ನಿಮ್ಮ ಹೆಸರು V ಅಕ್ಷರದಿಂದ ಶುರುವಾಗಿದ್ದರೆ ನೀವು ತಿಳಿಯಲೇಬೇಕಾದ ವಿಷಯ

0 10,226

ನಿಮ್ಮ ಹೆಸರು V ಅಕ್ಷರದಿಂದ ಶುರುವಾಗಿದ್ದರೆ ನೀವು ತಿಳಿಯಲೇಬೇಕಾದ ವಿಷಯ.

ನಮಸ್ಕಾರ ಸ್ನೇಹಿತರೆ, ನಿಮ್ಮ ಹೆಸರು V ಎಂಬ ಅಕ್ಷರದಿಂದ ಆರಂಭವಾಗುತ್ತಾ ಹಾಗಾದರೆ ನಿಮ್ಮ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಎನ್ನುವುದನ್ನು ಹೇಳುತ್ತೇನೆ ಕೇಳಿ, ಸಂಖ್ಯಾಶಾಸ್ತ್ರ ನಿಮ್ಮ ವ್ಯಕ್ತಿತ್ವ, ನಿಮ್ಮ ಗುಣ, ನಿಮ್ಮ ಸ್ವಭಾವದ ಬಗ್ಗೆ ಹೀಗೆಲ್ಲ ಹೇಳುತ್ತದೆ, V ಎಂಬ ಅಕ್ಷರ ಅಂದರೆ ಸಕಾರಾತ್ಮಕ ಅಕ್ಷರವಂತೆ ಇದು ಶುಕ್ರನ ದೆಶೆ ಇರುವ ಅಕ್ಷರ ಇನ್ನು 6 ನೇ ತಾರೀಕು ಹುಟ್ಟಿದರೆ ಇನ್ನಷ್ಟು ಅದೃಷ್ಟ ಚೆನ್ನಾಗಿರುತ್ತದೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗುತ್ತಿದೆ.

ಇನ್ನು V ಎಂಬ ಅಕ್ಷರದಿಂದ ಹೆಸರುಳ್ಳ ಜನರು ಕಲೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿರುತ್ತಾರೆ ಎನ್ನುತ್ತದೆ ಸಂಖ್ಯಾಶಾಸ್ತ್ರ.ಹಾಗೆಯೇ ಸಂಗೀತ , ನೃತ್ಯ , ಪೇಂಟಿಂಗ್ ಹೀಗೆ ಕಲೆಗಳಿಗೆ ಸಂಬಂಧಿಸಿದಂತೆ ಇವರಿಗೆ ಹೆಚ್ಚು ಹೆಚ್ಚು ಆಸಕ್ತಿಗಳು ಇರುತ್ತವಂತೆ, ಇನ್ನು ಈ V ಎಂಬ ಅಕ್ಷರದಿಂದ ಹೆಸರಾಗಿ ಉಳ್ಳ ವ್ಯಕ್ತಿಗಳು ವಿಷಯಗಳನ್ನು ಕೈಗೆತ್ತಿಕೊಂಡಾಗ ಬರಿ ಮಾತಿನಲ್ಲಿ ಮುಗಿಸುವುದಿಲ್ಲವಂತೆ ಹಿಡಿದ ಕೆಲಸವನ್ನು ಮಾಡುವ ತನಕ ಬಿಡುವುದಿಲ್ಲವಂತೆ, ಕೈ ಹಿಡಿದ ಕೆಲಸ ಮುಗಿಬೇಕು ಆಗಲೇ ಅವರು ಸುಮ್ಮನಿರುವುದು ಅಷ್ಟು ನಿಷ್ಠಾವಂತರು ಇವರು.

