ಒಂದು ಬೆಳ್ಳುಳ್ಳಿ ನಿಮ್ಮ ಲಕ್ ಬದಲಾಯಿಸುತ್ತೆ ಅಪಾರ ಹಣ ಬರುತ್ತೆ!
ಬೆಳ್ಳುಳ್ಳಿಯನ್ನು ಆಹಾರದಲ್ಲಿನ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇನ್ನು ಅನೇಕ ರೋಗಗಳ ವಿರುದ್ದ ಔಷಧಿಯಾಗಿಯೂ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಆದರೆ, ಒಂದು ಬೆಳ್ಳುಳ್ಳಿ ಎಸಳು ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು ಎನ್ನುವುದು ನಿಮಗೆ ತಿಳಿದಿದೆಯೇ ? ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಪರಿಹಾರವಾಗಿ ಬೆಳ್ಳುಳ್ಳಿ ಕೆಲಸ ಮಾಡುತ್ತದೆ.
ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ :ಬೆಳ್ಳುಳ್ಳಿಯ ಎಸಳುಗಳು ಹಣ ಮತ್ತು ಹಣಕ್ಕೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಶನಿವಾರದಂದು ನಿಮ್ಮ ಪರ್ಸ್ನಲ್ಲಿ ಬೆಳ್ಳುಳ್ಳಿಯ ಎಸಳನ್ನು ಇರಿಸಿ . ಆದರೆ ನೆನಪಿರಲಿ ಪ್ರತಿ ಶನಿವಾರ ಇದನ್ನು ಬದಲಾಯಿಸುತ್ತಿರಬೇಕು. ಹೀಗೆ ಮಾಡುವುದರಿಂದ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ.
ಕೈಯಲ್ಲಿ ಹಣ ಉಳಿಯದಿದ್ದರೆ, ಈ ಕ್ರಮಗಳನ್ನು ಅನುಸರಿಸಿ : ಕೆಲವರ ಕೈಯಲ್ಲಿ ಹಣ ಉಳಿಯುವುದೇ ಇಲ್ಲ. ಎಷ್ಟೇ ಹಣ ಸಂಪಾದನೆಯಾದರೂ, ಖರ್ಚಾಗಿ ಬಿಡುತ್ತದೆ. ಹೀಗಿರುವಾಗ ನಿಮ್ಮ ಮನೆ ಅಥವಾ ಅಂಗಡಿಯಲ್ಲಿ ಲಾಕರ್ನಲ್ಲಿ ಒಂದು ಬಟ್ಟೆಯಲ್ಲಿ ಬೆಳ್ಳುಳ್ಳಿ ಎಸಳನ್ನು ಸುತ್ತಿ ಇರಿಸಿ. ಹೀಗೆ ಮಾಡುವುದರಿಂದ ಕೈಯಲ್ಲಿ ಹಣ ಉಳಿಯುತ್ತದೆ ಎನ್ನುತ್ತಾರೆ.
ನೀವು ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಎರಡು ಬೆಳ್ಳುಳ್ಳಿ ಎಸಳುಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ, ನಂತರ ಅದನ್ನು ನೆಲದಲ್ಲಿ ಹೂತುಹಾಕಿ. ಈ ಕ್ರಮದಿಂದಲೂ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.
ವ್ಯವಹಾರದಲ್ಲಿನ ನಷ್ಟವನ್ನು ತಪ್ಪಿಸಲು :ವ್ಯವಹಾರದಲ್ಲಿ ನಷ್ಟ ಸಂಭವಿಸುತ್ತಿದ್ದರೆ, 5 ಅಥವಾ 7 ಬೆಳ್ಳುಳ್ಳಿಯನ್ನು ಸ್ವಚ್ಚವಾದ ಬಟ್ಟೆಯಲ್ಲಿ ಕಟ್ಟಿ ಅದನ್ನು ನಿಮ್ಮ ಅಂಗಡಿ, ಕಚೇರಿ ಅಥವಾ ನೀವು ಕೆಲಸ ಮಾಡುವ ಸ್ಥಳದ ಮುಖ್ಯ ಬಾಗಿಲಲ್ಲಿ ನೇಟು ಹಾಕಿ. ಇದರಿಂದ ವ್ಯಾಪಾರ ವ್ಯವಹಾರ ಚುರುಕಾಗಿ ನಡೆಯುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.