ಈ ದಿನ ಪೊರಕೆ ಖರೀದಿಸಿದರೆ ಮನೆಯಲ್ಲಿ ನೆಲೆಸುತ್ತಾಳಂತೆ ಮಹಾಲಕ್ಷ್ಮೀ

Recent stories

ಪೊರಕೆಯು ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ಬಳಸುವ ಒಂದು ವಸ್ತುವಾಗಿದೆ. ಮನೆಯ ಕಸ ಹೊರ ಹಾಕಲು ಬಳಸುವ ಪೊರಕೆಯನ್ನು   ಹುಲ್ಲು, ಪ್ಲಾಸ್ಟಿಕ್,  ಅಥವಾ ಫೈಬರ್ನಿಂದ ತಯಾರಿಸಲಾಗುತ್ತದೆ. ಪೊರಕೆಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಪೊರಕೆಯ ಮೇಲೆ ತಪ್ಪಿಯೂ ಕೂಡಾ ಕಾಲಿಡಬಾರದು. ಅಲ್ಲದೆ, ಅದನ್ನು ಮನೆಯ ಬಾಗಿಲಲ್ಲಿ ಇಡಬಾರದು. ಇದಲ್ಲದೇ ಪೊರಕೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳಿವೆ. 

ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮೀಯ ಸಂಕೇತವೆಂದು ಪರಿಗಣಿಸಲಾಗುತ್ತದೆ.  ಈ ಕಾರಣಕ್ಕಾಗಿ ಗುರುವಾರ ಮತ್ತು ಶುಕ್ರವಾರದಂದು ಹಳೆಯ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬಾರದು. ಏಕೆಂದರೆ ಗುರುವಾರ ಮತ್ತು ಶುಕ್ರವಾರಗಳು ಕ್ರಮವಾಗಿ ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಸಂಬಂಧಿಸಿವೆ. ಈ ದಿನ, ಮನೆಯಿಂದ ಪೊರಕೆ ಹೊರ ಹಾಕಿದರೆ ಲಕ್ಷ್ಮೀ ದೇವಿಯೂ ಕೂಡಾ, ಕೋಪದಿಂದ ಮನೆಯಿಂದ ಹೊರಹೋಗುತ್ತಾಳೆ. ಇದಲ್ಲದೇ ವಿಷ್ಣುವಿನ ಕೃಪೆಯೂ ಸಿಗುವುದಿಲ್ಲ. ಮತ್ತೊಂದೆಡೆ, ಪೊರಕೆಯ ಮೇಲೆ ಕಾಲಿಡುವುದು ಅಥವಾ ಅದನ್ನು ದಾಟುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

ಶಾಸ್ತ್ರಗಳ ಪ್ರಕಾರ, ಪೊರಕೆಯನ್ನು ಮನೆಯಲ್ಲಿ ಯಾರಿಗೂ ಕಾಣದಂತಹ ಸ್ಥಳದಲ್ಲಿ ಇಡಬೇಕು. ಪೊರಕೆಯನ್ನು ಹಾಸಿಗೆಯ ಕೆಳಗೆ ಇಡಬಾರದು. ಇನ್ನು ಸೂರ್ಯಾಸ್ತದ ನಂತರ ಮನೆಯ ಕಸವನ್ನು ಹೊರ ಹಾಕಬಾರದು. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ. ಶಾಸ್ತ್ರಗಳ ಪ್ರಕಾರ, ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಸಲು ಉತ್ತಮ ಮತ್ತು ಮಂಗಳಕರ ದಿನವಾಗಿದೆ. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರೊಂದಿಗೆ ಸಂಪತ್ತು ಬರುತ್ತದೆ. ಅಷ್ಟೇ ಅಲ್ಲ ಲಕ್ಷ್ಮೀಯ ಕೃಪೆಯೂ ಸದಾ ಇರುತ್ತದೆ. ಇನ್ನು  ಕೃಷ್ಣ ಪಕ್ಷದಲ್ಲಿ ಪೊರಕೆ ಕೊಳ್ಳುವುದು ಒಳ್ಳೆಯದು. 

Leave a Reply

Your email address will not be published. Required fields are marked *