ಹಾಗೆಯೇ ಪ್ರೀತಿ ತೋರಿಸುವರು ಕರುಣೆ ಮತ್ತು ಸಹಾನುಭೂತಿ ಗುಣಗಳನ್ನು ಹೊಂದಿರುವವರು ಇವರಾಗಿರುತ್ತಾರೆ, ಇನ್ನು V ಎಂಬ ಅಕ್ಷರವನ್ನು ಹೆಸರಾಗಿ ಉಳ್ಳವರು ಅತಿಯಾಗಿ ಮಾತಾಡುವುದಿಲ್ಲವಂತೆ ಅವರ ಉತ್ಸಾಹ ಯಾವುದೇ ಗಡಿಗಳನ್ನು ಹೊಂದಿರುವುದಿಲ್ಲ , ಕೈಯಲ್ಲಿರುವ ಕೆಲಸ ಪೂರ್ಣಗೊಳ್ಳುವವರೆಗೆ ಅವರು ವಿಶ್ರಾಂತಿ ಎಂಬ ಮಾತೇ ಆಡುವುದಿಲ್ಲ ಎಂದು ಹೇಳುತ್ತದೆ ಸಂಖ್ಯಾಶಾಸ್ತ್ರ, ತಮ್ಮ ಕ್ರಿಯಾತ್ಮಕ ಸ್ವಭಾವದಿಂದಾಗಿ ಅವರು ಸಾಮಾನ್ಯವಾಗಿ ಜೀವನದಲ್ಲಿ ಬಹಳಷ್ಟು ಸಾಧನೆಗಳನ್ನು ಸಾಧಿಸಿ ತೋರಿಸುತ್ತಾರೆ ಎನ್ನುತ್ತದೆ ಸಂಖ್ಯಾಶಾಸ್ತ್ರ.

ಇನ್ನು ವೈಯಕ್ತಿಕ ಜೀವನಕ್ಕೆ ಬಂದಾಗ ತಮ್ಮ ಪ್ರೇಯಸಿ ಅಥವಾ ಸಂಗಾತಿಯ ಕುರಿತು ಅತಿಯಾದ ಪ್ರೀತಿ ಕೆಲವು ಬಾರಿ ಇವರ ಕೈಯಲ್ಲಿ ಕೆಟ್ಟ ಕೆಲಸಗಳನ್ನೂ ಮಾಡಿಸಲು ಆಸ್ಪದಗಳು ಇರುತ್ತವೆ ಎಂದು ಹೇಳಲಾಗುತ್ತದೆ, ಇನ್ನು ಅನುಮಾನ ಪಡುವ ಗುಣಗಳು ಮತ್ತು ಇತರರ ಬಗ್ಗೆ ಆಡಿಕೊಳ್ಳುವ ಗುಣಗಳು ಇವರ ಕೆಟ್ಟಗುಣಗಳಾದರೂ ಅವರನ್ನು ಅವರೇ ತಿದ್ದುಕೊಂಡು ಮುಂದೆ ಸಾಗುತ್ತಾರೆ.ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ ಇನ್ನು ಇಂತಹ ಗುಣಗಳು ಅವರ ಚರಿತ್ರೆ ವಧೆ ಆಗುವಂತೆ ಇರುವುದರಿಂದ ಇವರು ಅಂತಹ ಗುಣಗಳನ್ನು ತಮ್ಮನ್ನು ತಾವು ಸರಿಪಡಿಸಿಕೊಳ್ಳುತ್ತಾ ಮುನ್ನುಗ್ಗುತ್ತ ಜೀವನದಲ್ಲಿ ಸಾಧನೆಯ ಪಥದತ್ತ ಕೊಂಡೊಯ್ದ ಮುನ್ನುಗ್ಗುತ್ತಾರೆ ಎನ್ನುತ್ತದೆ ಸಂಖ್ಯಾಶಾಸ್ತ್ರ. ಹೀಗಿದೆ V ಎಂಬ ಅಕ್ಷರವನ್ನು ಹೆಸರಾಗಿ ಉಳ್ಳ ವ್ಯಕ್ತಿಗಳ ಗುಣ ಸ್ವಭಾವ ಹಾಗೂ ವ್ಯಕ್ತಿತ್ವ.

Leave A Reply

Your email address will not be published.