ಊಟದ ಸಮಯದಲ್ಲಿ ಮಾಡುವ ಈ ತಪ್ಪು ಮಾಡಬಾರದು

Recent stories

ಜೀವನಕ್ಕೆ ಆಹಾರ ಬಹಳ ಮುಖ್ಯ. ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಬಾರಿ ತಿನ್ನುತ್ತಾನೆ. ಆದರೆ, ಊಟ ತಿಂಡಿ ಸಮಯದಲ್ಲಿ ಕೆಲವರು ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಹೀಗೆ ಊಟದ ವೇಳೆ ಮಾಡುವ ತಪ್ಪು, ಹಲವು ರೋಗಗಳಿಗೆ ಕಾರಣವಾಗುತ್ತದೆ.  ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಸೇವಿಸದಿರುವುದು ಇದರ ಹಿಂದಿನ ದೊಡ್ಡ ಕಾರಣವಾಗಿದೆ. ಆದರೆ ಇದರ ಹೊರತಾಗಿ, ವಾಸ್ತು ಶಾಸ್ತ್ರದಲ್ಲಿ ಸಾವಿಗೆ ಕಾರಣವಾಗುವ ಕೆಲವು ವಿಷಯಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆ-ಕಚೇರಿ, ಕಾರ್ಖಾನೆ, ಉದ್ಯಾನವನದಂತಹ ಪ್ರತಿಯೊಂದು ನಿರ್ಮಾಣ ಕಾರ್ಯಕ್ಕೂ ಸರಿಯಾದ ದಿಕ್ಕುಗಳು ಮತ್ತು ನಿಯಮಗಳನ್ನು ನೀಡಲಾಗಿದೆ. ಇದಲ್ಲದೆ, ನಮ್ಮ ದೈನಂದಿನ ಕೆಲಸಕ್ಕೆ ಅಗತ್ಯವಾದ ನಿಯಮಗಳನ್ನು ಸಹ ಇಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಆಹಾರ ಶೇಖರಣೆಯಿಂದ ಹಿಡಿದು ಅಡುಗೆ ಮಾಡಿ ತಿನ್ನುವವರೆಗೆ ಎಲ್ಲದ್ದಕ್ಕೂ ನೀತಿ ನಿಯಮಗಳನ್ನು ಹೇಳಲಾಗಿದೆ. ಅವುಗಳನ್ನು ನಿರ್ಲಕ್ಷಿಸುವುದು ಎಂದರೆ ಜೀವನದಲ್ಲಿ ಅನೇಕ ದೊಡ್ಡ ಸಮಸ್ಯೆಗಳನ್ನು  ಬರಮಾಡಿಕೊಳ್ಳುವುದು ಎಂದೇ ಅರ್ಥ  

ವಾಸ್ತು ಶಾಸ್ತ್ರದ ಪ್ರಕಾರ ಯಾವಾಗಲೂ ಪೂರ್ವ ಅಥವಾ ಈಶಾನ್ಯಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬೇಕು. ಇದರಿಂದ ವ್ಯಕ್ತಿಯ ವಯಸ್ಸು ಹೆಚ್ಚುತ್ತದೆ, ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ. ಅವರ ಆರೋಗ್ಯ ಚೆನ್ನಾಗಿಯೇ ಇದೆ. ಇನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತು, ಆಹಾರವನ್ನು ತಿನ್ನುವುದು ಎಂದರೆ ನಿಮ್ಮ ಕೈಯ್ಯಾರ ನಿಮ್ಮ ಆಯುಷ್ಯವನ್ನು ಕಡಿಮೆ ಮಾಡಿದಂತೆ. ದಕ್ಷಿಣ ದಿಕ್ಕು ಯಮರಾಜನ ದಿಕ್ಕು ಎಂದು ಹೇಳಲಾಗುತ್ತದೆ.  ಆದ್ದರಿಂದ ಈ ದಿಕ್ಕಿಗೆ ಮುಖಮಾಡಿ ಆಹಾರ ಸೇವಿಸುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. 

Leave a Reply

Your email address will not be published.