ಧನ ಆಕರ್ಷಣೆಗೆ ದೃಷ್ಟಿ ದೋಷಕ್ಕೆ ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ವಿವಾರವಾದ ಮಾಹಿತಿ!

0 3,736

ಮನೆಯಲ್ಲಿ ಮಹಾಲಕ್ಷ್ಮಿ ಅನುಗ್ರಹ ಇರಬೇಕು ಎಂದು ಎಲ್ಲಾರು ಅಂದುಕೊಳ್ಳುತ್ತಾರೆ. ಅದೇ ರೀತಿ ವ್ಯಾಪಾರ ಸ್ಥಳದಲ್ಲಿ ಲಕ್ಷ್ಮಿ ಅನುಗ್ರಹ ಬೇಕಾಗುತ್ತದೆ. ಅದೇ ರೀತಿ ನಷ್ಟ ಇಲ್ಲದ ಲಾಭದ ವ್ಯಾಪಾರ ಆಗಿರಬೇಕು ಮತ್ತು ನಷ್ಟವಿಲ್ಲದ ನೆಮ್ಮದಿ ಜೀವನ ಬದುಕಬೇಕು ಎಂದರೆ ಈ ರೀತಿ ಅನುಸರಿಸಿ. ಇದನ್ನು ಉರುಳಿ ಎಂದು ಹೇಳುತ್ತಾರೆ. ಇದನ್ನು ಮನೆಗೆ ಬಂದ ತಕ್ಷಣ ಕಾಣಿಸುವ ರೀತಿ ಇರಬಹುದು ಮತ್ತು ಅಂಗಡಿಗಳಲ್ಲಿ ಇಡಬಹುದು, ಬಾಗಿಲ ಬಳಿ ಇಡಬಹುದು ಹಾಗು ನೈರುತ್ಯ ಮೂಲೆಯಲ್ಲಿ ಇಡಬಹುದು ಅಥವಾ ಮನೆಯ ನಡು ಮನೆಯಲ್ಲಿ ಸಹ ಇಡಬಹುದು.

ಆ ಸುತ್ತ ಮುತ್ತಲಿನ ವಾತಾವರಣದಲ್ಲಿ ಪಾಸಿಟಿವ್ ವೈಬ್ರೇಶನ್ ತರುವ ಶಕ್ತಿ ಈ ಉರುಳಿಯಲ್ಲಿ ಇದೆ ಹಾಗು ಕೆಟ್ಟ ದೃಷ್ಟಿಯನ್ನು ಸಹ ದೂರ ಮಾಡುತ್ತದೆ. ಇದನ್ನು ಮಣ್ಣಿನ ಪೊಟ್ ನಲ್ಲಿ ಇಡಬಹುದು, ಹಿತ್ತಾಳೆ, ಪಂಚಾಲೋಹ, ಪಿಂಗಣಿ ಮತ್ತು ಕನ್ನಡಿ ಬೋಟ್ಟಲಿನಲ್ಲಿ ಸಹ ಇಡಬಹುದು. ಇದನ್ನು ಪ್ಲಾಸ್ಟಿಕ್ ಮತ್ತು ಸ್ಟೀಲ್, ಕಬ್ಬಿಣ ನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು. ಶುದ್ಧವಾದ ನೀರಿನಲ್ಲಿ ಇಡಬೇಕು. ತಾವರೆ ಸೇವಂತಿಗೆ ಮಲ್ಲಿಗೆ ಗುಲಾಬಿ ಮತ್ತು ಸುವಾಸನೆ ಇರುವ ಹೂವುಗಳನ್ನು ಹಾಕಿ ಇಡಬಹುದು.

ಇನ್ನು ಇದರ ಜೊತೆ ಕೆಲವು ವಸ್ತುಗಳನ್ನು ಹಾಕಿ ಇಟ್ಟರೆ ಇನ್ನು ಒಳ್ಳೆಯದು. ಅರಿಶಿನ ಪುಡಿ, 2 ಏಲಕ್ಕಿ, ಪಂಚ್ಚ ಕರ್ಪೂರ, ಜವಾದ್ ಪೌಡರ್ ಈ ವಸ್ತುಗಳನ್ನು ಹಾಕಿದರೆ ಇನ್ನು ದೈವಿಕವಾಗಿ ಇರುತ್ತದೆ. ಇದರ ಜೊತೆಗೆ ಲಾವಂಚದ ಬೇರನ್ನು ಹಾಕಬಹುದು. ಈ ನೀರು ಮತ್ತು ಹೂವುಗಳನ್ನು ಪ್ರತಿದಿನ ಬದಲಾಯಿಸಬ ಹುದು ಅಥವಾ ಎರಡು ದಿನಕ್ಕೆ ಒಂದು ಸಲ ಆದರೂ ಬಳಸಬಹುದು. ನೀರು ಮತ್ತು ಹೂವು ಯಾವಾಗಲು ಫ್ರೆಶ್ ಆಗಿ ಇದ್ದರೆ ಉತ್ತಮ.

Leave A Reply

Your email address will not be published.