ್ಚಾಗಿ ಸೇವಿಸುವುದರಿಂದ ಹೃದಯ ರಕ್ತನಾಳದ ಸಮಸ್ಯೆಗಳನ್ನು ದೂರವಿಡಬಹುದು ಎಂದು ಹೇಳಿವೆ.

ಮಾನಸಿಕ ಖಿನ್ನತೆಯಿಂದ ಮುಕ್ತಿ

ಬಸಳೆ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಪ್ರತಿ ದಿನದ ಕೆಲವು ಕ್ಲಿಷ್ಟಕರ ಅನುಭವಗಳಿಂದ ಉಂಟಾಗುವ ಮಾನಸಿಕ ಖಿನ್ನತೆ ಮತ್ತು ಆತಂಕ ಯಾವುದೇ ಔಷಧಿಗಳಿಲ್ಲದೆ ದೂರವಾಗಬಲ್ಲದು. ಇದಕ್ಕೂ ಕಾರಣ ಬಸಳೆ ಸೊಪ್ಪಿನಲ್ಲಿರುವ ಫೋಲೇಟ್ ಅಂಶ ಎಂದರೆ ತಪ್ಪಾಗಲಾರದು.

ಈಗಾಗಲೇ ಮಾನಸಿಕ ಖಿನ್ನತೆಗೆ ಒಳಗಾಗಿ ಸಮಾಜದಿಂದ ದೂರವಿರಲು ಬಯಸುವ ಜನರಿಗೆ ಬಸಳೆ ಸೊಪ್ಪು ತನ್ನೊಳಗಿನ ಈ ಅಂಶದಿಂದ ಅವರಲ್ಲಿ ಮತ್ತೊಮ್ಮೆ ಹೊಸ ಹುರುಪು ನೀಡಿ ಮಾನಸಿಕ ಚೈತನ್ಯ ಒದಗಿಸಿ ಮಾನಸಿಕ ಆರೋಗ್ಯವನ್ನು ಸರಿಪಡಿಸುತ್ತದೆ.

ಡಿಮೆನ್ಷಿಯಾ ನಿವಾರಣೆಯಾಗುತ್ತದೆ

ಮನುಷ್ಯನ ದೇಹದಲ್ಲಿ ಹೋಮೊಸಿಸ್ಟೀನ್ ಹೆಚ್ಚಿನ ಪ್ರಮಾಣದಲ್ಲಿದ್ದರೆ ಆತನು ಬೇಗ ಡೆಮೆನ್ಷಿಯ ಮತ್ತು ಅಲ್ಜಿಮರ್ ಕಾಯಿಲೆಗೆ ಗುರಿಯಾಗಬೇಕಾಗುತ್ತದೆ. ಜೊತೆಗೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾದರೆ ಮಾನಸಿಕವಾಗಿ ಕುಗ್ಗಿ ಯಾವುದೇ ಕೆಲಸಗಳಲ್ಲಿ ಭಾಗಿಯಾಗಲು ಮನಸ್ಸು ಬರುವುದಿಲ್ಲ.

ಆದರೆ ಈ ಸಮಸ್ಯೆಗಳನ್ನು ಬಸಳೆ ಸೊಪ್ಪಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಫೋಲೇಟ್ ಅಂಶ ಸರಿಪಡಿಸುತ್ತದೆ ಎಂದು ಹೇಳಲಾಗಿದೆ. ಅರಿವಿನ ಕಾರ್ಯ ಚಟುವಟಿಕೆಯನ್ನು ಹೆಚ್ಚು ಮಾಡಿ ನೆನಪಿನ ಶಕ್ತಿಯನ್ನು ವೃದ್ಧಿಸುವಂತಹ ಗುಣ ಲಕ್ಷಣ ಬಸಳೆ ಸೊಪ್ಪಿನಲ್ಲಿದೆ.

ಕ್ಯಾನ್ಸರ್ ನಿವಾರಕ

ಬಸಳೆ ಸೊಪ್ಪು ಒಂದು ಹಸಿರೆಲೆ ತರಕಾರಿ ಗುಂಪಿಗೆ ಸೇರಿದ ನೈಸರ್ಗಿಕ ಆಹಾರ ಪದಾರ್ಥ ಆಗಿರುವುದರಿಂದ ಮನುಷ್ಯನ ದೇಹಕ್ಕೆ ಇದರಿಂದ ಹಲವಾರು ಲಾಭಗಳಿವೆ. ನಿಸರ್ಗದತ್ತವಾಗಿ ಇದರಲ್ಲಿ ಬಂದ ಹಲವಾರು ವಿಟಮಿನ್ ಅಂಶಗಳು ಮನುಷ್ಯನ ದೇಹಕ್ಕೆ ಹಲವು ಬಗೆಯ ಜೀವಕ್ಕೇ ಮಾರಕವಾಗಿರುವ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಬಹುದು.

