ಬಿಪಿ ಸಮಸ್ಸೆ ಎನ್ನುವುದು ಹಲವಾರು ಜನರಲ್ಲಿ ಕಂಡುಬರುತ್ತದೆ.ಈ ಸುಲಭವಾದ ವಿಧಾನವನ್ನು ಅನುಸರಿಸುವುದರಿಂದ ಬಿಪಿ ಇಂದ ದೂರ ಇರಬಹುದು. ರಕ್ತದ ಒತ್ತಡ ಯಾವಾಗ ಜಾಸ್ತಿ ಆಗುತ್ತದೆ ಎಂದರೆ ಏನಾದರು ಟೆನ್ಶನ್ ಆಗುತ್ತಿದ್ದಾರೆ, ನಿರಾಸೆ ಆಗಿದ್ದರು ಸಹಿತ ಬಿಪಿ ಜಾಸ್ತಿ ಆಗುತ್ತದೆ.ತುಂಬಾ ಕೋಪ ಮಾಡಿಕೊಂಡರು ಸಹ ಬಿಪಿ ಜಾಸ್ತಿ ಆಗುತ್ತದೆ.ಅಷ್ಟೇ ಅಲ್ಲದೆ ತಿನ್ನುವ ಆಹಾರ ಕ್ರಮ ಸರಿಯಾಗಿ ಇಲ್ಲವಾದರೂ ತೂಕ ಜಾಸ್ತಿ ಆಗಿ ಬಿಪಿ ಆಗುತ್ತದೆ.ಮಿತಿ ಮೀರಿ ಡ್ರಿಕ್ಸ್ ಮಾಡುತ್ತಿದ್ದಾರೆ ಬಿಪಿ ಜಾಸ್ತಿ ಆಗುತ್ತದೆ.
1, ದಿನಕ್ಕೆ ಎರಡು ಬಾಳೆಹಣ್ಣು ತಿನ್ನುವುದರಿಂದ ಬಿಪಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. 2, ಬೀಟ್ರೋಟ್ ಕ್ಯಾರೆಟ್ ಆಪಲ್ ಜ್ಯೂಸ್ ಕುಡಿಯುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. 3, ಬೆಳ್ಳುಳ್ಳಿಯಲ್ಲಿ ನೈಟ್ರಿಕ್ ಆಸಿಡ್ ಇದೆ. ಇದು ದೇಹದ ಮಝಲ್ ಅನ್ನು ರಿಲೇಕ್ಸ್ ಮಾಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಎರಡು ಬೆಳ್ಳುಳ್ಳಿಯನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಮತ್ತು ಅರ್ಧ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸೇವಿಸಬೇಕು.ಇದರಿಂದ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಬಿಪಿ ನಿಯಂತ್ರಣಕ್ಕೆ ಬರುತ್ತದೆ.
4, ಅಗಸೆ ಬೀಜದಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಇದೆ.ಇದು ದೇಹಕ್ಕೆ ತುಂಬಾನೇ ಮುಖ್ಯವಾಗಿ ಬೇಕಾಗುತ್ತದೆ.ಅಗಸೆ ಬೀಜ ಪುಡಿ ಮಾಡಿ ಒಂದು ಗ್ಲಾಸ್ ನೀರಿಗೆ ಹಾಕಿ ಮಿಕ್ಸ್ ಮಾಡಿ ಬೆಳಗ್ಗೆ ಮತ್ತು ಸಂಜೆ ಕುಡಿಯಬೇಕು.ಇದರಿಂದ ಕೊಲೆಸ್ಟ್ರೇಲ್ ಹಾಗೂ ಬಿಪಿ ಅನ್ನು ನಿಯಂತ್ರಣಕ್ಕೆ ಇಟ್ಟುಕೊಳ್ಳಬಹುದು.
5, ಬಿಪಿ ನಿಯಂತ್ರಣ ಮಾಡುವುದಕ್ಕೆ ಕರಿಬೇವು ತುಂಬಾನೆ ಒಳ್ಳೆಯದು.ಕರಿಬೇವು ಸೊಪ್ಪಿನ ಜ್ಯೂಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.6, ಪ್ರತಿದಿನ ರಾತ್ರಿ 4 ರಿಂದ 5 ಬಾದಾಮಿ ನೆನಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಹೃದಯ ಸಂಬಂಧಿ ಸಮಸ್ಯೆ ನಿವಾರಣೆಯಾಗುತ್ತದೆ.ಬಿಪಿ ಜಾಸ್ತಿ ಅದರೆ ಕಣ್ಣಿನ ಸಮಸ್ಸೆ ಕೂಡ ಆಗುತ್ತದೆ.7, ಬಿಪಿ ಅನ್ನು ಆಹಾರ ಪದಾರ್ಥದಿಂದ ನಿಯಂತ್ರಣಕ್ಕೆ ತರಬಹುದು ಮತ್ತು ಮನಸ್ಸನ್ನು ಸರಿಯಾಗಿ ಇಟ್ಟುಕೊಂಡರೆ ಮಾತ್ರ ಬಿಪಿ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಪ್ರತಿದಿನ ಬೆಳಗ್ಗೆ ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಶಾಂತಿಯಿಂದ ಇರುತ್ತದೆ.