ನಾಯಿ ಸಾಕೋದ್ರಿಂದ ನಿಮ್ಮ ಮನೆಯಿಂದ 6 ಅಪಾಯಕಾರಿ ದೋಷ ಕಳೆಯುತ್ತೆ!

0 4,128

ನಮ್ಮ ಹಿಂದಿನ ಕಾಲದ ಕೆಲವು ಜನರು ಅಂದರೆ ದೊಡ್ಡ ಹುದ್ದೆಯಲ್ಲಿ ಇರುವ ಜನರು ಮನೆಯಲ್ಲಿ ನಾಯಿಗಳನ್ನು ಸಾಕುತ್ತಿದ್ದರು ಏಕೆಂದರೆ ತಮ್ಮ ಮನೆಯ ರಕ್ಷಣೆಗೆ ಹಾಗೂ ಮನೆಗೆ ಯಾರಾದರೂ ಬಂದರೆ ಗೊತ್ತಾಗಲಿ ಎಂಬ ಕಾರಣಕ್ಕೆ ನಾಯಿ ಸಾಕುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ನಾಯಿಗಳನ್ನು ಸಾಕುತ್ತಾರೆ ಕೆಲವರು ತಮ್ಮ ಮನೆಯ ರಕ್ಷಣೆಗೆ ಎಂದು ಸಾಕುತ್ತಾರೆ ಇನ್ನೂ ಕೆಲವರು ನಾಯಿಗಳ ಪ್ರಿಯರು ಇರುತ್ತಾರೆ.ಪ್ರಾಣಿ ಪ್ರಿಯರು ಇರುತ್ತಾರೆ ಅವರು ಪ್ರಾಣಿಗಳನ್ನು ತಮ್ಮ ಮನೆಯ ಮಂದಿಗಳಂತೆ ನೋಡುತ್ತಾರೆ ತಮ್ಮ ಜೊತೆಯಲೇ ಇರುವಂತೆ ಯಾವಾಗಲೂ ನೋಡಿ ಕೊಳ್ಳುತ್ತಾರೆ ತಾವು ಹೋಗುವ ಕಡೆಯಲ್ಲ ನಾಯಿಯನ್ನು ಕರೆದುಕೊಂಡು ಹೋಗುತ್ತಾರೆ ತಮ್ಮ ಜೊತೆಯಲ್ಲೇ ಮಲಗಿಸಿಕೊಳ್ಳುತ್ತಾರೆ.

ಹಾಗಾದ್ರೆ ಮನೆಯಲ್ಲಿ ನಾಯಿಗಳನ್ನು ಸಾಕುವುದರಿಂದ ಏನು ಆಗುತ್ತದೆ ತಿಳಿಯೋಣ. ಅತಿ ಬುದ್ಧಿವಂತ ಪ್ರಾಣಿಗಳಲ್ಲಿ ನಾಯಿ ಕೂಡ ಒಂದು ಇದು ಮನುಷ್ಯನ ಬುದ್ಧಿವಂತಿಕೆಯನ್ನು ಮೀರಿಸುತ್ತದೆ ಹಾಗೂ ನಿಯತ್ತಗಿ ಇರುವ ಪ್ರಾಣಿ ಕೂಡ ಇದು. ಆದರೆ ಇದನ್ನು ಸಾಕುವುದರಿಂದ ಏನು ಆಗುತ್ತದೆ ಬನ್ನಿ ತಿಳಿಯೋಣ. ಮನೆಗೆ ಪ್ರವೇಶ ಮಾಡುವ ದುಷ್ಟ ಶಕ್ತಿಗಳನ್ನು ತಡೆಯುವ ಶಕ್ತಿ ನಾಯಿಗೆ ಇದೆ. ಹಾಗೆಯೆ ನಾಯಿಗಳಿಗೆ ಗ್ರಹಿಸುವ ಶಕ್ತಿ ತುಂಬಾ ಇರುತ್ತದೆ.

