ಎಂಥ ಡೊಳ್ಳು ಹೊಟ್ಟೆ ಡೆಲಿವೆರಿ ಆದ ಮೇಲಿನ ಹೊಟ್ಟೆ ಹಳೆಯ ಬೊಜ್ಜು ಕರಗುತ್ತೆ ಹಿಂದೆ ಹೋಗುತ್ತೆ NO ಡಯಟ್ NO ವ್ಯಾಯಾಮ!

0 66

ಬೊಜ್ಜು ಮತ್ತು ಕೊಲೆಸ್ಟ್ರೇಲ್ ಸಂಗ್ರಹಣೆ ಆಗುವುದಕ್ಕೆ ಪ್ರಧಾನವಾಗಿರುವ ಕಾರಣಗಳನ್ನು ಮೊದಲು ತಿಳಿದುಕೊಳ್ಳಬೇಕು. ಆಯುರ್ವೇದ ಸಿದ್ದಂತದ ಪ್ರಕಾರ ಕೊಬ್ಬು ಕೊಲೆಸ್ಟ್ರೇಲ್ ಬೊಜ್ಜು ಹೆಚ್ಚಾಗುವುದಕ್ಕೆ ಕಾರಣ ಆಜೀರ್ಣ. ಮಾನಸಿಕ ಒತ್ತಡದಿಂದ ಕೊಬ್ಬು ಉತ್ಪತ್ತಿಯಾಗುತ್ತದೆ. ಅನಿಯಮಿತವಾದ ಜೀವನ ಶೈಲಿ ಮತ್ತು ನಿದ್ರಾಹಿನತೆ ಸಮಸ್ಸೆ ಯಿಂದ ಕೊಬ್ಬು ಹೆಚ್ಚಾಗುತ್ತದೆ. ಕೊಬ್ಬು ಸಂಗ್ರಹಣೆ ಆಗಬಾರದು ಎಂದರೆ ವರ್ಷಕ್ಕೆ ಒಂದು ಬಾರಿ ಆದರೂ ಪಂಚಾ ಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಸೂಕ್ತ.

ಇನ್ನು ಮನೆಯಲ್ಲಿ ಕೆಲವೊಂದು ಮನೆಮದ್ದು ಮಾಡುವ ಮೂಲಕ ಕೊಂಬನ್ನು ಬೇಗನೆ ಕರಗಿಸಿಕೊಳ್ಳಬಹುದು. ಇನ್ನು ಕಾಯ ಕಲ್ಪ ವಿಧಾನ ಚಿಕಿತ್ಸೆ ಮಾಡಿಸಿದರೆ ನಿಮ್ಮ ದೇಹದಲ್ಲಿ ಇರುವ ಕೊಬ್ಬು ಬೇಗಾ ಕಡಿಮೆ ಆಗುತ್ತದೆ. ಆದಷ್ಟು ಕೊಬ್ಬು ಇಲ್ಲದೆ ಇರುವ ಆಹಾರವನ್ನು ಸೇವನೆ ಮಾಡಬೇಕು. ಒಂದು ವೇಳೆ ನಿಮಗೆ ಆಸಿಡಿಟಿ ಜಾಸ್ತಿ ಇದ್ದರೆ ತರಕಾರಿ ಸೊಪ್ಪುಗಳನ್ನು ಬೇಯಿಸಿಕೊಂಡು ತಿನ್ನಬಹುದು. ಜೊತೆಗೆ ಹಣ್ಣು ಸೇವನೆ ಅಥವಾ ಜ್ಯೂಸ್ ಸೇವನೆ ಮಾಡಬಹುದು. ಈ ರೀತಿ ಒಂದು ತಿಂಗಳು ಮಾಡಬೇಕು.

ಇದರ ಜೊತೆಗೆ ಅಗ್ನಿ ಕರ್ಮ ಚಿಕಿತ್ಸೆಯನ್ನು ಮನೆಯಲ್ಲಿ ಹೇಗೆ ಮಾಡಿಕೊಳ್ಳಬೇಕು ಎಂದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಹೊಕ್ಕಳಿಗೆ ಹರೇಳೆಣ್ಣೆ ಅಥವಾ ಸಾಸಿವೆ ಎಣ್ಣೆಯಿಂದ ಮಾಸಜ್ ಮಾಡಿಕೊಳ್ಳಬೇಕು. ನಂತರ ಹಾಟ್ ವಾಟರ್ ಬ್ಯಾಗ್ ಅನ್ನು ಹೊಟ್ಟೆಯ ಮೇಲೆ ಇಟ್ಟುಕೊಳ್ಳಬೇಕು. ಹೀಗೆ ಬೆಳಗ್ಗೆ ಎದ್ದು ಈ ಕ್ರಿಯೆಯನ್ನು ಮಾಡಬೇಕು. ಆ ಎಣ್ಣೆಯಲ್ಲಿ ಸಾಲಿಂದ್ರ ಲವಣವನ್ನು ಬೆರೆಸಿದರೆ ಲವಣ ತೈಲ ಆಗುತ್ತದೆ ಇದನ್ನು ಹಚ್ಚಿದರೆ ಹೊಟ್ಟೆಯ ಬೊಜ್ಜು ಕೂಡ ಕರಗುತ್ತದೆ. ಇದರ ಜೊತೆಗೆ ಸ್ಟೀಮ್ ಅನ್ನು ತೆಗೆದುಕೊಳ್ಳುವುದು.

ಇನ್ನು ರಾತ್ರಿ ಮಲಗುವ ಸಂದರ್ಭದಲ್ಲಿ ಏನು ಮಾಡಬೇಕು ಎಂದರೆ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿ ಉಜ್ಜಬೇಕು ಮತ್ತು ಹೊಕ್ಕಳಿಗೆ ಸ್ಟೀಮ್ ಅನ್ನು ಕೊಡಬೇಕು. ಇದನ್ನು ಆಹಾರ ಸೇವನೆ ಮಾಡುವ ಒಂದು ಗಂಟೆ ಮುಂಚೆ ಮಾಡಬೇಕು. ಹೀಗೆ ಮಾಡಿದರೆ ಜೀರ್ಣಂಗಾ ವ್ಯವಸ್ತೇ ಕ್ರಿಯಾಶೀಲವಾಗುತ್ತದೆ.

ಇನ್ನು ಒಂದು ಚಮಚ ಹಸಿ ಶುಂಠಿ ರಸ ಮತ್ತು ಒಂದು ಚಮಚ ನಿಂಬೆ ಹಣ್ಣಿನ ರಸ,4 ಚಿಟಿಕೆ ಹಿಂಗು,4 ಚಿಟಿಕೆ ಸಾಲಿಂದ್ರ ಲವಣ ಮತ್ತು ನೀರು ಹಾಕಿ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದು ನಿಮ್ಮ ಜೀರ್ಣಂಗ ಕ್ರಿಯೆಯನ್ನು ಕ್ರಿಯಾಶೀಲಗೊಳಿಸಿ ಸಂಗ್ರಹಣೆ ಆಗಿರುವ ಕೊಬ್ಬನ್ನು ಕರಗಿಸುತ್ತದೆ. ಆದಷ್ಟು ಬೂದು ಕುಂಬಳಕಾಯಿ ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಜ್ಯೂಸ್, ಸೋರೆ ಕಾಯಿ ಜ್ಯೂಸ್ ಸೇವನೆ ಮಾಡಬೇಕು. ಈ 3 ಜ್ಯೂಸ್ ದೇಹದ ತೂಕ ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.

Leave A Reply

Your email address will not be published.