ನಿಮ್ಮ ಮನೆ ಕಟ್ಟುವ /ಖರೀದಿಸುವ ಯೋಜನೆಗೆ ಅಕ್ಷಯ ತೃತೀಯ ದಿನ ಮಾಡಿಕೊಳ್ಳುವ ಸಂಕಲ್ಪ ಫಲ ನೀಡುವುದೇ!
ಅಕ್ಷಯ ತೃತೀಯ ಎಂದರೆ ಅಕ್ಷಯ ಆಗುವುದು.ವೈಶಾಖ ಮಾಸ ಶುಕ್ಲ ಪಕ್ಷ ತೃತೀಯ ತಿಥಿಯಂದು ಅಕ್ಷಯ ತೃತೀಯವನ್ನು ಆಚರಣೆ ಮಾಡುತ್ತೇವೆ.ಈ ದಿನ ನೀವು ಏನೇ ಬೇಕಾದರೂ ತೆಗೆದುಕೊಳ್ಳಬಹುದು.ವಾಹನ, ಮನೆ ಖರೀದಿ, ಆಭರಣವನ್ನು ಸಹ ತೆಗೆದುಕೊಳ್ಳಬಹುದು.ಇನ್ನು ಅಕ್ಷಯ ತೃತೀಯ ದಿನ ಹೊಸ ಮನೆಗೂ ಕೂಡ ಹೋಗಬಹುದು ಹಾಗೂ ಗೃಹ ಪ್ರವೇಶವನ್ನು ಕೂಡ ಮಾಡಬಹುದು. ಯಾವುದೇ ಹೊಸ ಕಾರ್ಯವನ್ನು ಸಹ ಮಾಡಬಹುದು.
ಅಕ್ಷಯ ತೃತೀಯ ಆಚರಣೆಗೆ ಒಂದು ಪೌರಾಣಿಕ ಹಿನ್ನಲೆ ಇದೆ.ವಿಷ್ಣುವಿನ 6ನೇ ಅವತರ ಪರಶುರಾಮ ಹುಟ್ಟಿದ್ದು.ಈ ಪರಶುರಾಮ ಕಾಲಿಟ್ಟ ಕ್ಷೇತ್ರದಲ್ಲಿ ಯಾವುದೇ ಹಿನ್ನಡೆ ಆಗಲಿಲ್ಲ. ಈ ದಿನ ಯಾವುದೇ ಒಂದು ಕೆಲಸವನ್ನು ಕೈಹಾಕಿದರೂ ಕೂಡ ನಿರ್ವಿಘ್ನವಾಗಿ ಪೂರ್ಣಗೊಳ್ಳುತ್ತದೆ. ಯಾವುದೇ ರೀತಿಯ ಅಡೆತಡೆಗಳು ಇರುವುದಿಲ್ಲ. ಇದರ ಜೊತೆಗೆ ನೀವು ಯಾವುದೇ ರೀತಿಯ ಕೆಲಸವನ್ನು ಮಾಡಿದರೂ ಕೂಡ ಅದು ವೃದ್ಧಿಯಾಗುವುದು. ಅಕ್ಷಯ ತೃತೀಯ ದಿನ ಮಂಗಳ ಕಾರ್ಯವನ್ನು ಮಾಡಬಹುದು. ಯಾವುದೇ ವಸ್ತುವನ್ನು ತೆಗೆದುಕೊಳ್ಳಬೇಕು ಎಂದರೆ ನಿಮ್ಮ ಸ್ವಂತ ದುಡ್ಡಿನಲ್ಲಿ ತೆಗೆದುಕೊಳ್ಳಿ.