ವಾರದಲ್ಲಿ ಒಮ್ಮೆ ಈ ತರಕಾರಿ ಸೇವಿಸಿ ಸಕ್ಕರೆ ಕಾಯಿಲೆಯಿಂದ ದೂರವಿರಿ!
ನಾವು ಪ್ರತಿದಿನ ಸೇವನೆ ಮಾಡುತ್ತ ಬಂದಿರುವ ಬಹುತೇಕ ಆಹಾರ ಪದಾರ್ಥಗಳು ಅಥವಾ ಹಣ್ಣು ತರಕಾರಿಗಳು ನಮಗೆ ಗೊತ್ತಿಲ್ಲದೇ ಪರೋಕ್ಷವಾಗಿ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಬರದ ಹಾಗೆ ನೋಡಿಕೊಳ್ಳುತ್ತವೆ. ಆದರೆ ಇಂತಹ ಆರೋಗ್ಯಕಾರಿ ಆಹಾರಗಳನ್ನು ಸೇವನೆ ಮಾಡುವುದನ್ನು ಬಿಟ್ಟು ನಾವು ಅನಾರೋಗ್ಯ ಆಹಾರದ ಕಡೆಗೆ ಮುಖ ಮಾಡುತ್ತೇವೆ. ಇದೇ ಕಾರಣಕ್ಕೆ ದಿನ ಹೋದ ಹಾಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಲು ಶುರುವಾಗುತ್ತವೆ.
ನಮ್ಮ ಅನಾರೋಗ್ಯಕಾರಿ, ಜೀವನಶೈಲಿ ಹಾಗೂ ಕೆಲವೊಂದು ಆಹಾರ ಪದಾರ್ಥಗಳನ್ನು ನಾವು ಸರಿಯಾಗಿ ಸೇವನೆ ಮಾಡದೇ ಇರುವುದರಿಂದ, ಈ ಕಾಯಿಲೆಯ ಬಲೆಗೆ ಹೆಚ್ಚಿನವರು ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ! ಒಂದು ವೇಳೆ ಈ ಕಾಯಿಲೆ ನಮ್ಮಲ್ಲಿ ಕಾಣಿಸಿಕೊಂಡರೆ, ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದು ಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ನಮಗೆ ಇಷ್ಟವಿದ್ದರೂ ಕೂಡ ಕೆಲವೊಂದು ಆಹಾರಗಳನ್ನು ಬಿಟ್ಟು ಬಿಡಬೇಕಾ ಗುತ್ತದೆ! ಹೀಗಾಗಿ ಈ ದೀರ್ಘಕಾಲದ ಕಾಯಿಲೆ, ಬರುವುದಕ್ಕೆ ಮುಂಚೆ ಎಚ್ಚೆತ್ತುಕೊಂಡು ಬರದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ…
ಸಕ್ಕರೆಕಾಯಿಲೆಯನ್ನು ಕಂಟ್ರೋಲ್ನಲ್ಲಿಡಬಹುದು ಅಷ್ಟೇ…
ಮೊದಲೇ ಹೇಳಿದ ಹಾಗೆ, ಈ ಸಕ್ಕರೆಕಾಯಿಲೆಯನ್ನು ಮಾಡಲು ಸಂಪೂರ್ಣವಾಗಿ ಸಾಧ್ಯವಿಲ್ಲ! ಆದರೆ ಅದನ್ನು ನಿಯಂತ್ರಣದಲ್ಲಿ ಇಡಬಹುದು, ಅಷ್ಟೇ ಅಲ್ಲದೆ ಈ ಕಾಯಿಲೆಯನ್ನು ಬರದಂತೆ ತಡೆಯಲು ಕೂಡ ಸಾಧ್ಯವಿದೆ. ಇದಕ್ಕಾಗಿ ಸರಿಯಾದ ಜೀವನಶೈಲಿಯ ಜೊತೆಗೆ ಆರೋಗ್ಯಕಾರಿ ಆಹಾರವು ಅತೀ ಅಗತ್ಯ.
ಇದಕ್ಕಾಗಿ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಕೆಲವೊಂದು ಹಸಿರೆಲೆ ತರಕಾರಿಗಳನ್ನು ಬಳಸಿ ದರೆ ಖಂಡಿತವಾಗಿಯೂ ಸಕ್ಕರೆಕಾಯಿಲೆ ಬರದಂತೆ ತಡೆಯಬಹುದು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಎಲೆಕೋಸು ಅಥವಾ ಕ್ಯಾಬೇಜ್. ಇದನ್ನು ಪಲ್ಯ ಅಥವಾ ನಮ್ಮ ದೈನಂದಿನ ತರಕಾರಿ ಸಲಾಡ್‌ಗಳಲ್ಲಿ ಬಳಸಿಕೊಂಡರೆ ಬಹಳ ಒಳ್ಳೆಯದು.
ಎಲೆಕೋಸಿನಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳು
ಎಲೆಕೋಸಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕಂಡು ಬರುತ್ತದೆ. ಉದಾಹರಣೆಗೆ ನೋಡುವುದಾದರೆ, ವಿಟಮಿನ್ ಕೆ, ವಿಟಮಿನ್ ಬಿ6, ವಿಟಮಿನ್ ಸಿ ಜೊತೆಗೆ ಮ್ಯಾಂಗನೀಸ್, ಪೊಟ್ಯಾಶಿಯಂ, ನಾರಿನಾಂಶ, ತಾಮ್ರದ ಅಂಶ ಕೂಡ ಕಂಡು ಬರುತ್ತವೆ.
