ಎಷ್ಟೇ ಕೊಳೆ ಇರುವ ಕಂಬಳಿ, ಬ್ಲಾಂಕೆಟ್,ಬೆಡ್ ಶಿಟ್ ಅನ್ನು ನಿಮಿಷದಲ್ಲಿ ಹೊಸದಾಗಿಸುವ ಸೂಪರ್ ಟಿಪ್ಸ್ !
ಎಲ್ಲಾರ ಮನೆಯಲ್ಲೂ ಬ್ಲಾಂಕೆಟ್ ಬೆಡ್ ಶೀಟ್ ಹಾಗು ಕಂಬಳಿಗಳು ಇದ್ದೆ ಇದೆ. ಇವುಗಳನ್ನು ಸ್ವಚ್ಛ ಗೊಳಿಸೋದು ಬಹಳಾನೇ ಕಷ್ಟ. ಇನ್ನು ವಾಷಿಂಗ್ ಮಷೀನ್ ಗೆ ಹಾಕಿದರೂ ಕೂಡ ಅಷ್ಟು ಚೆನ್ನಾಗಿ ಕ್ಲೀನ್ ಆಗುವುದಿಲ್ಲ. ಇನ್ನು ಇದನ್ನು ಉಜ್ಜಿ ತೊಳೆಯುವಷ್ಟರಲ್ಲಿ ಕೈ ನೋವು ಬರುತ್ತದೆ. ಜಾಸ್ತಿ ಉಜ್ಜಿದರು ಸಹ ಹೊಸದರಂತೆ ಕಾಣಿಸುವುದಿಲ್ಲ. ಇದೆಲ್ಲಾ ಸಮಸ್ಸೆಗೆ ಒಳ್ಳೆಯ ಸೂಪರ್ ಟಿಪ್ಸ್ ಅನ್ನು ತಿಳಿಸಿಕೊಡುತ್ತೇವೆ. ಈ ಟಿಪ್ಸ್ ಫಾಲೋ ಮಾಡಿದರೆ ಜಾಸ್ತಿ ಉಜ್ಜಿ ತಿಕ್ಕುವ ಅವಶ್ಯಕತೆ ಇರುವುದಿಲ್ಲ.
ಒಂದು ಬಕೆಟ್ ನಲ್ಲಿ ಒಂದು ಬ್ಲಾಂಕೆಟ್ ಒಗೆಯುವಷ್ಟು ಎಷ್ಟು ನೀರು ಬೇಕೋ ಅಷ್ಟು ಹಾಕಿಕೊಳ್ಳಿ. ನಂತರ ಇದಕ್ಕೆ ನಿಮಗೆ ಬೇಕಾದಷ್ಟು ಸೋಪ್ ಪೌಡರ್ ಹಾಕಿ, ಒಂದು ಚಮಚ ಪಾತ್ರೆ ತೊಳೆಯುವ ಲಿಕ್ವಿಡ್, ಸೋಪ್ ಪೌಡರ್ ಎಷ್ಟು ಹಾಕಿದಿರೋ ಅಷ್ಟೇ ಅಡುಗೆ ಸೋಡಾವನ್ನು ಹಾಕಬೇಕು. ಇದಕ್ಕೆ ಒಂದು ಚಮಚ ಉಪ್ಪನ್ನು ಹಾಕಿಕೊಳ್ಳಬೇಕು. ಇದಕ್ಕೆ ಮತ್ತೆ ಒಂದು ಶಂಪೂ ಹಾಕಿ ಮಿಕ್ಸ್ ಮಾಡಿ ಬ್ಲಾಂಕೆಟ್ ಅನ್ನು ಹಾಕಿ ನೆನಸಿಡಬೇಕು. ನಂತರ 3 ಗಂಟೆ ಬಳಿಕ ಇನ್ನೊಂದು ಬಕೆಟ್ ಗೆ ಹಾಕಿಕೊಳ್ಳಿ. ನಂತರ ಒಳ್ಳೆಯ ನೀರಿನಿಂದ ಇದನ್ನು ವಾಶ್ ಮಾಡಿ. ಈ ರೀತಿ ತೊಳೆದರೆ ಬಟ್ಟೆ ಶೈನ್ ಆಗಿರುತ್ತದೆ ಮತ್ತು ಚೆನ್ನಾಗಿ ಕ್ಲೀನ್ ಆಗುತ್ತದೆ