ಹಿಂದಿನ ಆಯುರ್ವೇದ ಪದ್ಧತಿಯಲ್ಲಿ ಸಹ ಇದು ಸಾಬೀತಾಗಿದೆ ಎಂಬುದು ನೆನಪಿಡಬೇಕಾದ ವಿಷಯ. ಜನರಿಗೆ ತಮ್ಮ ಜೀವಿತಾವಧಿಯಲ್ಲಿ ಎದುರಾಗುವ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶ ಮತ್ತು ಬ್ರೈನ್ ಟ್ಯೂಮರ್ ನಂತಹ ಆರೋಗ್ಯ ಸಮಸ್ಯೆಗಳು ನಿಯಮಿತವಾದ ಬಸಳೆ ಸೊಪ್ಪಿನ ಖಾದ್ಯಗಳ ಸೇವನೆಯಿಂದ ದೂರಾಗುತ್ತವೆ ಎಂದು ಹೇಳಲಾಗಿದೆ.

ಅಮೈನೋ ಆಮ್ಲ, ಕಬ್ಬಿಣ ಮತ್ತು ವಿಟಮಿನ್ ‘ ಬಿ12 ‘ ಲಭ್ಯ

ಇತ್ತೀಚಿನ ಬಹುತೇಕ ಜನರು ತಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯಿಂದ ಅನಿಮಿಯಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದೇಹದಲ್ಲಿ ಕೆಂಪು ರಕ್ತ ಕಣಗಳು ಅಸಮರ್ಪಕವಾಗಿ ರೂಪಗೊಳ್ಳುವುದರಿಂದ ಅನೀಮಿಯಾ ಸಮಸ್ಯೆ ಕಾಣತೊಡಗುತ್ತದೆ.

ಬಸಳೆ ಸೊಪ್ಪಿನಲ್ಲಿರುವ ಫೋಲೇಟ್ ಅಂಶ ದೇಹದಲ್ಲಿ ಆಹಾರ ಸೇವನೆ ಮಾಡಿದಾಗ ಲಭ್ಯವಾಗುವ ವಿಟಮಿನ್ ‘ ಬಿ12 ‘ ಅಂಶವನ್ನು ಸರಿಯಾಗಿ ಹೀರಿಕೊಳ್ಳುವಂತೆ ಮಾಡಿ ಅಮೈನೋ ಆಮ್ಲಗಳನ್ನು ಒದಗಿಸುವ ಮೂಲಕ ಮೆದುಳಿನ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ.

ಗರ್ಭಿಣಿಯರಿಗೆ ಸಹಕಾರಿ

ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ಸುಗಮವಾಗಿ ಗರ್ಭಧಾರಣೆ ಆದಾಗಿನಿಂದ ಹೆರಿಗೆ ಆಗುವವರೆಗೂ ತಮ್ಮ ಆರೋಗ್ಯದ ಪ್ರತಿ ವಿಚಾರವೂ ಮುಖ್ಯವಾಗುತ್ತದೆ. ಕೆಲವು ಮಹಿಳೆಯರಿಗೆ ದೇಹದಲ್ಲಿ ಕೆಲವು ಅಗತ್ಯವಾದ ಅಂಶಗಳ ಕೊರತೆಯಿಂದ ಗರ್ಭದಲ್ಲಿರುವ ಮಕ್ಕಳ ಹೃದಯ, ಕೈ ಕಾಲುಗಳು, ಬೆನ್ನು ಹುರಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಮುಖ್ಯವಾಗಿ ಫೋಲೇಟ್ ಅಂಶದ ಕೊರತೆಯಿಂದ ಮಗು ಹುಟ್ಟಿದ ಮೇಲೆ ಕೆಲವು ಸಮಸ್ಯೆಗಳು ಹಾಗೆ ಮುಂದುವರೆಯುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿತ್ಯ ನಿಯಮಿತವಾಗಿ ವೈದ್ಯರ ಸೂಚನೆಯ ಮೇರೆಗೆ ಬಸಳೆ ಸೊಪ್ಪನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಎಲ್ಲ ವಿಧದಲ್ಲೂ ಒಳ್ಳೆಯದು.

ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಒದಗಿಸುತ್ತದೆ

ಮನುಷ್ಯನ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ದೇಹದಲ್ಲಿ ಕಡಿಮೆ ಪ್ರಮಾಣದ ಹಿಮೋಗ್ಲೋಬಿನ್ ಉಂಟಾಗಿ ಸರಿಯಾದ ಪ್ರಮಾಣದ ಆಮ್ಲಜನಕ ದೇಹದ ಎಲ್ಲಾ ಕೋಶಗಳಿಗೆ ಪೂರೈಕೆ ಆಗಲು ಸಾಧ್ಯವಾಗುವುದಿಲ್ಲ.

ಇದರಿಂದ ಮಾನಸಿಕ ತೊಂದರೆ ದೇಹದಲ್ಲಿ ನಿಶ್ಯಕ್ತಿ ಸಮಸ್ಯೆಗಳು ಹೆಚ್ಚಾಗುತ್ತವೆ. ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚು ತೊಂದರೆ ಕಾಣಿಸುವ ಸಾಧ್ಯತೆ ಇರುತ್ತದೆ. ಆದರೆ ಹಿರಿಯರು ಹೇಳುವಂತೆ ಬಸಳೆ ಸೊಪ್ಪಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಗುತ್ತದೆ.

Leave A Reply

Your email address will not be published.