ಅಷ್ಟೇ ಅಲ್ಲದೆ ಈ ಎಲೆ ತರಕಾರಿಯಲ್ಲಿ ನಯಾಸಿನ್, ಸೆಲೆನಿಯಂ, ಖನಿಜಾಂಶಗಳು, ಮೆಗ್ನೀಷಿಯಂ, ಕ್ಯಾಲ್ಸಿಯಂ, ಪ್ರೋಟೀನ್ ಅಂಶ ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ, ಆರೋಗ್ಯದಲ್ಲಿ ಯಾವುದೇ ರೀತಿಯ ಪೌಷ್ಟಿಕ ಸತ್ವಗಳು ಕಮ್ಮಿ ಆಗದಂತೆ ನೋಡಿಕೊಳ್ಳುತ್ತದೆ.
ಸಕ್ಕರೆ ಕಾಯಿಲೆ ಇದ್ದವರಿಗೆ ಎಲೆಕೋಸು ತುಂಬಾನೇ ಒಳ್ಳೆಯದು
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಧುಮೇಹ ಅಥವಾ ಸಕ್ಕರೆಕಾಯಿಲೆ ಇದ್ದವರು, ಮಿತವಾಗಿ, ಎಲೆಕೋಸು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು. ಇದರಲ್ಲಿರುವ ‘ ಬೆಟಲೈನ್’ ಎಂಬ ನೈಸರ್ಗಿಕ ಅಂಶ, ರಕ್ತದಲ್ಲಿನ ಸಕ್ಕರೆಮಟ್ಟವನ್ನು ಕಡಿಮೆ ಮಾಡಿ, ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ.
ಈ ವಿಷ್ಯ ನೆನೆಪಿರಲಿ ಯಾವಾಗ ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಕಡಿಮೆ ಆಗುತ್ತಾ ಹೋಗುತ್ತ ದೆಯೋ, ಅಂತಹ ಸಂದರ್ಭದಲ್ಲಿ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಶೇಖರಣೆ ಆಗುತ್ತಾ ಹೋಗು ತ್ತದೆ. ಹೀಗಾಗಿ ಮಧುಮೇಹ ಇರುವವರು ಆದಷ್ಟು ತಮ್ಮ ಆಹಾರಪದ್ಧತಿಯಲ್ಲಿ, ಎಲೆ ಕೋಸನ್ನು ಸೇರಿಸಿಕೊಳ್ಳುವುದರಿಂದ, ಈ ಕಾಯಿಲೆಯನ್ನು ನಿಯಂತ್ರಣ ಮಾಡಬಹುದು.
ಮಧುಮೇಹ ರೋಗಿಗಳಿಗೆ ಕಿಡ್ನಿ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ
ಇನ್ನು ಎಲೆಕೋಸಿನಲ್ಲಿ ವಿಟಮಿನ್ ಸಿ ಹಾಗೂ ನಾರಿನಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದ ರಿಂದ ಜೀರ್ಣ ಪ್ರಕ್ರಿಯೆಯನ್ನು ಚುರಕುಗೊಳಸಿ, ಕಿಡ್ನಿಗಳ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿ ಕೊಳ್ಳುತ್ತದೆ. ಇದರಿಂದ ಮಧುಮೇಹ ರೋಗಿಗಳಿಗೆ ತುಂಬಾನೇ ಲಾಭವಿದೆ.
ಯಾಕೆಂದರೆ, ಮಧುಮೇಹ ಇರುವ ರೋಗಿಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ, ಹೆಚ್ಚಾಗುತ್ತಾ ಹೋಗುತ್ತಿ ದ್ದಂತೆ, ಕಿಡ್ನಿಯು ಅದನ್ನು ಹೊರಗೆ ಹಾಕಲು ಪ್ರಯತ್ನಿಸುವುದು. ಇದರಿಂದಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ನಿರ್ಜಲೀ ಕರಣ ಸಮಸ್ಯೆ ಉಂಟಾಗಬಹುದು. ಒಂದು ವೇಳೆ ನಿರ್ಜಲೀಕರಣ ಸಮಸ್ಯೆ ಎದುರಾದರೆ, ರಕ್ತ ಹೆಪ್ಪು ಗಟ್ಟುವುದು ಮಾತ್ರವಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡ ಏರಿಕೆ ಕಂಡು ಬರಬಹುದು.
ಎಲೆಕೋಸು ಸೇವನೆ ಮಾಡುವ ವಿಧಾನ
ವಾರದಲ್ಲಿ ಎರಡು ಬಾರಿಯಾದರೂ ಪಲ್ಯ ಅಥವಾ ದೈನಂದಿನ ಸಲಾಡ್ ಗಳಲ್ಲಿ ಇದನ್ನು ಬಳಸಿ ಕೊಳ್ಳಬಹುದು.
ಇಲ್ಲಾಂದ್ರೆ ಇದರ ಜ್ಯೂಸ್ ಮಾಡಿ ಕೂಡ ಸೇವಿಸಬಹುದು.
ನಿಮಗೆ ತರಕಾರಿ ಸಲಾಡ್, ಇಷ್ಟ ಎಂದಾದರೆ ಇದನ್ನು ಬೇಯಿಸಿ, ಅದಕ್ಕೆ ಲಿಂಬೆ ಹಾಗೂ ಚಿಟಿಕೆ ಯಷ್ಟು ಉಪ್ಪು ಹಾಕಿ ಕೂಡ ಸೇವಿಸಬಹುದು.