ಅದಕ್ಕಾಗಿ ನಾಯಿಗಳಿಗೆ ನಕಾರಾತ್ಮಕ ಶಕ್ತಿ ಹಾಗೂ ಸಕಾರಾತ್ಮಕ ಶಕ್ತಿ ಎರಡನ್ನೂ ಬೇಗ ಗ್ರಹಿಸುತ್ತದೆ. ನಾಯಿಗಳನ್ನು ಮನೆಯಲ್ಲಿ ಸಾಕುವುದರಿಂದ ಮನೆಯ ಸದಸ್ಯರಿಗೆ ಒಳ್ಳೆಯದು ಆಗುತ್ತದೆ. ಮನೆಗೆ ಪ್ರವೇಶ ಮಾಡುವ ನಕಾರಾತ್ಮಕ ಶಕ್ತಿಯನ್ನು ನಾಯಿಯು ತಡೆಯುತ್ತದೆ. ಮನೆಯಲ್ಲಿ ನಾಯಿ ಸಾಕಿದರೆ ಮನೆಯ ಎಲ್ಲ ರೀತಿಯ ಆರ್ಥಿಕ ಸಮಸ್ಯೆಗಳು ದೂರ ಆಗುತ್ತವೆ. ಹಾಗೂ ನಮಗೆ ಏನಾದರೂ ಕೆಟ್ಟ ದೃಷ್ಟಿ ದೋಷ ಆಗಿದ್ದರೆ ಅದರ ನಿವಾರಣೆಗೂ ನಾವು ಸಾಕಿದ ನಾಯಿ ಸಹಾಯ ಮಾಡುತ್ತದೆ ಅದು ಹೇಗೆಂದರೆ ಏನಾದರೂ ಕೆಟ್ಟ ದೃಷ್ಟಿಯಿಂದ ನಮಗೆ ತೊಂದರೆ ಆಗಿ ಸಮಸ್ಯೆ ಅನುಭವಿಸುತ್ತಿದ್ದಾರೆ ನಾಯಿಯ ಮುಂದೆ ಹೋಗಿ ನಮ್ಮ ಸಮಸ್ಯೆ ದೂರ ಆಗಲಿ ಎಂದು ಕೇಳಿಕೊಳ್ಳುತ್ತ ನಾಯಿಗೆ ಅನ್ನ ನೀಡಿದರೆ ನಮ್ಮ ಸಮಸ್ಯೆ ಎಲ್ಲವೂ ದೂರ ಆಗುತ್ತದೆ.

ಹಾಗೆಯೆ ಮುಂದೆ ನಮಗೆ ನಮ್ಮ ಮನೆಗೆ ಏನಾದರೂ ತೊಂದರೆ ಆಗುವ ಲಕ್ಷಣಗಳು ಕಂಡು ಬಂದರೆ ಅದರ ಮುನ್ಸೂಚನೆ ಅನ್ನು ನಾಯಿ ನಮಗೆ ನೀಡುತ್ತದೆ. ದೇವರು ನಾಯಿಗೆ ತುಂಬಾ ಶಕ್ತಿ ನೀಡಿರುತ್ತಾನೆ ನಾಯಿಗೆ ಇರುವ ಶಕ್ತಿ ಕೂಡ ಮನುಷ್ಯನಿಗೆ ಇರುವುದಿಲ್ಲ ಅಷ್ಟು ಬುದ್ಧಿಶಕ್ತಿ ಪ್ರಾಣಿ ಆಗಿರುತ್ತದೆ. ಹಾಗೂ ಹುಂಡ ಮನೆಗೆ ಯಾವಾಗಲೂ ಮೋಸ ಮಾಡದೇ ಇರುವ ಪ್ರಾಣಿ ಇದು ಅದಕ್ಕಾಗಿಯೇ ಎಲ್ಲರೂ ನಾಯಿಯನ್ನು ಮನೆಯಲ್ಲಿ ಸಾಕುವುದಕ್ಕೆ ಇಷ್ಟ ಪಡುತ್ತಾರೆ. ನಾಯಿ ಸಾಕೋದ್ರಿಂದ ನಿಮ್ಮ ಮನೆಯಿಂದ 6 ಅಪಾಯಕಾರಿ ದೋಷ ಕಳೆಯುತ್ತೆ ನಾಯಿ ಮನೆಯೊಳಗೆ ಈ ದುಷ್ಟ ಶಕ್ತಿ ಬರದಂತೆ ತಡೆಯುತ್ತೆ.

Leave A Reply

Your email address will not be published.